Property Tax: ಆಸ್ತಿ ತೆರಿಗೆ ಪಾವತಿಸಿದವರ ಗಮನಕ್ಕೆ
Property Tax: ತೆರಿಗೆ ಪಾವತಿಸದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸರ್ಕಾರ ಸಮರ ಸಾರಲು ಮುಂದಾಗಿದೆ. ಹಾಗಾದರೆ ಯಾವೆಲ್ಲ ನಿಯಮಗಳನ್ನು ರೂಪಿಸಲು ನಿರ್ಧರಿಸಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬಿಬಿಎಂಪಿ ಮಾದರಿಯಲ್ಲಿ ರಾಜ್ಯದ ಉಳಿದ ಪೌರ ಸಂಸ್ಥೆಗಳಲ್ಲಿಯೂ ಬಿ ಖಾತಾ ಸಮಸ್ಯೆ ಬಗೆಹರಿಸಲು ಕಾಯ್ದೆಗೆ ಬದಲಾವಣೆ ಮಾಡಲಾಗಿದ್ದು, ಇದಕ್ಕೆ ತಕ್ಕಂತೆ ನಿಯಮಾವಳಿ ರೂಪಿಸಲಾಗುತ್ತಿದೆ. ಆಸ್ತಿ ತೆರಿಗೆ ಪರಿಷ್ಕರಿಸಿ ಅನಧಿಕೃತ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದಾಗ ಪೌರ ಸಂಸ್ಥೆಗಳು ಸಶಕ್ತ ಆಗುತ್ತದೆ. ಇದರಿಂದ ನಗರ ಹಾಗೂ ಪಟ್ಟಣಗಳಿಗೆ ಮೂಲಸೌಕರ್ಯ ಒದಗಿಸಬಹುದಾಗಿದೆ.

ನಿಯಮಾವಳಿಗಳ ಪ್ರಕಾರ, ಆಸ್ತಿಗಳ ಮೇಲಿನ ಆಸ್ತಿ ತೆರಿಗೆ, ಸೆಸ್ ದಂಡ ಪಾವತಿಸದ ಪಾವತಿಸದವರು ಬಾಕಿದಾರ ಎಂದು ಪರಿಗಣಿಸಲ್ಪಡುತ್ತಾರೆ. ಅವರಿಗೆ ಶೋಕಾಸ್ ನೋಟಿಸ್ ನೀಡಲಾಗುವುದು. ನಂತರ ಆಸ್ತಿಗಳ ಪರಿಶೀಲನೆ ನಡೆಸಲಾಗುತ್ತದೆ.
ವಸೂಲಿ ನಿಯಮಗಳ ಪ್ರಕಾರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿ ನೋಟಿಸ್ ನೀಡಿ ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ನೋಟಿಸ್ ವಿರುದ್ಧ ಮೇಲ್ಮನವಿ ಪ್ರಾಧಿಕಾರಗಳ ಮುಂದೆ ಹೋಗಲು ಶೇಕಡ 50ರಷ್ಟು ತೆರಿಗೆ ಪಾವತಿ ಕಡ್ಡಾಯ ಆಗಿದ್ದು, ಜಪ್ತಿ ಮಾಡಲಾದ ಆಸ್ತಿ ಮಾರಾಟ ಹರಾಜಿಗೂ ಅವಕಾಶ ಇದೆ ಎಂದು ಹೇಳಲಾಗಿದೆ.
ಭೂಮಿ ಬೆಲೆ ಗಗನಕ್ಕೆ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಳ ಆಗುತ್ತಲೇ ಇದೆ. ಮತ್ತೊಂದೆಡೆ ಬಾಡಿಗೆ, ಭೂಮಿ ಬೆಲೆಯೂ ಕೂಡ ಗಗನಕ್ಕೇರುತ್ತಿದೆ. ಹಾಗಾದರೆ ಕೋರಮಂಗಲದ ಬಳಿ ಇರುವ ಎಚ್‌ಎಸ್‌ಆರ್ ಲೇ ಔಟ್‌ನಲ್ಲಿ ಮನೆ ಬಾಡಿಗೆ ಹಾಗೂ ಭೂಮಿ ಬೆಲೆ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಹೆಚ್ಎಸ್ಆರ್ ಲೇಔಟ್‌ನ ಸಂಪೂರ್ಣ ಹೆಸರು ಬಹುತೇಕ ಮಂದಿಗೆ ಗೊತ್ತೇ ಇಲ್ಲ. ಇದರ ಪೂರ್ತಿ ಹೆಸರು ಹೊಸೂರ್ ಸರ್ಜಾಪುರ ರೋಡ್ ಲೇಔಟ್ ಅಂತಾ. ಇದೀಗ ಈ ಪ್ರದೇಶ ಮುಂದಿನ ಕೋರಮಂಗಲ ಅಂತಲೇ ಕರೆಸಿಕೊಳ್ಳುತ್ತಿದೆ. ಯಾಕೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ತುಂಬಾ ವರ್ಷಗಳ ಹಿಂದೆ ಈ ಲೇಔಟ್ ನಿರ್ಮಾಣ ಆದಾಗ, ಇದು ಈ ಮಟ್ಟಿಗೆ ಬೆಳೆಯುತ್ತದೆ ಅಂತಾ ಯಾರೂ ಊಹಿಸಿಯೂ ಇರಲಿಲ್ಲ. ಆದರೆ, ಇದೀಗ ಇದು ಇಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿದೆ. ಒಂದು ಸಾಮಾನ್ಯ ರೆಸಿಡೆನ್ಸಿಯಲ್ ಬಡಾವಣೆಯಿಂದ ಹಿಡಿದು ಐಟಿ ಕಾರಿಡಾರ್ನ ಪ್ರಮುಖ ಲೇಔಟ್ ಆಗಿ ಹೆಚ್ಎಸ್ಆರ್ ಲೇಔಟ್ ಅಭಿವೃದ್ಧಿಯಾಗಿದೆ.
ಈ ಭಾಗದಲ್ಲಿ ಕಾಸ್ಮೋಪಾಲಿಟನ್ ಕಲ್ಚರ್ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ, ಇದು ಎಲೆಕ್ಟ್ರಾನಿಕ್ ಸಿಟಿ, ಔಟರ್ ರಿಂಗ್ ರಸ್ತೆ, ಹಾಗೂ ಸರ್ಜಾಪುರ ರಸ್ತೆಗೆ ಸಮೀಪವಿದೆ. ಈ ಭಾಗಗಳಲ್ಲೇ ಅನೇಕ ಐಟಿ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್‌ಗಳ ಕಛೇರಿಗಳಿವೆ. ಹಚ್ಚ ಹಸಿರಿನ ಪರಿಸರವನ್ನು ಕೂಡ ಇಲ್ಲಿ ಕಾಣಬಹುದಾಗಿದೆ. ಆದ್ದರಿಂದ ಇದು ಎಂಥವರನ್ನೂ ತನ್ನತ್ತ ಸೆಳೆದುಬಿಡುತ್ತದೆ. ಬಹುತೇಕ ಮಂದಿ ಇಲ್ಲೇ ನೆಲೆಯೂರಲು ಸರದಿಯಲ್ಲಿ ಬರುತ್ತಿದ್ದಾರೆ.
ಅದರಲ್ಲೂ ಇಂದಿರಾನಗರ, ಕೋರಮಂಗಲ ಭಾಗದಲ್ಲಿ ಬಾಡಿಗೆ ದರ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಇಲ್ಲಿ ಭೂಮಿ ಕೊಂಡುಕೊಳ್ಳುವುದು ಸುಲಭದ ಮಾತಲ್ಲ. ಇಲ್ಲಿ ಸೌಲಭ್ಯಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿವೆ. ಹಾಗೆಯೇ ಮತ್ತೊಂದೆಡೆ ಇದೀಗ ಬಾಡಿಗೆ ಹೆಚ್ಚಾದರೂ ಕೂಡ ಕಂಪನಿಗಳು ಹೆಚ್ಎಸ್ಆರ್ ಕಡೆಗೆ ಮುಖ ಮಾಡುತ್ತಲೇ ಇವೆ. ಆದ್ದರಿಂದ ಇದನ್ನು ಸಹ ಭವಿಷ್ಯದ ಕೋರಮಂಗಲ 3ನೇ ಬ್ಲಾಕ್ ಅಂತಾ ಕರೆಯಲಾಗುತ್ತಿದೆ.
ಎಚ್‌ಎಸ್‌ಆರ್ ಲೇ ಔಟ್‌ನಲ್ಲಿ ಆಸ್ತಿ ಬೆಲೆ ಹೆಚ್ಚುವುದಕ್ಕೆ ರಿಯಲ್ ಎಸ್ಟೇಟ್ ಪ್ರಮುಖ ಕಾರಣ ಆಗಿದೆ. ಈ ಎಲ್ಲಾ ಕಾರಣಗಳಿಂದ ಹೆಚ್ಎಸ್ಆರ್ ಲೇ ಔಟ್‌ನಲ್ಲಿ ಸೈಟ್ ಹಾಗೂ ಭೂಮಿ ಬೆಲೆ ಗಗನಕ್ಕೇರುತ್ತಿದೆ. ಕಳೆದ 2 ವರ್ಷಗಳಲ್ಲಿ ಈ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು ಶೇಕಡ 30ರಷ್ಟು ರಷ್ಟು ಏರಿಕೆಯಾಗಿದೆ. ಇದೀಗ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಚದರ ಅಡಿ ಭೂಮಿ ಬೆಲೆ 30,000 ರೂಪಾಯಿನಿಂದ ಆರಂಭವಾಗುತ್ತದೆ ಎನ್ನುವ ಮಾಹಿತಿ ಇದೆ.












Click it and Unblock the Notifications