ಕರ್ನಾಟಕಕ್ಕೆ ರೈಲ್ವೆ ಇಲಾಖೆ ಭರ್ಜರಿ ಗುಡ್‌ ನ್ಯೂಸ್‌: ರಾಜ್ಯದ ಬಹುಮುಖ್ಯ ಯೋಜನೆಗಳಿಗೆ ಕೋಟಿ.. ಕೋಟಿ ರೂ. ಅನುಮೋದನೆ

Indian Railways: ರಾಜ್ಯದಲ್ಲಿ ರೈಲ್ವೆ ಕಾಮಗಾರಿಯಲ್ಲಿ ಕ್ರಾಂತಿ ಆಗುತ್ತಿದ್ದು, ಇದರ ಜಾಲ ವಿಸ್ತರಣೆ ಆಗುತ್ತಲೇ ಇದೆ. ಇನ್ನೂ ಇದೀಗ ಕೇಂದ್ರ ಸಚಿವಾಲಯ ಕರ್ನಾಟಕಕ್ಕೆ ಕೋಟಿ.. ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಿದೆ. ಹಾಗಾದ್ರೆ, ಎಷ್ಟು ಕೋಟಿ ಎನ್ನುವ ಸಂಪೂರ್ಣ ಮಾಹಿತಿ ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಅಧ್ಯಕ್ಷತೆ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಈ ವೇಳೆ ಒಟ್ಟು 12,328 ಕೋಟಿ ರೂಪಾಯಿ ವೆಚ್ಚದ ಕೇಂದ್ರ ಸಚಿವಾಲಯದ ನಾಲ್ಕು ಯೋಜನೆಗಳಿಗೆ ಅನುಮೋದನೆ ನೀಡಿದೆ. ಹಾಗಾದ್ರೆ ಇದರಲ್ಲಿ ಕರ್ನಾಟಕದ ಪಾಲೆಷ್ಟು ಎನ್ನುವ ಪ್ರಶ್ನೆಗಳು ಬಹುತೇಕರ ತಲೆಯಲ್ಲಿ ಬಂದಿರುತ್ತದೆ. ಹಾಗಾದ್ರೆ ಇದಕ್ಕೆಲ್ಲ ಉತ್ತರ ಕೆಳಗೆ ನೀಡಲಾಗಿದೆ ತಿಳಿಯಿರಿ.

Indian railways Big Good News for Karnataka Multi-Cr Approval for Key Projects

ಈ ಪೈಕಿ ಬಹುಪಥ ರೈಲ್ವೆ ಯೋಜನೆಯಿಂದ ಕರ್ನಾಟಕ, ತೆಲಾಂಗಣ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳಿಗೆ ಪ್ರಯೋಜನೆ ಆಗಲಿದೆ. ಅಷ್ಟೇ ಅಲ್ಲದೆ, ಗುಜರಾತ್‌ನ ಕಚ್‌ನಲ್ಲಿ ಹೊಸ ರೈಲು ಮಾರ್ಗ ನಿರ್ಮಾಣ ಮಾಡಲು ಅನುಮೋದನೆ ನೀಡಲಾಗಿದೆ. ಈ ಮಹತ್ವದ ಬಹುಪಥ ಯೋಜನೆಯು ಸುಮಾರು 3,108 ಹಳ್ಳಿಗಳಿಗೆ ಸಂಪರ್ಕ ಒದಗಿಸಲಿದ್ದು, ಸರಿಸುಮಾರು 47.34 ಲಕ್ಷ ಜನರಿಗೆ ಅನುಕೂಲ ಆದಂತಾಗಲಿದೆ.

ಇದೀಗ ಕರ್ನಾಟಕದಲ್ಲಿ ರೈಲ್ವೆ ವಿಭಾಗದಲ್ಲಿ ದೊಡ್ಡ ಮಟ್ಟದ ಕ್ರಾಂತಿ ಆಗುತ್ತಿದೆ. ಕರ್ನಾಟಕದ ಕಲಬುರಗಿ, ತೆಲಂಗಾಣ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳಿಗೆ ಪ್ರಯೋಜನ ನೀಡುವ ಈ ಯೋಜನೆಯ ವೆಚ್ಚ 5,012 ಕೋಟಿ ರೂಪಾಯಿ ಆಗಿದೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ವ್ಯಾಪಿಸಿರುವ 173 ಕಿಲೋ ಮೀಟರ್ ಉದ್ದದ ಸಿಕಂದರಾಬಾದ್ 3 ಮತ್ತು 4ನೇ ಮಾರ್ಗದ ಪೂರ್ಣಗೊಳ್ಳುವ 5 ವರ್ಷ ಆಗಿದೆ ಎಂದು ತಿಳಿದುಬಂದಿದೆ. ಇನ್ನೂ ಈಗಾಗಲೇ ಕರ್ನಾಟಕದಲ್ಲಿ ರೈಲ್ವೆ ವಿಭಾಗದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+