ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಕಾಂಗ್ರೆಸ್‌ಗೆ ಏನು ಆಗಲ್ಲ: ಹೀಗಂದಿದ್ಯಾರು

ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ (ಮುಡಾ)ದಿಂದ ಬದಲಿ ನಿವೇಶನ ಪಡೆದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹ ಹೆಚ್ಚಾಗಿದೆ. ವಿರೋಧ ಪಕ್ಷಗಳು ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ವರೆಗ ಬಿಡುವುದಿಲ್ಲ ಎಂದು ಹೇಳಿವೆ. ಇದೀಗ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟರೆ ಏನು ಆಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಶಾಸಕರ ಸಂಖ್ಯೆ 136 ಇದೆ ಎಂದು...

ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ. ಸಿದ್ದರಾಮಯ್ಯಾ ರಾಜೀನಾಮೆ ಕೊಟ್ಟರೆ, ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಆಗಲ್ಲ. 136 ಶಾಸಕರು ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವವರೆಗೆ ಹೋರಾಟ ಮುಂದುವರಿಯಲಿದೆ. ಸಿದ್ದರಾಮಯ್ಯ ಅವರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಈ ಹಿಂದೆ ಅವರು ವಿರೋಧ ಪಕ್ಷದಲ್ಲಿ ಇದ್ದಾಗ ಏನೆಲ್ಲ ಮಾತನಾಡಿದ್ದರು ಎಂದು ನೆನಪಿಸಿಕೊಳ್ಳಬೇಕು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಪ್ರಕರಣ ಬಂದಾಗ ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ರಾಜ್ಯಪಾಲರು ಇದ್ದರು.

If Siddaramaiah resigns nothing will happen to the Congress who said

ಆ ಸಿದ್ದರಾಮಯ್ಯ ರಾಜ್ಯಪಾಲರು ಏನಾದರೂ ಸಲಹೆ ನೀಡಿದರೆ ಅದನ್ನು ಸರ್ಕಾರ ಹಾಗೂ ಸಿಎಂ ಪಾಲಿಸಬೇಕು ಎಂದಿದ್ದರು. ಆದರೆ, ಈಗ ಮುಡಾ ಹಗರಣ ಕುರಿತು ವಿಚಾಣೆ ನಡೆಯಬೇಕು ಎಂದು ರಾಜ್ಯಪಾಲರು ಸೂಚಿಸಿದ್ದರು. ಇದನ್ನು ಧಿಕ್ಕರಿಸಿ ಹೈಕೋರ್ಟ್‌ಗೆ ಹೋದರು.

ಹೈಕೋರ್ಟ್‌ನಲ್ಲೂ ಸಹ ತನಿಖೆಯಾಗಬೇಕು ಎಂದೇ ಆದೇಶವಾಗಿದೆ. ಎಫ್ಐಆರ್‌ನಲ್ಲಿ ಮುಖ್ಯಮಂತ್ರಿ ಎ1 ಆರೋಪಿ, ಎರಡನೇ ಆರೋಪಿ ಸಿದ್ದರಾಮಯ್ಯಾ ಅವರ ಪತ್ನಿ, ಎ3 ಆರೋಪಿಯಾಗಿ ಅವರ ಭಾಮೈದ ಇದ್ದಾರೆ. ಇಷ್ಟೆಲ್ಲ ಬೆಳವಣಿಗೆಯಾದರೂ, ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿಲ್ಲ. ಈಗಲಾದರು ಸಿದ್ದರಾಮಯ್ಯ ಅವರು ಗೌರವಯುತವಾಗಿ ರಾಜೀನಾಮೆ ನೀಡಲಿ ಎಂದಿದ್ದಾರೆ.

If Siddaramaiah resigns nothing will happen to the Congress who said

ಜಾರ್ಜ್ ಫರ್ನಾಂಡಿಸ್ ಸಮಾಜವಾದಿ: ಸಿದ್ದರಾಮಯ್ಯ ಅಲ್ಲ

ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರು ಸಮಾಜವಾದದ ಬಗ್ಗೆ ಮಾತನಾಡುತ್ತಾರೆ. ಆದರೆ, ಪಾಲಿಸುವುದಿಲ್ಲ. ಮೊದಲು ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ಸಮಾಜವಾದದಲ್ಲಿ ಜಾರ್ಜ್ ಫರ್ನಾಂಡಿಸ್ ಅವರು ಮಾದರಿ. ಕಾರ್ಗಿಲ್ ಶವಪೆಟ್ಟಿಗೆ ಹಗರಣ ಆರೋಪ ಎದುರಾದಾಗ ರಾಜೀನಾಮೆ ಕೊಟ್ಟು ಮಾದರಿಯಾಗಿದ್ದರು.

ಆರೋಪ ಸಂಬಂಧ ತನಿಖೆ ನಡೆಯಿತು ಅಲ್ಲದೇ ಆ ಆರೋಪ ಸುಳ್ಳಾಯಿತು. ಆ ನಂತರ ಮತ್ತೇ ಸಚಿವರಾಗಿದ್ದರು. ಅದೇ ಮಾದರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಸರಿಸಲಿ. ಈಗ ರಾಜೀನಾಮೆ ಕೊಡಲಿ, ಮತ್ತೇ ಬೇಕಾದರೆ ಸಿಎಂ ಆಗಲಿ ಎಂದಿದ್ದಾರೆ.

ಚುನಾವಣಾ ಬಾಂಡ್‌ನಿಂದ ಕಾಂಗ್ರೆಸ್‌ಗೆ ಹೆಚ್ಚು ಲಾಭ!

ಚುನಾವಣಾ ಬಾಂಡ್‌ನಿಂದ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳಿಗೇ ಹೆಚ್ಚು ಲಾಭವಾಗಿದೆ. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರ ಮೇಲೆ ಎಫ್‌ಐಆರ್‌ ದಾಖಲಿದ್ದು, ಅವರು ಮೊದಲು ರಾಜೀನಾಮೆ ನೀಡಲಿ ಎನ್ನುವ ಬಗ್ಗೆ ಮಾತನಾಡುವಾಗ ಈ ವಿಷಯವನ್ನು ಹೇಳಿದ್ದಾರೆ. ಚುನಾವಣಾ ಬಾಂಡ್ ಹಗರಣ ಅಲ್ಲ, ಇದೊಂದು ಕಾನೂನು ಬದ್ಧ ಪ್ರಕ್ರಿಯೆ ಆಗಿದೆ ಎಂದು ಅರವಿಂದ ಬೆಲ್ಲದ ಅವರು ಹೇಳಿದ್ದಾರೆ.

ಚುನಾವಣಾ ಬಾಂಡ್‌ ಎನ್ನುವುದು ಹಗರಣ ಅಲ್ಲ. ಇದೊಂದು ಕಾನೂನು ಬದ್ಧ ಪ್ರಕ್ರಿಯೆ ಆಗಿದೆ. ಚುನಾವಣಾ ಬಾಂಡ್‌ನಿಂದ ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳಿಗೆ ಹೆಚ್ಚು ಲಾಭವಾಗಿದೆ. ಚುನಾವಣಾ ಬಾಂಡ್‌ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ 28 ಕೋಟಿ ರೂ.,‌ ಜನಸೇನಾ 21, ಸಮಾಜವಾದಿ 13, ಜೆಎಂಎಂ 12 ಹಾಗೂ ಎಂಜಿಪಿ ಪಕ್ಷಕ್ಕೆ 12 ಕೋಟಿ ರೂಪಾಯಿ ಚುನಾವಣಾ ಬಾಂಡ್‌ ಸಿಕ್ಕಿದೆ. ಇದು ತಪ್ಪಲ್ಲ. ಚುನಾವಣೆಗೆ ಮಾತ್ರ ಹಣ ತೆಗೆದುಕೊಳ್ಳುವ ಪ್ರಕ್ರಿಯೆ ಆಗಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+