'ನಿನ್ ಹೆಂಡ್ತಿಗೆ ಕರ್ನಾಟಕದಲ್ಲಿ ಒಳ್ಳೆ ಬಟ್ಟೆ ಹಾಕೋಕೆ ಹೇಳೋ..' ಎಂದವನ ಕಥೆ ಏನಾಯ್ತು ಗೊತ್ತಾ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸಣ್ಣ ಸಣ್ಣ ವಿಚಾರಕ್ಕೂ ಜಗಳಗಳಾಗುವುದು, ಕೊಲೆ ಬೆದರಿಕೆಗಳು ಹಾಕುವ ಘಟನೆಗಳು ವರದಿಯಾಗುತ್ತಿದೆ. ಇಂತದ್ದೇ ವಿಚಾರ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ನಡೆದಿದೆ. ಯುವಕನೊಬ್ಬ ಮಹಿಳೆ ಬಟ್ಟೆ ಹಾಕುವ ವಿಚಾರಕ್ಕೆ ಆಸಿಡ್ ಎರಚುವ ಮಟ್ಟಕ್ಕೆ ಇಳಿದಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ನಿಕಿತ್ ಶೆಟ್ಟಿ ಎಂಬಾತ ಸಹೋದ್ಯೋಗಿ ಮಹಿಳೆಯ ಬಟ್ಟೆಯ ವಿಚಾರವಾಗಿ ಮಾತನಾಡಿದ್ದಾನೆ. ಅಲ್ಲದೆ, ಮಹಿಳೆಯ ಪತಿಗೇ ಮೆಸೇಜ್ ಮಾಡಿ ಅವಾಜ್ ಕೂಡ ಹಾಕಿದ್ದಾನಂತೆ. ಕರ್ನಾಟಕದಲ್ಲಿರುವ ನಿನ್ನ ಹೆಂಡತಿಗೆ ಮೊದಲು ಚೆನ್ನಾಗಿ ಬಟ್ಟೆ ಧರಿಸುವುದನ್ನು ಹೇಳಿ ಕೊಡೋ...ಇಲ್ಲದಿದ್ರೆ ಆಕೆಗೆ ಆಸಿಡ್ ಎರಚುತ್ತೇನೆ ಎಂದು ಬೆದರಿಕೆ ಕೂಡ ಹಾಕಿದ್ದಾನೆ ಎನ್ನಲಾಗಿದೆ.

ಇನ್ನು ಮಹಿಳೆಯ ಪತಿ ಶಹಬಾಜ್ ಅನ್ಸಾರ್ ಪತ್ರಕರ್ತ ಎನ್ನಲಾಗಿದ್ದು, ಈತನ ಜನ್ಮಜಾಲಾಡಿ ಮಾಹಿತಿ ಕಲೆ ಹಾಕಿದ್ದರು. ನಿಕಿತ್ ಹಾಕಿದ್ದ ಮೆಸೇಜ್ ಹಾಗೂ ಆತನ ಪ್ರೋಫೈಲ್ ಸ್ಕ್ರೀನ್‌ಶಾಟ್ ತೆಗೆದುಕೊಂಡು, ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು, ಇವನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಹಾಗೂ ಆತ ಕೆಲಸ ಮಾಡುತ್ತಿದ್ದ ಕಂಪನಿಗೂ ಟ್ಯಾಗ್ ಮಾಡಿದ್ದರು.
This is serious. @DgpKarnataka @CMofKarnataka @DKShivakumar . This person is threatening to throw acid on my wife's face for her choice of clothes. Please take immediate action against this person to prevent any incident from happening. pic.twitter.com/N6fxS59Kqm
— Shahbaz Ansar (@ShahbazAnsar_) October 9, 2024
ನಿಕಿತ್ ಫೋಟೋ ಸಹಿತ, ಈ ವ್ಯಕ್ತಿ ನನ್ನ ಹೆಂಡತಿಯ ಬಟ್ಟೆಯ ಆಯ್ಕೆಗಾಗಿ ಆಕೆಯ ಮುಖದ ಮೇಲೆ ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದಾನೆ. ದಯವಿಟ್ಟು ಯಾವುದೇ ಘಟನೆ ನಡೆಯದಂತೆ ತಕ್ಷಣ ಈತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೋಸ್ಟ್ ಹಾಕಿದ್ದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕಂಪನಿಯು ನಿಕಿತ್ ಶೆಟ್ಟಿಯನ್ನು ಕೂಡಲೇ ಕೆಲಸದಿಂದ ಫೈರ್ ಮಾಡಿದೆ. ಮಹಿಳೆಯ ಬಟ್ಟೆ ಧರಿಸುವ ಆಯ್ಕೆ ಬಗ್ಗೆ ಕಾಮೆಂಟ್ ಮಾಡಿದ್ದು ಹಾಗೂ ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿರುವ ಆರೋಪದಡಿ ನಿಖಿತ್ ವಿರುದ್ಧ ಕೇಸ್ ಕೂಡ ದಾಖಲಾಗಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಸಂಸ್ಥೆಯು, ನಮ್ಮ ಉದ್ಯೋಗಿಗಳಲ್ಲಿ ಒಬ್ಬರಾದ ನಿಕಿತ್ ಶೆಟ್ಟಿ ಅವರು ಮತ್ತೊಬ್ಬರ ಬಟ್ಟೆಯ ಆಯ್ಕೆಯ ಬಗ್ಗೆ ಬೆದರಿಕೆ ಹಾಕಿರುವ ಘಟನೆ ಕೇಳಿ ಬಹಳ ದುಃಖವಾಗಿದೆ. ನಿಕಿತ್ ಅವರ ಈ ನಡವಳಿಕೆಯು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಅಲ್ಲದೆ ನಮ್ಮ ಸಂಸ್ಥೆಯ ಮೌಲ್ಯಗಳಿಗೂ ಇದು ವಿರುದ್ಧವಾಗಿದೆ.
ನಾವು ಕೆಲಸದ ಸ್ಥಳದಲ್ಲಿ ಸುರಕ್ಷತಾ ವಾತಾವರಣ ನಿರ್ಮಿಸಲು ಬದ್ಧರಾಗಿರುವ ಕಾರಣ ತಕ್ಷಣವೇ ಅವರನ್ನು ಕೆಲಸದಿಂದ ವಜಾ ಮಾಡಿದ್ದೇವೆ. ನಿಕಿತ್ ಅವರ ಉದ್ಯೋಗವನ್ನು ಐದು ವರ್ಷಗಳ ಅವಧಿಗೆ ಟರ್ಮಿನೇಟ್ ಮಾಡಿದ್ದೇವೆ. ಅವರ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದೇವೆ ಎಂದು ಕಂಪನಿ ಹೇಳಿದೆ.
ನಮ್ಮ ಕಂಪನಿಯಲ್ಲಿ ಎಲ್ಲರ ಗೌರವ ಮತ್ತು ಘನತೆ ಕಾಪಾಡುವುದು ನಮ್ಮ ಕರ್ತವ್ಯ. ಇಲ್ಲಿ ಯಾವುದೇ ರೀತಿಯ ಕಿರುಕುಳ ಅಥವಾ ಹಿಂಸೆ ಕಂಡುಬಂದಲ್ಲಿ, ಅದರ ವಿರುದ್ಧ ನಾವು ದೃಢವಾಗಿ ನಿಲ್ಲುತ್ತೇವೆ. ಸುರಕ್ಷಿತ ಕೆಲಸದ ಸ್ಥಳವನ್ನು ರಚಿಸುವುದು ನಮ್ಮ ಬದ್ಧತೆ ಎಂದು ತಿಳಿಸಿದೆ.

ಬಳಿಕ ಆತನನ್ನು ಕೆಲಸದಿಂದ ವಜಾ ಮಾಡಿದ್ದಕ್ಕೆ ಮಹಿಳೆಯ ಪತಿ ಕಂಪನಿಗೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ತನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ನನ್ನ ಪತ್ನಿ ಖ್ಯಾತಿ ಶ್ರೀಗೆ ಆಸಿಡ್ ದಾಳಿಯ ಬೆದರಿಕೆ ಹಾಕಿದ ವ್ಯಕ್ತಿ ತನ್ನ ಕೆಲಸ ಕಳೆದುಕೊಂಡಿದ್ದಾನೆ. ಕಂಪನಿಯು ತಕ್ಷಣವೇ ಅವನನ್ನು ವಜಾಗೊಳಿಸಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು ಎಂದು ಶಹಬಾಜ್ ಅನ್ಸಾರ್ ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications