ಕರ್ನಾಟಕದಲ್ಲಿ ರೈಲು ಸಂಚಾರ ಶುರು: ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು, ಮೇ.22: ನೊವೆಲ್ ಕೊರೊನಾ ವೈರಸ್ ಹಾಗೂ ನಾಲ್ಕನೇ ಅವಧಿಯ ಭಾರತ ಲಾಕ್ ಡೌನ್ ನಡುವೆ ಕರ್ನಾಟಕದಲ್ಲೂ ಎರಡು ವಿಶೇಷ ರೈಲುಗಳ ಸಂಚಾರ ಶುಕ್ರವಾರದಿಂದಲೇ ಆರಂಭವಾಗಿದೆ. ಬೆಂಗಳೂರಿನಿಂದ ಮೈಸೂರು ಮತ್ತು ಬೆಳಗಾವಿಗೆ ಎರಡು ರೈಲುಗಳು ಸಂಚಾರ ನಡೆಸಿವೆ.

Recommended Video

      ಏನ್ರೀ ಹೀಗಾ ನಡ್ಕೊಳ್ಳೋದು? ಹೊರ ರಾಜ್ಯದವರ ಜೊತೆ ಅಸಭ್ಯತೆ ತೋರಿದ ರೈಲ್ವೆ ಸಿಬ್ಬಂದಿ | Oneindia Kannada

      ಬೆಂಗಳೂರಿನಿಂದ ಬೆಳಗಾವಿಗೆ ಹೊರಡಲಿರುವ ವಿಶೇಷ ರೈಲು ಬೆಳಗ್ಗೆ 8 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಡಲಿದೆ. ಈ ವಿಶೇಷ ರೈಲು ಸಂಜೆ 6.30ಕ್ಕೆ ಬೆಳಗಾವಿಯನ್ನು ತಲುಪಲಿದೆ. ಒಂದು ವಾರದಲ್ಲಿ ಮೂರು ದಿನ ಈ ವಿಶೇಷ ರೈಲು ಬೆಳಗಾವಿಗೆ ಸಂಚರಿಸಲಿದೆ.

      ಬೆಂಗಳೂರಿನಿಂದ ಮೈಸೂರಿಗೆ ಮತ್ತೊಂದು ವಿಶೇಷ ರೈಲಿನ ಸಂಚಾರ ಇಂದಿನಿಂದ ಆರಂಭವಾಗಲಿದೆ. ಬೆಳಗ್ಗೆ 9.20ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಶೇಷ ರೈಲು ಸಂಚಾರ ಆರಂಭಿಸಲಿದ್ದು, ಮಧ್ಯಾಹ್ನ 12 ಗಂಟೆಗೆ ಮೈಸೂರಿಗೆ ತಲುಪಲಿದೆ. ಮೈಸೂರಿನಿಂದ ಅದೇ ರೈಲು ಮಧ್ಯಾಹ್ನ 1.45ಕ್ಕೆ ವಾಪಸ್ ಬೆಂಗಳೂರಿಗೆ ಹೊರಡಲಿದ್ದು, ಸಂಜೆ 5 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದು ಸೇರಲಿದೆ.

       Indian Railway: 2 Special Train Run From Bengaluru To Belagavi And Mysore From May.22

      ರೈಲ್ವೆ ಸೇವಾ ಕೇಂದ್ರಗಳಲ್ಲಿ ಬುಕ್ಕಿಂಗ್:

      ದೇಶಾದ್ಯಂತ ಜೂನ್.01ರಿಂದ 200 ವಿಶೇಷ ರೈಲುಗಳು ಸಂಚಾರ ಆರಂಭಿಸಲಿವೆ. ಇದೀಗ ಶುಕ್ರವಾರದಿಂದಲೇ ರಾಜ್ಯದಲ್ಲಿ ಎರಡು ವಿಶೇಷ ರೈಲುಗಳ ಸಂಚಾರ ಆರಂಭವಾಗಿದೆ. ಇದರ ಮಧ್ಯೆ ರೈಲ್ವೆ ಸೇವಾ ಕೇಂದ್ರಗಳಲ್ಲಿ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಈ ಮೊದಲು ಆನ್ ಲೈನ್ ನಲ್ಲಿ ಮಾತ್ರ ರೈಲ್ವೆ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+