ವಿಧಾನಸಭೆ ಚುನಾವಣೆ ತಯಾರಿ, ಸಿಎಂ ಅಧಿಕೃತ ನಿವಾಸದಲ್ಲಿ ಸ್ಟುಡಿಯೋ

ಇನ್ನೊಂದು ವರ್ಷದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಎದುರಾಗಲಿದೆ. ಅದಕ್ಕಾಗಿ ಸಿದ್ಧತೆ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸದಲ್ಲಿ ಸ್ಟುಡಿಯೋ ನಿರ್ಮಾಣ ಪೂರ್ಣಗೊಳ್ಳಲಿದೆ. ಏನಿದು, ಏಕಾಗಿ ಸ್ಟುಡಿಯೋ ತಿಳಿಯಲು ಈ ವರದಿ ಓದಿ

ಬೆಂಗಳೂರು, ಮಾರ್ಚ್ 24: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸದಲ್ಲಿ ಸ್ಟುಡಿಯೋ ನಿರ್ಮಾಣ ಅಂತಿಮ ಹಂತದಲ್ಲಿದೆ. ವಿಧಾನಸಭೆ ಚುನಾವಣೆ ಇನ್ನೇನು ಒಂದು ವರ್ಷದಲ್ಲಿ ಎದುರಾಗಲಿದ್ದು, ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು ಸ್ಟುಡಿಯೋ ಮೇಲುಸ್ತುವಾರಿ ಗಮನಿಸುವುದರಲ್ಲಿ ತಲ್ಲೀನರಾಗಿದ್ದಾರೆ.

ಸಂದರ್ಶನ ನೀಡುವುದಕ್ಕೆ, ಡಾಕ್ಯುಮೆಂಟರಿ ಅಥವಾ ವಿಡಿಯೋ ರೆಕಾರ್ಡ್ ಮಾಡುವುದಕ್ಕೆ, ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸುವುದಕ್ಕೆ ಮತ್ತು ಪ್ರಾತ್ಯಕ್ಷಿಕೆ ನೀಡುವುದಕ್ಕೆ ಸ್ಟುಡಿಯೋ ಬಳಸಲಾಗುತ್ತದೆ. "ಇನ್ನು 15 ದಿನದಲ್ಲಿ ಸ್ಟುಡಿಯೋ ಸಿದ್ಧವಾಗಲಿದೆ. ಮುಖ್ಯಮಂತ್ರಿಗಳ ಸಂದರ್ಶನ ನಡೆಸಿದ ಹಲವರು ಧ್ವನಿ ಸಮಸ್ಯೆ ಇರುವ ಬಗ್ಗೆ ದೂರಿದ್ದರು. ಆ ನಂತರ ಈ ಸ್ಟುಡಿಯೋ ನಿರ್ಮಾಣದ ಆಲೋಚನೆ ಮಾಡಿದೆವು" ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.[ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ, ಏನಾಗಲಿದೆ?]

In-house studio for Karnataka Chief minister

ಈ ಕೊಠಡಿಯು ಸೌಂಡ್ ಪ್ರೂಫ್ ಆಗಿರುತ್ತದೆ. ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಬಗ್ಗೆ ವೃತ್ತಿಪರರೇ ಉಸ್ತುವಾರಿ ವಹಿಸಲಿದ್ದಾರೆ. ಸರಕಾರಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆಗಳನ್ನು ಚಿತ್ರೀಕರಿಸಿ, ಜಾಹೀರಾತುಗಳಿಗೆ ಬಳಸುವುದಕ್ಕೆ ಈ ಸ್ಟುಡಿಯೋವನ್ನು ಬಳಸಲಾಗುತ್ತದೆ.

ರಾಜ್ಯದಾದ್ಯಂತ ಯಾವುದೇ ಅಧಿಕಾರಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡುವುದಕ್ಕೆ ಕೂಡ ಇದರಿಂದ ಅನುಕೂಲವಾಗುತ್ತದೆ. ಒಟ್ಟಾರೆಯಾಗಿ ಮಾಧ್ಯಮಗಳ ಸಂವಾದ ಹಾಗೂ ಜಾಹೀರಾತುಗಳ ಮೂಲಕ ಸಿದ್ದರಾಮಯ್ಯ ಅವರ ಬಗ್ಗೆ ಸಕಾರಾತ್ಮಕ ವರ್ಚಸ್ಸು ಬೆಳೆಸುವ ಉದ್ದೇಶ ಈ ಸ್ಟುಡಿಯೋ ನಿರ್ಮಾಣದ ಹಿಂದಿದೆ.[ಸಮೀಕ್ಷೆ: 2018ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ 150 ಸ್ಥಾನ!]

ಮುಖ್ಯಮಂತ್ರಿ ಅಧಿಕೃತ ನಿವಾಸದೊಳಗಿನ 20X30 ಅಳತೆ ಜಾಗದಲ್ಲಿ ಈ ಸ್ಟುಡಿಯೋ ಇದ್ದು, ಉನ್ನತ ದರ್ಜೆಯ ಧ್ವನಿ ಹಾಗೂ ಬೆಳಕಿನ ವ್ಯವಸ್ಥೆ ಇರಲಿದೆ. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಯಂಥ ಪ್ರಮುಖ ದಿನಗಳಲ್ಲಿ ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಂದೇಶ ನೀಡಲು ಸಹ ಸ್ಟುಡಿಯೋ ಬಳಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+