ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರದ ಹಿತಾಸಕ್ತಿಯಿಂದ ಕೆಲವು ಟ್ವಿಟರ್ ಖಾತೆ ನಿರ್ಬಂಧ: ಹೈಕೋರ್ಟ್ ನಲ್ಲಿ ಕೇಂದ್ರದಿಂದ ಸಮರ್ಥನೆ

By ಎಸ್‌ಎಸ್‌ಎಸ್‌
|
Google Oneindia Kannada News

ಬೆಂಗಳೂರು,ಸೆ.2. ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಹಾಗೂ ಗುಂಪು ಘರ್ಷಣೆ, ಲಿಂಚಿಂಗ್‌ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೆಲ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸುವಂತೆ ಟ್ವಿಟರ್‌ ಸಂಸ್ಥೆಗೆ ಆದೇಶಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಟ್ವಿಟರ್‌ ಇನ್‌ಕಾರ್ಪೊರೇಟೆಡ್‌' ಸಲ್ಲಿಸಿರುವ ಅರ್ಜಿಯ ಸಂಬಂಧ ಅಕ್ಷೇಪಣೆ ಸಲ್ಲಿಸಿರುವ ಕೇಂದ್ರ ಸರ್ಕಾರ ತನ್ನ ನಿಲುವನ್ನು ಬಲವಾಗಿ ಸಮರ್ಥಸಿಕೊಂಡಿದೆ. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳ ಅಡಿಯಲ್ಲಿ ವ್ಯಕ್ತಿಗತವಾಗಿ ಹಲವು ಖಾತೆಗಳನ್ನು ನಿಷೇಧಿಸುವಂತೆ ಹೊರಡಿಸಿರುವ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಕೇಂದ್ರ ಸರ್ಕಾರ ಸಮಗ್ರ ವಿವರಗಳನ್ನು ನೀಡಿದೆ.

ದೇಶದ ವಿರೋಧಿ ಕೃತ್ಯ:

ಸುಳ್ಳು ಸುದ್ದಿ ಹಾಗೂ ಉದ್ದೇಶಪೂರ್ವಕ ಅಸಂಬದ್ಧ ಮಾಹಿತಿ ಹಂಚಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಟ್ವಿಟರ್‌ನಂಥ ವೇದಿಕೆಗಳು ಪರಿಣಾಮಕಾರಿ ಕ್ರಮಕೈಗೊಳ್ಳುತ್ತಿಲ್ಲ. ದೇಶದ ಸಮಗ್ರತೆ ಮತ್ತು ಸಾರ್ವಭೌಮತೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಗಳು ಹೆಚ್ಚಾಗುತ್ತಿವೆ ಎಂದು ಹೇಳಿದೆ.

In view of protection of national interest certain twitter accounts curbed: Central Government

ಅಲ್ಲದೆ, ಇಂತಹ ವೇದಿಕೆಗಳನ್ನು ದೇಶ ವಿರೋಧಿ ಮತ್ತು ವಿದೇಶದಲ್ಲಿರುವ ಶತ್ರುಗಳು ಭಾರತ ವಿರೋಧಿ ಅಪಪ್ರಚಾರಕ್ಕೆ ಬಳಕೆ ಮಾಡಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಏಕತೆಯಲ್ಲಿಬಿರುಕು ಮೂಡಿಸಲು ಹಾಗೂ ರಾಷ್ಟ್ರದಲ್ಲಿ ಅಸ್ಥಿರತೆ ಉಂಟು ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ಆರಂಭಿಕ ಹಂತದಲ್ಲೇ ಸುಳ್ಳು ಅಥವಾ ತಪ್ಪು ಮಾಹಿತಿಗಳ್ನು ನಿರ್ಬಂಧಿಸುವುದು ಅತ್ಯಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಹಲವು ವರ್ಷಗಳ ಕಾಲ ಅರ್ಜಿದಾರ ಸಂಸ್ಥೆ ಸರ್ಕಾರದ ಆದೇಶ ಪಾಲನೆ ಮಾಡಿಲ್ಲ. ಪದೇಪದೆ ಎಚ್ಚರಿಸಿದ ಬಳಿಕ ಹಾಗೋ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ ಬಳಿಕ ಕೇಂದ್ರ ಸರ್ಕಾರದ ನಿರ್ಬಂಧ ಆದೇಶವನ್ನು ಟ್ವಿಟರ್‌ ಪಾಲಿಸಿದೆ. ನಿರ್ಬಂಧ ಆದೇಶಗಳು ಮೌಲ್ಯ ಕಳೆದುಕೊಳ್ಳುವವರೆಗೆ ಮತ್ತು ಐಟಿ ಕಾಯ್ದೆಯ ಸೆಕ್ಷ ನ್‌ 69ಎ ಅಡಿ ಪ್ರಸ್ತಾಪಿಸಿದ ವಿಚಾರ ವೈರಲ್‌ ಆಗಿ ಇತರ ವೇದಿಕೆಗಳಿಗೂ ವ್ಯಾಪಿಸುವವರೆಗೂ ಯಾವುದೇ ಕ್ರಮಕೈಗೊಳ್ಳದೆ ಟ್ವಿಟರ್‌ ಉದ್ದೇಶಪೂರ್ವಕವಾಗಿ ಸರ್ಕಾರದ ಆದೇಶವನ್ನು ಪಾಲಿಸಿಲ್ಲ ಅಥವಾ ವಿಳಂಬ ಮಾಡಿದೆ. ಮೊದಲು ಆದೇಶ ಪಾಲಿಸದೆ ವಿಳಂಬ ನೀತಿ ಅನುಸರಿಸಿದ ಟ್ವಿಟರ್‌, ಶೋಕಾಸ್‌ ನೋಟಿಸ್‌ ನೀಡಿದ ಬಳಿಕ ತಕ್ಷ ಣ ಆದೇಶ ಪಾಲಿಸಿದೆ. ಕೊನೆಗೆ ನ್ಯಾಯಿಕ ರಕ್ಷ ಣೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ ಎಂದು ಕೇಂದ್ರ ಸರ್ಕಾರ ದೂರಿದೆ.

In view of protection of national interest certain twitter accounts curbed: Central Government

ಅರ್ಜಿ ವಜಾಕ್ಕೆ ಮನವಿ:

ಸೂಕ್ಷ್ಮ ವಿಚಾರಗಳು ಹಾಗೂ ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿಅಭಿಪ್ರಾಯಗಳನ್ನು ಹಂಚಿಕೊಳ್ಳಲಾಗುತ್ತದೆ. ನ್ಯಾಯಸಮ್ಮತ ಅಭಿಪ್ರಾಯಕ್ಕೆ ಪ್ರಜಾಪ್ರಭುತ್ವದಲ್ಲಿ ಒಪ್ಪಿಗೆ ಇದ್ದರೂ ವ್ಯಂಗ್ಯದ ರೂಪದಲ್ಲಿರುವ ಟ್ವೀಟ್‌ಗಳು ಹಾಗೂ ಮಾಹಿತಿ ಅಲ್ಲಿಬಹು ಮುಖ್ಯವಾಗಿವೆ. ಇತರ ಸಾಮಾಜಿಕ ಮಾಧ್ಯಮಗಳಿಗೆ ಹೋಲಿಕೆ ಮಾಡಿದರೆ ಸೀಮಿತ ಪದ ಮಿತಿ ಹೊಂದಿರುವ ಟ್ವೀಟರ್‌ ವ್ಯಾಪಕವಾಗಿ ತಪ್ಪು ಮಾಹಿತಿ ಹಬ್ಬಿಸುವ ಶಕ್ತಿ ಹೊಂದಿದೆ ಎಂದು ಹೇಳಿದೆ.

ಜೊತೆಗೆ ಭಾರತದ ಕಾನೂನಿನ ಪ್ರಕಾರ ಟ್ವಿಟರ್‌ ಸಾಮಾನ್ಯ ವ್ಯಕ್ತಿಯಲ್ಲ. ವಿದೇಶಿ ನೋಂದಾಯಿತ ಸಂಸ್ಥೆಯಾಗಿರುವ ಟ್ವಿಟರ್‌, ಸಂವಿಧಾನದ ಪರಿಚ್ಛೇದ 14, 19 ಅಥವಾ 21ರ ಅಡಿ ಹಕ್ಕು ಮಂಡಿಸಲಾಗದು. ನೇರವಾಗಿ ಸಾಧಿಸಲಾಗದ ಉದ್ದೇಶವನ್ನು ಪರೋಕ್ಷವಾಗಿ ಈಡೇರಿಸಿಕೊಳ್ಳಲು ನ್ಯಾಯಾಲಯದ ವ್ಯಾಪ್ತಿ ಬಳಕೆ ಮಾಡಿಕೊಂಡಿದೆ ಎಂದು ಆಕ್ಷೇಪಣೆಯಲ್ಲಿಪ್ರತಿಪಾದಿಸಿರುವ ಕೇಂದ್ರ ಸರ್ಕಾರ, ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದೆ.

English summary
In view of protection of national interest certain twitter accounts curbed: Central Government defended its action in the Karnataka High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X