ಉಗ್ರರ ಭೀತಿ ನಡುವೆ ಕ್ರಿಸ್ಮಸ್, ಹೊಸ ವರ್ಷ ಆಚರಣೆ
ನವದೆಹಲಿ, ಡಿ.24: ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆಯನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಮೂಲದ ಇಂಡಿಯನ್ ಮುಜಾ ಹಿದ್ದೀನ್ ಉಗ್ರಗಾಮಿ ಸಂಘಟನೆ ದೇಶದ ವಿವಿಧೆಡೆ ಭಾರಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಆದರೆ, ಕ್ರಿಸ್ಮಸ್ ಆಚರಣೆಗೆ ಯಾವುದೇ ರೀತಿ ಅಡ್ಡಿ ಉಂಟಾಗಿಲ್ಲ, ಜನರು ಭಯಭೀತರಾಗಬೇಕಿಲ್ಲ ಎಂದು ಪೊಲೀಸ್ ಇಲಾಖೆ ಭರವಸೆ ನೀಡಿದೆ.
ನವದೆಹಲಿ, ರಾಜಸ್ಥಾನ, ಗೋವಾ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧೆಡೆ ದಾಳಿ ನಡೆಸಲು ಇಂಡಿಯನ್ ಮುಜಾಹಿದ್ದೀನ್ ಉಗ್ರರು ಸಂಚು ರೂಪಿಸಿರುವುದನ್ನು ಗುಪ್ತಚರ ಇಲಾಖೆ(IB) ಪತ್ತೆ ಮಾಡಿದೆ. ಕೆಲ ತಿಂಗಳ ಹಿಂದೆಯಷ್ಟೇ ಭಾರತ-ನೇಪಾಳ ಗಡಿಯಲ್ಲಿ ಬಂಧಿಸಲ್ಪಟ್ಟ ಇಂಡಿಯನ್ ಮುಜಾಹಿದ್ದೀನ್ ಸಹಸಂಸ್ಥಾಪಕ ಹಾಗೂ ಕರ್ನಾಟಕ ಮೂಲದ ಉಗ್ರ ಯಾಸಿನ್ ಭಟ್ಕಳ್ ಬಂಧನಕ್ಕೆ ಪ್ರತೀಕಾರವಾಗಿ ಉಗ್ರರು ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಶೇಷವಾಗಿ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆಗೆ ಭಾರತಕ್ಕೆ ಆಗಮಿಸುವ ಯಹೂದಿಗಳು ಮತ್ತು ಅಮೆರಿಕ ಪ್ರಜೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವುದು ಉಗ್ರರ ಯೋಜನೆಯಾಗಿದೆ. ದೆಹಲಿ, ಜೈಪುರ, ಅಹಮದಾಬಾದ್, ಸೂರತ್, ಪಣಜಿ, ಮುಂಬೈ, ಬೆಂಗಳೂರು, ಮಂಗಳೂರು, ಕಾರವಾರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವಿದೇಶಿಯರು, ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ಬಾಂಬ್ ದಾಳಿ ನಡೆಸಲು ಈ ಉಗ್ರರು ಸದ್ದಿಲ್ಲದೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಹಿರಿಯ ಅಧಿಕಾರಿಗಳು, ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಎಲ್ಲಾ ರಾಜ್ಯಗಳಿಗೆ ಮೌಖಿಕ ಸೂಚನೆ ನೀಡಿದ್ದು, ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ವೇಳೆ ಹೆಚ್ಚಿನ ಭದ್ರತೆ ಒದಗಿಸುವಂತೆ ಸೂಚಿಸಿದ್ದಾರೆ. ಇದೆಲ್ಲದರ ನಡುವೆ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಕ್ರಿಸ್ ಮಸ್ ಗಾಗಿ ತಯಾರಿ ಭರ್ಜರಿಯಾಗಿ ನಡೆದಿದೆ. ಕ್ರಿಸ್ಮಸ್ ತಾತಾನ ಚಿತ್ರಗಳು ಸೇರಿದಂತೆ ಯೇಸು ಕ್ರಿಸ್ತನ ಜನ್ಮದಿನಾಚರಣೆ ಅಂಗವಾಗಿ ನಡೆದಿರುವ ತಯಾರಿ ಚಿತ್ರಗಳನ್ನು ಮುಂದೆ ನೋಡಿ...

ಬೆಂಗಳೂರಿನಲ್ಲಿ
ನಗರದ ವಿವಿಧ ಕಚೇರಿಗಳಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ, ಹೊಸ ವರ್ಷದ ಸ್ವಾಗತ ಕಾರ್ಯಕ್ರಮಗಳು ಭರದಿಂದ ಸಾಗಿವೆ.

ಶಾಲೆಗಳಲ್ಲಿ ಸಂಭ್ರಮ
ಗುರ್ ಗಾಂವ್ ನ ಶಾಲೆಯೊಂದರಲ್ಲಿ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳು ಸಾಂಟಾ ಕ್ಲಾಸ್ ದಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ.

ಅಲಹಾಬಾದಿನಲ್ಲಿ ಶಾಪಿಂಗ್
ಕ್ರಿಸ್ಮಸ್ ಅಂಗವಾಗಿ ಅಲಹಾಬಾದಿನಲ್ಲಿ ಯುವತಿಯರು ಆಭರಣ, ಉಡುಗೊರೆ, ಸಿಹಿ ತಿಂಡಿ, ಚಾಕಲೋಟ್ ಖರೀದಿ ಜೋರಾಗಿ ನಡೆಸಿದ್ದಾರೆ.

ಸ್ಫೇನಿನಲ್ಲಿ
ಸಾಂಟಾ ಕ್ರೂಜ್ ಡಿ ಟೆನೆರೈಫ್: ಕ್ರಿಸ್ಮಸ್ ಲಾಟರಿ "El Gordo" ("The Fat One") ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಗೆದ್ದ ಯಾಜ್ಮಿನಾ ಸೊರೆಜ್ ಸಂಭ್ರಮಾಚರಣೆ. ಸುಮಾರು 2.5 ಬಿಲಿಯನ್ ಯುರೋಸ್ (3.4 ಬಿಲಿಯನ್ ಡಾಲರ್) ಬಹುಮಾನ ಮೊತ್ತ ನೀಡಲಾಗುತ್ತದೆ.

ಅಮೃತಸರ್ ನಲ್ಲಿ
ಶಾಲಾ ಮಕ್ಕಳು ಕ್ರಿಸ್ಮಸ್ ತಾತಾನ ದಿರಿಸಿನಲ್ಲಿ ಮೆರವಣಿಗೆ ನಡೆಸಿದ್ದಾರೆ

ಮುಂಬೈನಲ್ಲಿ
ಥಾಣೆಯಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಸಾಂಟಾ ಕ್ಲಾಸ್ ಸಂಭ್ರಮ

ರಾಜಸ್ಥಾನದಲ್ಲಿ
ರಾಜಸ್ಥಾನದ ಬಿಕಾನೇರ್ ನಲ್ಲಿ ಶಾಲಾ ಮಕ್ಕಳಿಂದ ಕ್ರಿಸ್ಮಸ್ ತಾತಾನ ರಚನೆ

ಕೋಲ್ಕತ್ತಾದಲ್ಲಿ
ನಿರ್ಗತಿಕ ಮಕ್ಕಳ ಜತೆ ಕ್ರಿಸ್ಮಸ್ ತಾತಾನ ಸಂಭ್ರಮ

ಮುಂಬೈನಲ್ಲಿ
ವಿಶೇಷ ಚೇತನ ಮಕ್ಕಳೊಂದಿಗೆ ಸಾಂಟಾ ಕ್ಲಾಸ್ ಸಂಭ್ರಮ

ಕೊಚ್ಚಿಯಲ್ಲಿ
ಕೊಚ್ಚಿಯಲ್ಲಿ ಶಾಲಾ ಮಕ್ಕಳು ಕ್ರಿಸ್ಮಸ್ ತಾತಾನ ದಿರಿಸು, ಕ್ರಿಸ್ಮಸ್ ಮರದಾಕೃತಿ ರಚನೆ ಮಾಡಿ ಸಂಭ್ರಮಿಸಿದ್ದಾರೆ

ಬ್ಯಾಂಕಾಕಿನಲ್ಲಿ ದಾಖಲೆ
ಕೆಂಪು, ಹಸಿರು ಹಾಗೂ ಕಪ್ಪು ಬಣ್ಣದ ದಿರಿಸಿನಲ್ಲಿ 852ಕ್ಕೂ ಅಧಿಕ ಥಾಯ್ ವಿದ್ಯಾರ್ಥಿಗಳು ಮಾನವ ಕ್ರಿಸ್ಮಸ್ ಮರ ನಿರ್ಮಿಸಿ ಹೊಸ ಗಿನ್ನಿಸ್ ದಾಖಲೆ ಬರೆಯುವ ಉತ್ಸಾಹದಲ್ಲಿದ್ದಾರೆ.

ವಿಶೇಷ ಪ್ರಾರ್ಥನೆ
ವಿಶ್ವದೆಲ್ಲೆಡೆ ಯೇಸುಕ್ರಿಸ್ತನ ಜನ್ಮದಿನದ ಅಂಗವಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ












Click it and Unblock the Notifications