Get Updates
Get notified of breaking news, exclusive insights, and must-see stories!

ಚಿತ್ರಗಳು : ಕಬ್ಬಾಳಮ್ಮನಿಗೆ ನಮೋಃ ನಮಃ ಎಂದ ಡಿಕೆ ಶಿವಕುಮಾರ್

Recommended Video

      D K Shivakumar goes pilgrimage after IT Raid | Oneindia Kannada

      ರಾಮನಗರ, ಆಗಸ್ಟ್ 30 : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತರಾಗಿ ಕಬ್ಬಾಳಮ್ಮ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಆದಾಯ ತೆರಿಗೆ ಇಲಾಖೆ ದಾಳಿ ನಡೆದ ಬಳಿಕ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಮನೆ ದೇವರ ದರ್ಶನ ಪಡೆದರು.

      ಬುಧವಾರ ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಜೊತೆಗೆ ಕನಕಪುರದ ಸಾತನೂರು ರಸ್ತೆಯಲ್ಲಿರುವ ಕಬ್ಬಾಳು ಕ್ಷೇತ್ರಕ್ಕೆ ಭೇಟಿ ನೀಡಿದರು. ಕಬ್ಬಾಳಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಿದರು.

      ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, 'ಎಲ್ಲಾ ದುಷ್ಟ ಶಕ್ತಿಗಳಿಂದ ಮುಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನಮಗೆ ಆಗದವರು ನಮ್ಮ ವಿರುದ್ಧ ಹರಕೆ ಹೊತ್ತಿರುತ್ತಾರೆ. ಅದರಿಂದ ಕಾಪಾಡುವಂತೆ ನಮನ ಸಲ್ಲಿಸಿದ್ದೇನೆ' ಎಂದರು.

      ಡಿ.ಕೆ.ಶಿವಕುಮಾರ್ ಅವರು ಆದಾಯ ತೆರಿಗೆ ಇಲಾಖೆ ದಾಳಿ ಮುಗಿದ ಬಳಿಕ ಆಗಸ್ಟ್ 5ರಂದು ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು. ಆದರೆ, ಅಂದು ಗುಜರಾತ್‌ನ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ ಇದ್ದ ಕಾರಣ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ದೇವಾಲಯಕ್ಕೆ ಭೇಟಿ ಚಿತ್ರಗಳು....

      ಕಬ್ಬಾಳಮ್ಮನ ಶಕ್ತಿ ಅಪಾರ

      ಕಬ್ಬಾಳಮ್ಮನ ಶಕ್ತಿ ಅಪಾರ

      ಕಬ್ಬಾಳಮ್ಮ ದೇವಿ ಭಕ್ತರ ಕಷ್ಟಗಳನ್ನು ದೂರ ಮಾಡುತ್ತಾಳೆ. ಆದ್ದರಿಂದ, ನೂರಾರು ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಕಬ್ಬಾಳಮ್ಮ ದೇವಿ ಭಕ್ತರ ಹರಕೆಗೆ ಮೆಚ್ಚಿ, ಬಲಗಡೆ ಹೂ ನೀಡಿದರೆ ಕೆಲಸ ಖಂಡಿತವಾಗಿಯೂ ನಡೆಯುತ್ತದೆ ಎಂಬ ನಂಬಿಕೆ ಇದೆ.

      ಡಿಕೆ ಶಿವಕುಮಾರ್‌ಗೆ ಮನೆಯ ದೇವರು

      ಡಿಕೆ ಶಿವಕುಮಾರ್‌ಗೆ ಮನೆಯ ದೇವರು

      ಕನಕಪುರದವರಾದ ಡಿ.ಕೆ.ಶಿವಕುಮಾರ್ ಅವರಿಗೆ ಕಬ್ಬಾಳಮ್ಮ ದೇವಿ ಮನೆಯ ದೇವರು. ಹಿಂದಿನಿಂದಲೂ ಅವರ ಕುಟುಂಬದವರು ಈ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಡಿ.ಕೆ.ಶಿವಕುಮಾರ್ ಅವರು ಸಹ ಇಲ್ಲಿಗೆ ನಡೆದುಕೊಳ್ಳುತ್ತಾರೆ.

      ಕಬ್ಬಾಳಮ್ಮ ದೇವಾಲಯ ಎಲ್ಲಿದೆ?

      ಕಬ್ಬಾಳಮ್ಮ ದೇವಾಲಯ ಎಲ್ಲಿದೆ?

      ಶ್ರೀ ಕಬ್ಬಾಳಮ್ಮ ದೇವಿಯ ದೇವಸ್ಥಾನ ರಾಮನಗರ ಜಿಲ್ಲೆಯ ಕನಕಪುರದಿಂದ ಸಾತನೂರು ರಸ್ತೆಯಲ್ಲಿ 20 ಕಿ.ಮೀ.ಕ್ರಮಿಸಿದರೆ ಸಿಗುತ್ತದೆ. ಇದೊಂದು ಪುರಾತನ ಇತಿಹಾಸವಿರುವ ಸ್ಥಳವಾಗಿದೆ. ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ತಪ್ಪಿತಸ್ಥರನ್ನು ಇಲ್ಲಿಗೆ ಕರೆತಂದು ಬೆಟ್ಟದ ಮೇಲಿಂದ ತಳ್ಳಿ ಸಾಯಿಸಲಾಗುತ್ತಿತ್ತು ಎನ್ನುತ್ತದೆ ಇತಿಹಾಸ.

      ದೇವಾಲಯದಲ್ಲಿ ನಂದಿ ಇದೆ

      ದೇವಾಲಯದಲ್ಲಿ ನಂದಿ ಇದೆ

      ಕಬ್ಬಾಳಮ್ಮ ದೇವಾಲಯದಲ್ಲಿ ನಂದಿ ಇದೆ. ಹಲವು ಭಕ್ತರು ಇದಕ್ಕೂ ಹರಕೆಯನ್ನು ಹೊರುತ್ತಾರೆ. ದೇವಿಗೆ ಹೊದಿಸಿದ ಸೀರೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ, ಆ ಸೀರೆಯನ್ನು ಮನೆಯಲ್ಲಿ ಪೂಜಿಸಿದವರಿಗೂ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.

      ಪ್ರಸಾದ ವಿತರಣೆ

      ಪ್ರಸಾದ ವಿತರಣೆ

      ಡಿ.ಕೆ.ಶಿವಕುಮಾರ್ ಕಬ್ಬಾಳಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+