ಡೇಂಜರಸ್ ಕಿಕಿ ಚಾಲೆಂಜ್ ಗೇಮ್ ಗೆ ಮಗನನ್ನು ಪ್ರೋತ್ಸಾಹಿಸಿದ ಇನ್ಸ್ ಪೆಕ್ಟರ್!
ಚಿಕ್ಕಮಗಳೂರು, ಆಗಸ್ಟ್.01: ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ತಮ್ಮ 10 ವರ್ಷದ ಮಗನಿಂದ ಅಪಾಯಕಾರಿ ಡೆಡ್ಲಿ ಕಿಕಿ ಚಾಲೆಂಜ್ ಗೇಮ್ ಮಾಡಿಸಿದ್ದು,
ಆ ಕಿಕಿ ಚಾಲೆಂಜ್ ಗೇಮ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ವಿಡಿಯೋ ನೋಡಿದ ಸಾರ್ವಜನಿಕರು ಇದೀಗ ಅಪಾಯಕಾರಿ ಡೆಡ್ಲಿ ಗೇಮ್ ಗೆ ಪ್ರೋತ್ಸಾಹ ನೀಡಿದ ಇನ್ಸ್ ಪೆಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ಸ್ ಪೆಕ್ಟರ್ ಸಲೀಂ ಅವರ ಪುತ್ರ ಆರ್ಯನ್ ಅಬ್ಬಾಸ್ ನಿಂದ ಕಿಕಿ ಡಾನ್ಸ್ ಮಾಡಿಸಿದ್ದು, ಪುತ್ರನ ಕಿಕಿ ಚಾಲೆಂಜ್ ಡ್ಯಾನ್ಸ್ ಅನ್ನು ಇನ್ಸ್ ಪೆಕ್ಟರ್ ಫೇಸ್ ಬುಕ್ ನಲ್ಲಿ ಪೊಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ತಾಣದಲ್ಲಿ ಫುಲ್ ವೈರಲ್ ಆಗಿದೆ.

ಮಗನ ಕಿಕಿ ಡ್ಯಾನ್ಸ್ ವಿಡಿಯೋದೊಂದಿಗೆ ಕಿಕಿ ಚಾಲೆಂಜ್ ಇನ್ ಮೈ ಫೀಲಿಂಗ್ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಇನ್ಸ್ ಪೆಕ್ಟರ್ ಸಲೀಂಗೆ "ಕಾನೂನು ಕಾಪಾಡಿ ಬುದ್ಧಿ ಹೇಳಬೇಕಾದ ನೀವೇ ಹೀಗೆ ಮಾಡಿದ್ರೆ ಹೇಗೆ" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಸಾರ್ವಜನಿಕರು.












Click it and Unblock the Notifications