karnataka Rains: ಮುಂದಿನ 3 ದಿನ ರಾಜ್ಯಾದ್ಯಂತ ಭಾರೀ ಮಳೆ: ದಕ್ಷಿಣ ಭಾರತದ ವಿವಿಧೆಡೆ ವರುಣಾರ್ಭಟ

ರಾಜ್ಯದಲ್ಲಿ ಅಕ್ಟೋಬರ್ ಆರಂಭದಲ್ಲಿ ಅರ್ಭಟಿಸಿದ್ದ ಮಳೆ ನವೆಂಬರ್‌ ತಿಂಗಳ ಆರಂಭದಲ್ಲಿ ಕೊಂಚ ಬಿಡುವು ಪಡೆದುಕೊಂಡಿದೆ. ನವೆಂಬರ್ ತಿಂಗಳಾರಂಭದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಹವಮಾನ ವರದಿ ಪ್ರಕಾರ ಮುಂದಿನ 3 ದಿನ ರಾಜ್ಯಾದ್ಯಂತ ಮಳೆ ನಿರೀಕ್ಷೆ ಇಲ್ಲ. ಆದರೆ ಅಲ್ಲಲ್ಲಿ ಸಾಧಾರಣ ಅಥವಾ ತುಂತುರು ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ.

ನವೆಂಬರ್‌ 11ರಂದು ಮಂಡ್ಯ, ಮೈಸೂರು, ಕೊಡಗು, ಚಿಕ್ಕಮಗಳೂರು, ಬೆಂಗಳೂರು, ಹಾಸನ, ತುಮಕೂರು, ಕೋಲಾರ, ಚಾಮರಾಜನಗರ ಮತ್ತು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಸೃಷ್ಟಿಯಾಗಿದ್ದು, ಶ್ರೀಲಂಕಾ ಹಾಗೂ ತಮಿಳುನಾಡು ಭಾಗದಲ್ಲಿ ಚಂಡಮಾರುತ ಹಾದು ಹೋಗುವ ನಿರೀಕ್ಷೆ ಇದೆ. ಇದರಿಂದಾಗಿ ಮುಂದಿನ 48 ಗಂಟೆಯಲ್ಲಿ ದಕ್ಷಿಣ ಭಾರತದ ವಿವಿಧೆಡೆ ಧಾರಾಕಾರ ಮಳೆಯಾಗುವ ಸೂಚನೆ ಇದೆ.

Indian Meteorological Department has predicted Heavy rains across karnataka next 3 days

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ನವೆಂಬರ್‌ 12ರಂದು ಹಗುರ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ರಾಜ್ಯಾದ್ಯಂತ 24ಕ್ಕೂ ಅಧಿಕ ಜಿಲ್ಲೆಗಳಲ್ಲಿ ನವೆಂಬರ್ 13ರಿಂದ ಭಾರೀ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ, ಮಂಡ್ಯ, ಮೈಸೂರು, ಕೊಡಗು, ಕೋಲಾರ, ತುಮಕೂರು, ವಿಜಯನಗರ, ದಾವಣಗೆರೆ, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮಳೆಯಾಗಲಿದೆ.

ಇನ್ನೂ ಬೆಂಗಳೂರಿನಲ್ಲಿ ನವೆಂಬರ್ 19ರವರೆಗೆ 30 ಮಿಮೀ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಕೊಡಗು, ದಕ್ಷಿಣ ಕನ್ನಡ, ಉಡುಪಿ ಘಟ್ಟಗಳು, ಚಿಕ್ಕಮಗಳೂರು ಪ್ರದೇಶಗಳಲ್ಲಿ 70ಮಿಮೀ ಮಳೆಯಾಗುವ ನಿರೀಕ್ಷೆ ಇದ್ದು, ಕರ್ನಾಟಕ ದಕ್ಷಿಣ ಒಳ ನಾಡಿನ ಪ್ರದೇಶಗಳಲ್ಲಿ 25-30mm ಮಳೆ ಬೀಳುವ ನಿರೀಕ್ಷೆ ಇದೆ.

ದೆಹಲಿ ಹವಾಮಾನ ಸುದ್ದಿ

ದೆಹಲಿ-ಎನ್‌ಸಿಆರ್‌ನಲ್ಲಿ ಮಂಜುಗಟ್ಟುವ ಪರಿಣಾಮ ಶೀಘ್ರದಲ್ಲೇ ಗೋಚರಿಸಲಿದೆ. ಪ್ರಸ್ತುತ ಹವಾಮಾನ ಸ್ವಲ್ಪ ಬೆಚ್ಚಗಿರುತ್ತದೆ. ಆದರೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂದಿನ ಮೂರು-ನಾಲ್ಕು ದಿನಗಳಲ್ಲಿ ದೆಹಲಿ ಚಳಿಯನ್ನು ಅನುಭವಿಸಲಿದೆ ಎಂದು ಹೇಳಿದೆ.

ಪರ್ವತಗಳ ಮೇಲೆ ಪಶ್ಚಿಮದ ಅಡಚಣೆಯು ಸಕ್ರಿಯವಾಗಿರುವ ಸಾಧ್ಯತೆಯಿದ್ದು ಎತ್ತರದ ಪ್ರದೇಶಗಳಲ್ಲಿ ಮಳೆ ಮತ್ತು ಹಿಮಪಾತವನ್ನು ಉಂಟುಮಾಡಬಹುದು. ಇದು ಬಯಲು ಸೀಮೆಯ ಮೇಲೂ ಪರಿಣಾಮ ಬೀರಲಿದ್ದು, ದೆಹಲಿ-ಎನ್ ಸಿಆರ್ ನಲ್ಲಿ ಚಳಿ ಹೆಚ್ಚಾಗಲಿದೆ.

ಪರ್ವತಗಳ ಮೇಲೆ ಹಿಮಪಾತ

ಒಂದು ಅಥವಾ ಎರಡು ದಿನಗಳಲ್ಲಿ ಪಶ್ಚಿಮದ ಅಡಚಣೆಯಿಂದಾಗಿ ಪರ್ವತಗಳಲ್ಲಿ ಲಘು ಹಿಮಪಾತ ಮತ್ತು ಮಳೆಯಾಗುವ ಸಾಧ್ಯತೆಗಳಿವೆ. ಕೆಲವು ದಿನಗಳ ನಂತರ, ಇದರ ಪರಿಣಾಮವನ್ನು ದೆಹಲಿ-ಎನ್‌ಸಿಆರ್‌ನಲ್ಲಿಯೂ ಕಾಣಬಹುದು, ಇದರಿಂದಾಗಿ ತಾಪಮಾನವು ಕುಸಿಯುತ್ತದೆ ಮತ್ತು ಗಾಳಿಯಲ್ಲಿ ತಂಪು ಹೆಚ್ಚಾಗುತ್ತದೆ.

ದೆಹಲಿಯಲ್ಲಿ ಹವಾಮಾನ ಹೇಗಿರುತ್ತದೆ?

ಹವಾಮಾನ ಇಲಾಖೆ ಸೋಮವಾರ ಲಘು ಮಂಜು ಆವರಿಸುವ ಮುನ್ಸೂಚನೆ ನೀಡಿದೆ. ಬೆಳಿಗ್ಗೆ ಮತ್ತು ರಾತ್ರಿಯಲ್ಲಿ ಸ್ವಲ್ಪ ಮಂಜು ಇರಬಹುದು, ಆದರೆ ಹಗಲಿನಲ್ಲಿ ಆಕಾಶವು ಸ್ಪಷ್ಟವಾಗಿರುತ್ತದೆ. ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಎಂದು ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+