ಸಿದ್ದು ರಾಜ್ಯದಲ್ಲಿ ರಮೇಶ್ ಆದ್ರೆ ಜೈಲ್, ರಫೀಕ್ ಆದ್ರೆ ಬೇಲ್: ಬಿಜೆಪಿ ಟ್ವೀಟ್
ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ ನಡೆದ ಕೋಮು ಗಲಭೆಯಲ್ಲಿ ಬಂಧಿತರಾಗಿರುವ ಅಥವಾ ದೂರು ದಾಖಲಾಗಿರುವ ಮುಗ್ದ ಅಲ್ಪಸಂಖ್ಯಾತರ ಮೇಲಿನ ಕೇಸನ್ನು ವಾಪಸ್ ತೆಗೆದುಕೊಳ್ಳುವ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಸಂಬಂಧ ಸರಕಾರ ಹೊರಡಿಸಿದ್ದ ಸುತ್ತೋಲೆಯನ್ನು ಶನಿವಾರ ರಾತ್ರಿ ವಾಪಸ್ ಪಡೆದುಕೊಂಡಿದೆ.
ಆದರೆ, ಇದೇ ವಿಚಾರವನ್ನು ಇಟ್ಟುಕೊಂಡು ವಿರೋಧ ಪಕ್ಷವಾದ ಬಿಜೆಪಿ, ಸಿದ್ದರಾಮಯ್ಯನವರ ಸರಕಾರದ ವಿರುದ್ದ ಸಾಮಾಜಿಕ ತಾಣದಲ್ಲಿ ಸಮರ ಸಾರಿದ್ದು, ಇದಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಪಕ್ಷದ ಮುಖಂಡರು, ಅಲ್ಪಸಂಖ್ಯಾತರನ್ನು ಚುನಾವಣೆಯ ವೇಳೆ ಸಂತೋಷಗೊಳಿಸಲು ಈ ಕ್ರಮಕ್ಕೆ ಮುಂದಾಗಿದೆ ಎಂದು ಸಿದ್ದರಾಮಯ್ಯ ಸರಕಾರವನ್ನು ಜಾಲಾಡಿಸುತ್ತಿದ್ದಾರೆ.
ಶೋಭಾ ಕರಂದ್ಲಾಜೆ, ಸಿ ಟಿ ರವಿ, ಸದಾನಂದ ಗೌಡ, ಸುನಿಲ್ ಕುಮಾರ್ ಸೇರಿದಂತೆ ಪಕ್ಷದ ಮುಖಂಡರು ಕಾಂಗ್ರೆಸ್ ಸರಕಾರ ವಿರುದ್ದ ಕಿಡಿಕಾರುತ್ತಿರುವ ಹೊತ್ತಲ್ಲೇ, ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟಿನಿಂದ ಮಾಡಿರುವ ವಿವಾದಾತ್ಮಕ ಟ್ವೀಟ್ ಭಾರೀ ಸದ್ದು ಮಾಡಲಾರಂಭಿಸಿದೆ.
ಕರ್ನಾಟಕ ಬಿಜೆಪಿ ಘಟಕದ ಅಕೌಂಟ್ @BJP4Karnataka ಹ್ಯಾಂಡಲ್ ನಲ್ಲಿ ಶನಿವಾರ (ಜ 27) ಸಂಜೆ ಇಂಗ್ಲಿಷ್ ನಲ್ಲಿ ಮಾಡಿರುವ ಟ್ವೀಟ್ ನಲ್ಲಿ, "ಸಿದ್ದರಾಮಯ್ಯನವರ ಕರ್ನಾಟಕದಲ್ಲಿ ನೀವು ರಮೇಶ್ ಆದರೆ ನಿಮಗೆ ಜೈಲು, ರಫೀಕ್ ಆದರೆ ಬೇಲ್" ಎಂದು ಬಿಜೆಪಿ ಟ್ವೀಟ್ ಮಾಡಿದೆ.
1.3ಲಕ್ಷ ಫಾಲೋವರ್ಸ್ ಹೊಂದಿರುವ ಈ ಅಕೌಂಟಿನ ಟ್ವೀಟಿಗೆ ಪರವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹಿಂದೂ ಆಗಿ ಹುಟ್ಟಿ ಕೋಮು ಗಲಭೆ ಹುಟ್ಟುಹಾಕಿದ ಅಲ್ಪಸಂಖ್ಯಾತರ ಮೇಲಿನ ಕೇಸನ್ನು ಹಿಂದಕ್ಕೆ ಪಡೆಯಲು ಮುಂದಾಗಿರುವ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಶೋಭಾ ಕರಂದ್ಲಾಜೆ ಸಾಲು ಸಾಲು ಟ್ವೀಟ್ ಮಾಡಿದ್ದರು.
|
ಕರ್ನಾಟಕದಲ್ಲಿ ನೀವು ರಮೇಶ್ ಆದರೆ ಜೈಲು, ರಫೀಕ್ ಆದರೆ ಬೇಲ್
ಕರ್ನಾಟಕ ಬಿಜೆಪಿ ಘಟಕ ಮಾಡಿರುವ ಟ್ವೀಟ್ ಹೀಗಿದೆ, " In @siddaramaiah's Karnataka, if you are a "Ramesh", you'll be jailed. If you are a "Rafiq", you'll be given bail. #CongBleedsKarnataka #CongKillsHindus. ("ಸಿದ್ದರಾಮಯ್ಯನವರ ಕರ್ನಾಟಕದಲ್ಲಿ ನೀವು ರಮೇಶ್ ಆದರೆ ನಿಮಗೆ ಜೈಲು, ರಫೀಕ್ ಆದರೆ ಬೇಲ್")

ಬಿಬಿಎಂಪಿಗೆ ಸರಕಾರ ಕೊಟ್ಟ ಭರವಸೆ ಏನು
ಸಿದ್ದರಾಮಯ್ಯ ಸರಕಾರವನ್ನು ದೂರುವ ಬಿಜೆಪಿಯವರೇ, ಕರ್ನಾಟಕದ ಸರಕಾರದ ಸಾಧನೆ ನೋಡಿ. ಬಿಬಿಎಂಪಿಗೆ ಸರಕಾರ ಕೊಟ್ಟ ಭರವಸೆ ಏನು, ಸರಕಾರ ಅದನ್ನು ಪೂರ್ಣಗೊಳಿಸಿದ್ದು ಏನು ಎನ್ನುವ ಸಚಿತ್ರವಾದ ವಿವರವನ್ನು ನೀಡುವ ಟ್ವೀಟ್.

ವಿಕಾಸ ಎನ್ನುವುದು ಬಿಜೆಪಿಯ ಅಜೆಂಡಾದಲ್ಲಿ ಇಲ್ಲ
ಹಿಂದೂಗಳ ವೋಟ್ ಬ್ಯಾಂಕಿಗಾಗಿ ಬಿಜೆಪಿಯ ನಡೆ ನಾಚಿಕೆ ಪಡುವಂತದ್ದು, ವಿಕಾಸ ಎನ್ನುವುದು ಬಿಜೆಪಿಯ ಅಜೆಂಡಾದಲ್ಲಿ ಇಲ್ಲ. ಯೋಗಿ ಸರಕಾರ ಉತ್ತರಪ್ರದೇಶದಲ್ಲಿ ಮಾಡುತ್ತಿರುವುದು ಏನು?ಔರಂಗಜೇಬ್ ಆಡಳಿತವನ್ನು ನೆನಪಿಸುವಂತಿದೆ.

ಜಾತಿ ಮತ್ತು ಧರ್ಮದ ವಿಚಾರದಲ್ಲಿ ನೋಡುತ್ತಿದ್ದೀರಾ
ಸಿದ್ದರಾಮಯ್ಯ ಅಲ್ಪಸಂಖ್ಯಾತರು ಎಂದು ಹೇಳಿರಬಹುದು, ಆದರೆ ನೀವ್ಯಾಕೆ ಜಾತಿ ಮತ್ತು ಧರ್ಮದ ವಿಚಾರದಲ್ಲಿ ನೋಡುತ್ತಿದ್ದೀರಾ? ಹಿಂದೂಗಳೇ ಬಿಜೆಪಿಗೆ ಮತಹಾಕಿ, ಇಲ್ಲಾಂದ್ರೆ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಬುರ್ಖಾ ಹಾಕಿ ಎನ್ನುವ ಟ್ವೀಟ್.

ಕರ್ನಾಟಕದಲ್ಲಿ ಪಾಸಿಟಿವ್ ಕೊಡುವುದಕ್ಕೆ ಬಿಜೆಪಿ ಬಳಿ ಏನೂ ಇಲ್ಲ
ಬಿಜೆಪಿಯದ್ದು ನೆಗೆಟಿವ್ ಕ್ಯಾಂಪೇನ್, ಯಾಕೆಂದರೆ ಕರ್ನಾಟಕದಲ್ಲಿ ಪಾಸಿಟಿವ್ ಕೊಡುವುದಕ್ಕೆ ಬಿಜೆಪಿ ಬಳಿ ಏನೂ ಇಲ್ಲ. ಬೇಲಾ ಅಥವಾ ಜೈಲಾ ಇದನ್ನು ನಿರ್ಧರಿಸುವುದು ನ್ಯಾಯಾಲಯವೇ ಹೊರತು ಸಿದ್ದರಾಮಯ್ಯನವರಲ್ಲ ಎನ್ನುವ ಟ್ವೀಟ್.












Click it and Unblock the Notifications