• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚುನಾವಣಾ ವೇಳೆ ರೈತರ ಬಳಿಗೆ ಹೋದ್ರೆ ಹೀಗೇ ಆಗೋದು: ಅಮಿತ್ ಶಾಗೆ ಸಿಎಂ ಟಾಂಗ್

|
   ಅಮಿತ್ ಶಾಗೆ ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ಟಾಂಗ್ | Oneindia Kannada

   ಬೀದರ್, ಫೆ 27: ಚುನಾವಣೆಯ ಸಮಯದಲ್ಲಿ ರೈತರ ಬಳಿಗೆ ಹೋದರೆ ಹೀಗೇ ಆಗೋದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಲೇವಡಿ ಮಾಡಿದ್ದಾರೆ.

   ಹುಮ್ನಾಬಾದ್ ನಲ್ಲಿ ಸೋಮವಾರ (ಫೆ 26) ರೈತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅಮಿತ್ ಶಾಗೆ ಮುಜುಗರವಾಗುವ ಪ್ರಶ್ನೆ ಕೇಳಿದ ರೈತನೊಬ್ಬನಿಂದ ಬಲವಂತವಾಗಿ ಬಿಜೆಪಿ ಮುಖಂಡರು ಮೈಕ್ ಕಸಿದುಕೊಂಡಿರುವ ಘಟನೆ ನಡೆದಿತ್ತು.

   ಈ ಘಟನೆಯನ್ನು ಉಲ್ಲೇಖಿಸಿ ವ್ಯಂಗ್ಯವಾಗಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಚುನಾವಣೆಯ ವೇಳೆ ರೈತರನ್ನು ಭೇಟಿಯಾಗಲು ಹೋದರೆ ಹೀಗೇ ಆಗೋದು. ಕಳೆದ ಮೂರೂವರೆ ವರ್ಷಗಳಿಂದ ಕೇಂದ್ರ ಸರಕಾರ ರೈತರನ್ನು ನಿರ್ಲಕ್ಷ್ಯ ಮಾಡಿಕೊಂಡು ಬರುತ್ತಲೇ ಇದೆ ಎಂದು ತಮ್ಮ ಟ್ವೀಟ್ ನಲ್ಲಿ ಸಿಎಂ ಹೇಳಿದ್ದಾರೆ.

   ಅಮಿತ್ ಶಾ ಗೆ ಪ್ರಶ್ನೆ ಕೇಳಿದ್ದಕ್ಕೆ ಮೈಕ್ ಕಸಿದುಕೊಂಡರು

   ಶಾ ಜೊತೆಗಿನ ಸಂವಾದದ ವೇಳೆ, ನಿಮ್ಮ ಸರ್ಕಾರ ಶ್ರೀಮಂತರ ಸಾಲವನ್ನು ಮನ್ನಾ ಮಾಡಿದ್ದೀರಂತಾ ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ರೈತರ ಸಾಲವನ್ನು ಯಾಕೆ ಮನ್ನಾ ಮಾಡುತ್ತಿಲ್ಲ ಎಂದು ರೈತರೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಅಮಿತ್ ಶಾ, ನಾವು ಯಾವುದೇ ಶ್ರೀಮಂತರ ಸಾಲ ಮನ್ನಾ ಮಾಡಿಲ್ಲ ಎಂದು ಸಮಜಾಯಿಸಿ ನೀಡಿದರೂ ರೈತ ಕೇಳಲಿಲ್ಲ. ಆಗ ಬಲವಂತವಾಗಿ ಮೈಕನ್ನು ರೈತನಿಂದ ಕಿತ್ತುಕೊಳ್ಳಲಾಗಿತ್ತು.

   ಅಮಿತ್ ಶಾ ಅವರ ಸಂವಾದದ ವೇಳೆ, ಮೋದಿ ಸರಕಾರದ ರೈತ ವಿರೋಧಿ ನೀತಿಯನ್ನು ಪ್ರಶ್ನಿಸಿದ ರೈತನ ಜೊತೆ ಬಿಜೆಪಿ ಮುಖಂಡರು ತೀವ್ರ ಒರಟಾಗಿ ನಡೆದುಕೊಂಡರು ಎಂದು ಕರ್ನಾಟಕ ಕಾಂಗ್ರೆಸ್, ಘಟನೆಗೆ ಸ್ವಲ್ಪ ಒಗ್ಗರಣೆ ಸೇರಿಸಿ ಟ್ವೀಟ್ ಮಾಡಿತ್ತು, ಅದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡುತ್ತಾ, ಶಾ ಅವರನ್ನು ಕೆಣಕಿದ್ದರು.

   ಕಾಂಗ್ರೆಸ್‌ಗೆ ಮುಸ್ಲಿಂರ ಮೇಲೆ ಮಾತ್ರ ಪ್ರೀತಿ: ಅಮಿತ್ ಶಾ

   ನೋ ಮೋರ್ ಜುಮ್ಲಾ ಎನ್ನುವ ಹ್ಯಾಷ್ ಟ್ಯಾಗ್

   ನೋ ಮೋರ್ ಜುಮ್ಲಾ ಎನ್ನುವ ಹ್ಯಾಷ್ ಟ್ಯಾಗ್

   #NoMoreJumlas ಎನ್ನುವ ಹ್ಯಾಷ್ ಟ್ಯಾಗ್ ಹಾಕಿ, ಚುನಾವಣೆಯ ಸಮಯದಲ್ಲಿ ರೈತರ ಬಳಿಗೆ ಹೋದರೆ ಹೀಗೇ ಆಗೋದು. ಮೂರೂವರೆ ವರ್ಷಗಳಿಂದ ಕೇಂದ್ರ ಸರಕಾರ ರೈತರನ್ನು ನಿರ್ಲಕ್ಷ್ಯ ಮಾಡಿಕೊಂಡು ಬರುತ್ತಲೇ ಇದೆ. ಕೈಗಾರಿಕೋದ್ಯಮಿಗಳನ್ನು ಓಲೈಸುವುದೇ ಮೋದಿ ಸರಕಾರದ ಕೆಲಸ, ರೈತರ ಸಾಲವನ್ನು ಮನ್ನಾ ಮಾಡಿ ಎಂಎಸ್ಪಿ ಪಾಲಿಸಿಯನ್ನು (minimum support price) ಜಾರಿಗೆ ತನ್ನಿ ಎನ್ನುವ ಸಿದ್ದರಾಮಯ್ಯನವರ ಟ್ವೀಟ್.

   ಸಿಎಂ ಟ್ವೀಟಿಗೆ ಪರವಿರೋಧ ಚರ್ಚೆಯೋ ಚರ್ಚೆ

   ಸಿಎಂ ಟ್ವೀಟಿಗೆ ಪರವಿರೋಧ ಚರ್ಚೆಯೋ ಚರ್ಚೆ

   ನಿಮ್ಮ ಸರಕಾರದ ಅವಧಿಯಲ್ಲಿ ಯಾಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರು? 2015ರಲ್ಲಿ ರಾಹುಲ್ ಗಾಂಧಿ ಯಾಕೆ ಮಂಡ್ಯದಲ್ಲಿ ರೈತರ ಮನೆಗೆ ಭೇಟಿ ನೀಡಿದ್ದು, ಪರಿಹಾರದ ಚೆಕ್ ಯಾಕೆ ಇನ್ನೂ ಕ್ಲಿಯರ್ ಆಗಿಲ್ಲ. ಗಾಂಧಿ ಹೆಸರು ಇಟ್ಕೊಂಡವನು ಪೇಪರ್ ನೋಡ್ತಾವ್ನೆ ಎನ್ನುವ ಟ್ವೀಟ್.

   ಪ್ರಧಾನಿ ಮೋದಿ ಮೌನಕ್ಕೆ ಟ್ವಿಟ್ಟರ್ ನಲ್ಲಿ ಗುದ್ದು ನೀಡಿದ ಸಿದ್ದು!

   ಇನ್ನೊಬ್ಬರನ್ನು ಟೀಕಿಸುವ ಮುನ್ನ, ನಿಮ್ಮನ್ನೊಮ್ಮೆ ನೋಡಿಕೊಳ್ಳಿ

   ಇನ್ನೊಬ್ಬರನ್ನು ಟೀಕಿಸುವ ಮುನ್ನ, ನಿಮ್ಮನ್ನೊಮ್ಮೆ ನೋಡಿಕೊಳ್ಳಿ

   ಬಿಜೆಪಿಯನ್ನು ಪ್ರಶ್ನಿಸುವ ಮುನ್ನ 3500 ರೈತರು ಸಾವನ್ನಪ್ಪಿದ್ದಾರೆ, ನಿಮ್ಮ ಸರಕಾರದ ಅವಧಿಯಲ್ಲಿ ಯಾಕೆ ಅದಕ್ಕೆ ಪರಿಹಾರ ಕಂಡುಕೊಳ್ಲಲಿಲ್ಲ. ಇನ್ನೊಬ್ಬರನ್ನು ಟೀಕಿಸುವ ಮುನ್ನ, ನಿಮ್ಮನ್ನೊಮ್ಮೆ ನೋಡಿಕೊಳ್ಳಿ. ಇನ್ನೇನು ಚುನಾವಣೆ ನಡೆಯಲಿದೆ, ನೀವು (ಸಿದ್ದರಾಮಯ್ಯ) ವಿರೋಧ ಪಕ್ಷಕ್ಕೇ ಲಾಯಕ್ಕು. ರೈತರ ಸಾಲ ಎಲ್ಲಿ ಮನ್ನಾವಾಯಿತು? ಬಿಜೆಪಿ-ಜೆಡಿಎಸ್ ಮತ್ತು ಬಿಜೆಪಿ ಸರಕಾರದಲ್ಲೂ ರೈತರ ಸಾಲಮನ್ನಾವಾಗಿದೆ ಎನ್ನುವ ಟ್ವೀಟ್.

   ರೈತನನ್ನು ನಡೆಸಿಕೊಂಡ ರೀತಿ ನಿಜವಾಗಲೂ ಶಾಕಿಂಗ್

   ರೈತನನ್ನು ನಡೆಸಿಕೊಂಡ ರೀತಿ ನಿಜವಾಗಲೂ ಶಾಕಿಂಗ್

   ಬಿಜೆಪಿ ಈಗಲಾದರೂ ರೈತರ ಸಮಸ್ಯೆಯನ್ನು ಆಲಿಸುವ ಪ್ರಯತ್ನ ಮಾಡುತ್ತಿದೆ. ಐದು ವರ್ಷ ಅಧಿಕಾರದಲ್ಲಿರುವ ನೀವು ರೈತರ ಸಮಸ್ಯೆಯ ಬಗ್ಗೆ ಅರಿತುಕೊಂಡಿದ್ದೀರಾ? ರೈತನನ್ನು ನಡೆಸಿಕೊಂಡ ರೀತಿ ನಿಜವಾಗಲೂ ಶಾಕಿಂಗ್!, ಸಿದ್ದರಾಮಯ್ಯನೇ ನಮಗೆ ಸೂಕ್ತ ಸಿಎಂ ಎನ್ನುವ ಟ್ವೀಟ್.

   ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರ ಮೇಲೆ ಗೋಲಿಬಾರ್, ಕಾಂಗ್ರೆಸ್ ಸರ್ಕಾರ ಲಾಠಿಚಾರ್ಜ್

   ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರ ಮೇಲೆ ಗೋಲಿಬಾರ್, ಕಾಂಗ್ರೆಸ್ ಸರ್ಕಾರ ಲಾಠಿಚಾರ್ಜ್

   ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು..‌ ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರ ಮೇಲೆ ಗೋಲಿಬಾರ್ ಮಾಡಿಸಿದರೆ, ಕಾಂಗ್ರೆಸ್ ಸರ್ಕಾರ ಲಾಠಿಚಾರ್ಜ್ ಮಾಡಿಸಿತು. ನಮಗೆ ಪೊಳ್ಳು ಭರವಸೆ ಬೇಡ... ನಮಗೆ ದೂರದೃಷ್ಟಿಯುಳ್ಳು ಕುಮಾರಣ್ಣನೇ ರಾಜ್ಯಕ್ಕೆ ಸಮರ್ಥ ಮುಖ್ಯಮಂತ್ರಿ. ನಮ್ಮ ಆಯ್ಕೆ ಜೆಡಿಎಸ್. ಬಿಜೆಪಿ ಪಕ್ಷದಲ್ಲಿ ಎಲ್ಲರೂ ಕೊಲೆಗಡುಕರು,ಅತ್ಯಾಚಾರಿಗಳು,ಭ್ರಷ್ಟಾಚಾರಿಗಳು, ಸುಳ್ಳುಕೋರರು ಕೋಮುಗಲಭೆ ಸೃಷ್ಟಿ ಮಾಡಿದವರೇ ಇದ್ದಾರೆಯೇ ವಿನಃ , ಯಾರೂ ಬಡವರಿಗೆ,ರೈತರಿಗೆ ,ದಲಿತರಿಗೆ ಸಹಾಯ ಮಾಡುವಂತೋರು ಕಾಣಲಿಲ್ಲಪ್ಪೋ..

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   If you visit farmers during election time, this is what happens: Karnataka CM Siddaramaiah tweet to BJP National President Amit Shah, after Shah interaction with farmers in Humnabad (Bidar dist) on Feb 26.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more