ಬಿಗ್‌ಬಾಸ್‌ಗೆ ಬಂದರೆ ಯತ್ನಾಳೇ ವಿನ್ನರ್! ಜನರ ಮಸ್ತ್ ಕಾಮಿಡಿ ಟೈಮ್‌ಲೈನ್ ಇಲ್ಲಿದೆ!
"ಇಷ್ಟೊಂದು ನೇರ - ನಿಷ್ಠುರವಾಗಿ ಮಾತನಾಡುವ ಬಸನಗೌಡ ಪಾಟೀಲ್ ಯತ್ನಾಳ್ ಅವರೇನಾದರೂ ಬಿಗ್‌ಬಾಸ್‌ಗೆ ಹೋದರೆ ಅವರೇ ವಿನ್ನರ್ ನೋಡ್ರಿ.... ಅಣ್ಣಾರೆ ಮುಂಜಾನೆದ್ದ ಕೂಡಲೇ ಆ ಅಪ್ಪ - ಮಕ್ಕಳ ವಿಚಾರನೇ ಮಾತಾಡ್ತೀರಲ್ಲ ದಿನಾ ಸುಪ್ರಭಾತ ಕೇಳಿದಂಗೆ ಆಗುತ್ತೆ" ಇದು ಬಿಜೆಪಿಯಿಂದ 6 ವರ್ಷಗಳ ಅವಧಿಗೆ ಉಚ್ಚಾಟಿತಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ಜನ ಹೇಳುತ್ತಿರುವ ಮಾತು. ರಾಜ್ಯ ರಾಜಕೀಯದಲ್ಲಿ ಯತ್ನಾಳ್ ಅವರ ವಿಚಾರ ಗಂಭೀರವಾಗಿ ಚರ್ಚೆಯಾಗುತ್ತಿರುವಾಗಲೇ ಜನ ಮಸ್ತ್ ಕಾಮಿಡಿ ಪಂಚ್‌ಲೈನ್ ಕೊಡುತ್ತಿದ್ದಾರೆ. ರಾಜಕಾರಣಿಗಳು ನಕ್ಕಿದ್ದು ಕಡಿಮೆ ನಗಿಸಿದ್ದು ಜಾಸ್ತಿ! ಜನ ಏನೆಲ್ಲಾ ರಿಯಾಕ್ಟ್ ಮಾಡಿದ್ದಾರೆ ಅಂತ ಇಲ್ಲಿದೆ.
ಹಿಂದುತ್ವ ವಾದಿ, ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯ ರಾಜಕೀಯದಲ್ಲಿ ನೇರಾ - ನೇರ ಮಾತು ಹಾಗೂ ಕೆಲವೊಮ್ಮೆ ಅತಿರೇಕದ ಹೇಳಿಕೆಗಳಿಂದಲೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಫೇಮಸ್ ಆಗಿದ್ದಾರೆ. ರಾಜಕೀಯದಲ್ಲಿ ಅವರಿಗೆ ಈಗ ಸಂಕಷ್ಟದ ಪರಿಸ್ಥಿತಿ. ತವರು ಮನೆಯಿಂದಲೇ ಹೊರಗೆ ಬಂದಿರುವ ಯತ್ನಾಳ್ ಅವರು, ಮುಂದಿನ ರಾಜಕೀಯ ನಡೆ ಏನಾಗಿರಬೇಕು ಎನ್ನುವ ಬಗ್ಗೆ ಗಂಭೀರವಾದ ಚರ್ಚೆ ಮಾಡುತ್ತಿದ್ದಾರೆ.

ನನಗೆ ಹೊಸ ಪಕ್ಷ ಕಟ್ಟುವುದೇನು ದೊಡ್ಡ ಮಾತಲ್ಲ. ಆದರೆ ಅದರಿಂದ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆ. ಹೀಗಾಗಿ, ಲೆಕ್ಕಾಚಾರದ ಹೆಜ್ಜೆಗಳನ್ನು ಇರಿಸುತ್ತಿದ್ದೇನೆ ಅಂತ ಅವರು ಹೇಳಿದ್ದಾರೆ. ಇಷ್ಟೇಲ್ಲ ಗಂಭೀರ ಚರ್ಚೆಗಳು ನಡುವೆ ಜನರ ಕಾಮಿಡಿ ಪಂಚ್ ಮಾತ್ರ ಸೂಪರ್ ಆಗಿದೆ.
ರಾಜ್ಯ ರಾಜಕೀಯದಲ್ಲಿ ಕಳೆದ 15 ದಿನಗಳಿಂದಲೂ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿಚಾರ ಜೋರಾಗಿ ಚರ್ಚೆ ನಡೆಯುತ್ತಿದೆ. ಬಿಜೆಪಿಯಿಂದ ಉಚ್ಚಾಟನೆ ಮಾಡಿದರೂ ಅವರು ಬಿಜೆಪಿಯ ಹಿರಿಯ ನಾಯಕರಾದ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿಲ್ಲ. ಅಪ್ಪ - ಮಕ್ಕಳು ಇರುವ ವರೆಗೂ ನಾನು ಬಿಜೆಪಿಗೆ ಬರಲ್ಲ ಅಂತ ಅವರು ಹೇಳುತ್ತಿದ್ದಾರೆ.
ಪುಜ್ಯ ತಂದೆಯವರಾದ ಎನ್ನುವ ಯತ್ನಾಳ್ ಅವರ ಡೈಲಾಗ್ ಅನ್ನು ಸೂರ್ಯವಂಶ ಚಿತ್ರದ ಸೀನ್‌ನೊಂದಿಗೆ ಲಿಂಕ್ ಮಾಡಿ ಟ್ರೋಲ್ ಮಾಡಲಾಗಿದೆ. ಸೂರ್ಯವಂಶ ಚಿತ್ರದಲ್ಲಿ ಮನೆಯಿಂದ ಹೊರಗೆ ಹಾಕುವ ಸೀನ್ ಇದೆ ಅದನ್ನು ಯತ್ನಾಳ್ ಅವರ ಉಚ್ಚಾಟನೆಗೆ ಹೋಲಿಕೆ ಮಾಡಲಾಗಿದೆ.
ನಾನಿಲ್ಲದೆ ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ ಎಂದಿದ್ದ ಯತ್ನಾಳ್ ಅವರ ಮಾತಿಗೆ ರಾಮಚಂದ್ರ ವಿ ಎನ್ನುವವರು, ನಮಗೆ ಚಿಕ್ಕ ಹುಡುಗರಾಗಿದ್ದಾಗ ಒಂದು ಕಥೆ ಜ್ಞಾಪಕ ಬರುತ್ತಿತ್ತು. ಒಂದೂರಲ್ಲಿ ಒಂದು ಅಜ್ಜಿ ಕೋಳಿ ಹುಂಜ ಇದ್ದಂತೆ ಬೆಳಗ್ಗೆ ಅದು ಕೂಗಿದರೆ ಮಾತ್ರ ಬೆಳಗಾಗುತ್ತದೆ ಎಂದು ಅಜ್ಜಿ ನಂಬಿದ್ದಳಂತೆ. ಒಂದು ದಿವಸ ತನ್ನ ಕೋಳಿ ಹುಂಜ ಒಂದನ್ನು ತೆಗೆದು ಕೊಂಡು ಪಕ್ಕೂರಿಗೆ ಹೋದರಂತೆ ತಾನಿಲ್ಲದೆ ಈ ಊರಲ್ಲಿ ಬೆಳಗಾಗುವುದಿಲ್ಲ ಎಂದು ಅಂತ ಹೇಳಿದ್ದಾರೆ.
ಬಿಗ್‌ಬಾಸ್‌ಗೆ ಬರ್ಲಿ ಯತ್ನಾಳ್ !
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಗ್‌ಬಾಸ್‌ಗೆ ಬರಬೇಕು ಅಂತ ಜನ ಡಿಮ್ಯಾಂಡ್ ಮಾಡ್ತಿದ್ದಾರೆ. ಇಷ್ಟು ನೇರವಾಗಿ ಮಾತನಾಡುವ ವ್ಯಕ್ತಿ ಬಿಗ್‌ಬಾಸ್‌ಗೆ ಬಂದರೆ ಗೆಲ್ಲುವುದು ಫಿಕ್ಸ್ ಅಂತಲೇ ಜನ ಹೇಳುತ್ತಿದ್ದಾರೆ. ಒಟ್ಟಾರೆ ಬಿಗ್‌ಬಾಸ್ ಸೀಸನ್ ಇಲ್ಲದೆ ಇರುವಾಗ ಬಿಗ್‌ಬಾಸ್ ಕಂಟೆಸ್ಟ್‌ನಂತೆ ಯತ್ನಾಳ್ ಅವರು ಗಂಭೀರ ಚರ್ಚೆ ಜೊತೆ ಕಾಮಿಡಿನೂ ಮಾಡ್ತಿದ್ದಾರೆ ಅಂತಿದ್ದಾರೆ ಜನ.












Click it and Unblock the Notifications