ಅನಧಿಕೃತ ಶಾಲೆ ಮುಚ್ಚಲು ಖಡಕ್ ಸುತ್ತೋಲೆ; ಬಿಡುಗಡೆಯಾಗಲಿದೆ ಪಟ್ಟಿ

ಬೆಂಗಳೂರು, ಜನವರಿ 14: 2024ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶಾತಿಗೆ ತಯಾರಿಗಳು ನಡೆಯುತ್ತಿವೆ. ಆದ್ದರಿಂದ ಶಾಲಾ ಶಿಕ್ಷಣ ಇಲಾಖೆ ಪೋಷಕರಿಗೆ ಸಹಕಾರಿಯಾಗಲು ಅಧಿಕೃತ ಮತ್ತು ಅನಧಿಕೃತ ಶಾಲೆಗಳ ಕುರಿತು ಮಾಹಿತಿಯನ್ನು ನೀಡಲಿದೆ.

ಈ ಕುರಿತು ಇಲಾಖೆಯ ಆಯುಕ್ತರಾದ ಬಿ. ಬಿ. ಕಾವೇರಿ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಈ ಸುತ್ತೋಲೆ 2023-24ನೇ ಸಾಲಿನಲ್ಲಿ ಅಧಿಕೃತ ಮತ್ತು ಅನಧಿಕೃತ ಶಾಲೆಗಳ ಮಾಹಿತಿಯನ್ನು ಪ್ರಕಟಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಕಾಯ್ದೆ ಮತ್ತು ಆದೇಶಗಳನ್ವಯ ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮತ್ತು ಮಾನ್ಯತೆ ಪಡೆದು ಶಾಲೆಯನ್ನು ನಡೆಸಬೇಕಾಗಿರುತ್ತದೆ. ಅದರಂತೆ ಇಲಾಖೆಯು ಪ್ರತಿ ವರ್ಷವು ಹೊಸ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಹಾಗೂ ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಇಲಾಖೆಯು ಅರ್ಜಿಗಳನ್ನು ಆಹ್ವಾನಿಸಿ, ನಿಯಮಾನುಸಾರ ಪರಿಶೀಲಿಸಿ ಮಾನದಂಡಗಳನ್ನು ಪೂರೈಸಿದ ಅರ್ಹ ಶಾಲೆಗಳಿಗೆ ನೋಂದಣಿ ನೀಡಲಾಗುತ್ತಿದ್ದು, ಅದರಂತೆ 2023-24ನೇ ಸಾಲಿನಲ್ಲಿ ಹೊಸದಾಗಿ ಪ್ರಾರಂಭಿಸಲು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ನಿಗದಿಪಡಿಸಿದ ಅಂತಿಮ ದಿನಾಂಕದೊಳಗೆ ಅನುಮತಿ ನೀಡಲಾಗಿರುತ್ತದೆ. ಪ್ರಸ್ತುತ ಸಾಲಿನ ಮಾನ್ಯತೆ ನವೀಕರಣ ಪ್ರಕ್ರಿಯೆಯೂ ಪೂರ್ಣಗೊಂಡಿರುತ್ತದೆ ಎಂದು ಹೇಳಿದ್ದಾರೆ.

Illegal Schools To Shut Down Education Department Circular

ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಇಲಾಖೆಯಿಂದ ನೋಂದಣಿ ಮತ್ತು ಮಾನ್ಯತೆ ಪಡೆದ ಖಾಸಗಿ ಶಾಲೆಗಳ ವಿವರಗಳನ್ನು ಪೋಷಕರಿಗೆ ಅನುಕೂಲವಾಗುವಂತೆ ಮಾಹಿತಿಗಾಗಿ ಪ್ರಕಟಿಸಬೇಕಾಗಿರುತ್ತದೆ. ಅದರಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಅಧಿಕೃತ ಶಾಲೆಗಳ ಪಟ್ಟಿಯನ್ನು ತಕ್ಷಣ ಪ್ರಕಟಿಸಲು ಸೂಚಿಸಲಾಗಿದೆ. ಈ ಪ್ರಕಟಣೆಯನ್ನು ಕಛೇರಿಯ ಆವರಣದಲ್ಲಿ ಸಾರ್ವಜನಿಕರಿಗೆ ಗೋಚರವಾಗುವಂತೆ ಶಾಲೆಯ ಹೆಸರು, ಮಾಧ್ಯಮ, ಪಠ್ಯ ಕ್ರಮ ಹಾಗೂ ವಿಳಾಸದ ವಿವರಗಳನ್ನು ಪ್ರಕಟಿಸತಕ್ಕದ್ದು ಎಂದು ಸುತ್ತೋಲೆ ತಿಳಿಸಿದೆ.

ಸುತ್ತೋಲೆಯಲ್ಲಿ ನೀಡಿರುವಂತೆ ಅನಧಿಕೃತ ಶಾಲೆಗಳ ಪಟ್ಟಿಯನ್ನು ಸ್ಥಳೀಯ ದಿನ ಪತ್ರಿಕೆಯಲ್ಲಿ ಸಾರ್ವಜನಿಕರಿಗೆ ಮಾಹಿತಿಗಾಗಿ ಪ್ರಕಟಿಸಲು ಉಪನಿರ್ದೇಶಕರು (ಆಡಳಿತ) ಇವರು ಕ್ರಮವಹಿಸುವುದು. ಅನಧಿಕೃತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಅಧಿಕೃತ ಶಾಲೆಗೆ ದಾಖಲು ಮಾಡಲು ಕ್ರಮವಹಿಸುವುದು.

ಅನಧಿಕೃತ ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದಲ್ಲಿ ಅವರ ಶೈಕ್ಷಣಿಕ ದಾಖಲೆಗಳನ್ನು ಅಧಿಕೃತಗೊಳಿಸಿ ನೀಡಲು ಸಾಧ್ಯವಾಗುವುದಿಲ್ಲ ಹಾಗೂ ಅನಧಿಕೃತ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಸಹ ಪರಿಗಣಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ಇಂತಹ ಶಾಲೆಗಳ ಮಕ್ಕಳು ಮುಂದಿನ ವ್ಯಾಸಂಗಕ್ಕಾಗಿ ಉದ್ಯೋಗಕ್ಕಾಗಿ ಶೈಕ್ಷಣಿಕ ದಾಖಲೆಗಳನ್ನು ಅಧಿಕೃತ ಎಂದು ಪರಿಗಣಿಸಲು ಸಾಧ್ಯವಿರುವುದೆಲ್ಲ ಎಂಬುದನ್ನು ಪೋಷಕರ ಗಮನಕ್ಕೆ ತರತಕ್ಕದ್ದು ಎಂದು ತಿಳಿಸಿದೆ.

ಅನಧಿಕೃತ ಶಾಲೆಗಳನ್ನು ತಕ್ಷಣ ಮುಚ್ಚುವಂತೆ ಆಡಳಿತ ಮಂಡಳಿಗೆ ಸೂಚಿಸತಕ್ಕದ್ದು ಹಾಗೂ ಒಂದು ವಾರದ ನಂತರ ಸಂಬಂಧಪಟ್ಟ ಸಿ.ಆರ್.ಪಿ, ಬಿ.ಆರ್.ಪಿ ಮತ್ತು ಶಿಕ್ಷಣ ಸಂಯೋಜಕರು ಸ್ಥಳ ಪರಿಶೀಲನೆ ನಡೆಸಿ ಶಾಲೆಯು ಮುಚ್ಚಿರುವುದನ್ನು ಖಾತರಿಪಡಿಸಿಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸತಕ್ಕದ್ದು.

ಅನಧಿಕೃತ ಶಾಲೆಗಳು ಮುಚ್ಚದೇ ನಡೆಸುತ್ತಿರುವುದು ಕಂಡುಬಂದಲ್ಲಿ ಅಂತಹ ಶಾಲೆಗಳನ್ನು ಮುಚ್ಚಲು ಹಾಗೂ ಸದರಿ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ನಿಯಮಾನುಸಾರ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹಾಗೂ ಸದರಿ ಶಾಲೆಯನ್ನು ಅಗತ್ಯಾನುಸಾರ ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಮುಚ್ಚುವ ಕೆಲಸವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಡ್ಡಾಯವಾಗಿ ನಿರ್ವಹಿಸತಕ್ಕದ್ದು, ಹಾಗೂ ಅಂತಹ ಅನಧಿಕೃತ ಶಾಲೆಗೆ ಡೈಸ್ ಕೋಡ್ ನೀಡಿದ್ದಲ್ಲಿ ಅದನ್ನು ತಕ್ಷಣ ಹಿಂಪಡೆಯೆಲು ಕ್ರಮವಹಿಸತಕ್ಕದ್ದು ಎಂದು ಸೂಚನೆ ನೀಡಲಾಗಿದೆ.

ಶಾಲೆಗಳಲ್ಲಿ ಪರಿಶೀಲಿಸ ಬೇಕಾದ ಪ್ರಮುಖ ಅಂಶಗಳು

* ಈಗಾಗಲೇ ಅನುಮತಿ ಪಡೆದು ಶಾಲೆಯನ್ನು ನಡೆಸುತ್ತಿರುವ ಆಡಳಿತ ಮಂಡಳಿಗಳು ಶಾಲೆಯನ್ನು ಮುಚ್ಚಲು ನಿರ್ಧರಿಸಿ ಠರಾವು ಮಾಡಿದಲ್ಲಿ ಒಂದು ಶೈಕ್ಷಣಿಕ ವರ್ಷದ ಮೊದಲೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೋಷಕರಿಗೆ ಹಾಗೂ ಇಲಾಖೆಗೆ ತಿಳಿಸುವುದು ಶಿಕ್ಷಣ ಇಲಾಖೆಯ ನಿಯಮಗಳನ್ವಯ ಕಡ್ಡಾಯವಾಗಿದ್ದು, ಈ ನಿಯಮವನ್ನು ಪಾಲಿಸದೇ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಅಥವಾ ಮಧ್ಯಂತರದಲ್ಲಿ ಶಾಲೆಗಳನ್ನು ಮುಚ್ಚದಂತೆ ಕ್ರಮವಹಿಸತಕ್ಕದ್ದು, ಒಂದು ವೇಳೆ ಇಲಾಖೆ ಹಾಗೂ ಪೋಷಕರ ಗಮನಕ್ಕೆ ತರದೇ ಶಾಲೆಯನ್ನು ಮುಚ್ಚಿದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್‌ ದಾಖಲಿಸುವುದು.

* ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ರಾಜ್ಯ ಪಠ್ಯ ಕ್ರಮದಲ್ಲಿ ಅನುಮತಿ ಪಡೆದು, ಶಾಲೆಯಲ್ಲಿ ಅನಧಿಕೃತವಾಗಿ ಕೇಂದ್ರ ಪಠ್ಯ ಕ್ರಮ ಬೋಧನೆ ಮಾಡುತ್ತಿರುವ ಶಾಲೆಗಳ ಪಟ್ಟಿಯನ್ನು ಸಹ ಪ್ರಕಟಿಸಿ, ಅಂತಹ ಶಾಲೆಗಳ ವಿರುದ್ಧವೂ ಕ್ರಮವಹಿಸತಕ್ಕದ್ದು, ಇಂತಹ ಶಾಲೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ-1983 ಕಲಂ 123 ರಡಿಯಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ಸಲ್ಲಿಸುವುದು.

* ತಮ್ಮ ವ್ಯಾಪ್ತಿಯಲ್ಲಿನ ಅನಧಿಕೃತ ಶಾಲೆಗಳು ನಡೆಯದಂತೆ ನೋಡಿಕೊಳ್ಳುವುದು ಆಯಾ ವ್ಯಾಪ್ತಿಯ ಸಿ.ಆರ್.ಪಿ, ಬಿ.ಆರ್.ಪಿ ಮತ್ತು ಶಿಕ್ಷಣ ಸಂಯೋಜಕರ ಕರ್ತವ್ಯವಾಗಿರುತ್ತದೆ. ಇದನ್ನು ಪಾಲಿಸದ ಸಿ.ಆರ್.ಪಿ, ಬಿ.ಆರ್.ಪಿ ಮತ್ತು ಶಿಕ್ಷಣ ಸಂಯೋಜಕರ ಮೇಲೆ ಇಲಾಖಾನಿಯಮಗಳ ಪ್ರಕಾರ ಕ್ರಮ ಜರುಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಫಾರಸ್ಸು ಮಾಡುವುದು ಹಾಗೂ ಈ ಬಗ್ಗೆ ಪ್ರತಿ ಮಾಸಿಕ 10ನೇ ತಾರೀಖಿನೊಳಗೆ ವರದಿಯನ್ನು ಉಪನಿರ್ದೇಶಕರಿಗೆ ಸಲ್ಲಿಸುವುದು.

* ಉಪನಿರ್ದೇಶಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸ್ವೀಕೃತವಾದ ವರದಿಯನ್ನು ಪರಿಶೀಲಿಸಿ, ಅಗತ್ಯ ಕ್ರಮವಹಿಸತಕ್ಕದ್ದು, ತಮ್ಮ ಕಛೇರಿಯ ಶಿಕ್ಷಣಾಧಿಕಾರಿಗಳು, ವಿಷಯ ಪರಿವೀಕ್ಷಕರು ಇವರುಗಳು ಶಾಲೆಗಳ ಭೇಟಿಯ ಸಮಯದಲ್ಲಿ ಸಂಬಂಧಪಟ್ಟ ಅನಧಿಕೃತ ಶಾಲೆಗಳು ಮುಚ್ಚಲ್ಪಟ್ಟಿವೆಯೇ? ಅಥವಾ ನಡೆಯುತ್ತಿವೆಯೇ? ಎಂಬ ಬಗ್ಗೆ ತಮ್ಮ ಭೇಟಿ ವರದಿಯಲ್ಲಿ ದಾಖಲಿಸತಕ್ಕದ್ದು ಹಾಗೂ ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಗೂ ಸಹಾ ಭೇಟಿ ನೀಡಿ ಅನಧಿಕೃತ ಶಾಲೆಗಳು ಹಾಗೂ ಅನಧಿಕೃತವಾಗಿ ಬೇರೆ ಪಠ್ಯ ಕ್ರಮ ಬೋಧಿಸುತ್ತಿರುವ ಶಾಲೆಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ತೆಗೆದುಕೊಂಡಿರುವ ಕ್ರಮದ ಬಗ್ಗೆ ದಿನದ ಭೇಟಿ ವರದಿಯಲ್ಲಿ ಕಡ್ಡಾಯವಾಗಿ ದಾಖಲಿಸತಕ್ಕದ್ದು.

* ಈ ಬಗ್ಗೆ ಉಪನಿರ್ದೇಶಕರು ಪ್ರತಿ ಮಾಸಿಕ ಸಂಬಂಧಪಟ್ಟ ಅಧಿಕಾರಿಗಳ ದಿನಚರಿಯನ್ನು ಪರಿಶೀಲಿಸಿ ಕ್ರಮವಹಿಸತಕ್ಕದ್ದು. ಈ ಬಗ್ಗೆ ಸೂಕ್ತ ಕ್ರಮವಹಿಸದೇ ಕರ್ತವ್ಯ ಲೋಪವೆಸಗಿದವರ ಮಾಹಿತಿಯನ್ನು ಸಂಬಂಧಪಟ್ಟ ವ್ಯಾಪ್ತಿಯ ಸಹ ನಿರ್ದೇಶಕರು ಇವರಿಗೆ ಸಲ್ಲಿಸತಕ್ಕದ್ದು, ಒಂದು ಪ್ರತಿಯನ್ನು ಆಯಾ ವ್ಯಾಪ್ತಿಯ ನಿರ್ದೇಶಕರುಗಳಿಗೆ ಕಡ್ಡಾಯವಾಗಿ ಪ್ರತಿ ಮಾಸಿಕ 15ರಂದು ಸಲ್ಲಿಸತಕ್ಕದ್ದು.

ರಾಜ್ಯದಲ್ಲಿ ಯಾವುದೇ ಸ್ಥಳದಲ್ಲಿ ಒಂದೇ ಒಂದು ಅನಧಿಕೃತ ಶಾಲೆಯು ನಡೆಯುತ್ತಿರಬಾರದು ಹಾಗೂ ನೋಂದಣಿ ಮತ್ತು ಮಾನ್ಯತೆ ಪಡೆದ ಶಾಲೆಯಲ್ಲಿ ಅಧಿಕೃತ ಪಠ್ಯಕ್ರಮವನ್ನು ಬೋಧಿಸದೇ ಬೇರೆ ಪಠ್ಯ ಕ್ರಮ ಬೋಧಿಸುತ್ತಿರುವ ಶಾಲೆಗಳು ಕಂಡುಬಂದಲ್ಲಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಉಪನಿರ್ದೇಶಕರು(ಆಡಳಿತ) ಇವರ ಕಛೇರಿಯ ಅಧಿಕಾರಿಗಳನ್ನೇ ನೇರಹೊಣೆಗಾರರನ್ನಾಗಿ ಮಾಡಿ, ಸೇವಾ ನಿಯಮಾವಳಿ ಅನ್ವಯ ಕ್ರಮವಹಿಸಲಾಗುವುದು ಎಂದು ಎಚ್ಚರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+