ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮತ್ತೆ ಪಿಎಂ ಆದರೆ ರಾಜಕೀಯ ಸನ್ಯಾಸ: ಗೌಡ್ರ ನಂತರ ರೇವಣ್ಣ

|
Google Oneindia Kannada News

Recommended Video

Lok Sabha Elections 2019: ಈ ಒಂದು ಹೇಳಿಕೆಯಿಂದ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗ್ತಾರಾ?

ಹದಿನೇಳನೇ ಲೋಕಸಭಾ ಚುನಾವಣೆಯ ಏಳು ಹಂತದ ಮತದಾನದ ಮೊದಲ ಹಂತ ದೇಶದ ವಿವಿಧ ರಾಜ್ಯಗಳಲ್ಲಿನ 91ಕ್ಷೇತ್ರಗಳಿಗೆ ಗುರುವಾರ (ಏ 11) ನಡೆದಿದೆ. ರಾಜ್ಯದಲ್ಲಿ ಏ 18 ಮತ್ತು ಏ 23ರಂದು ಚುನಾವಣೆ ನಡೆಯಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಿಜೆಪಿ ಒಂದು ಕಡೆ, ಜೆಡಿಎಸ್-ಕಾಂಗ್ರೆಸ್ ಇನ್ನೊಂದು ಕಡೆ ಬಿರುಸಿನ ಪ್ರಚಾರ ನಡೆಸುತ್ತಿದೆ. ಮೂರೂ ಪಕ್ಷಗಳ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ 'ಮನೆಮಾತಾಗಿದ್ದಾರೆ'. ಒಬ್ಬರು ಮೋದಿಯೇ ನಮ್ಮ ಅಭ್ಯರ್ಥಿಯೆಂದರೆ, ಮತ್ತೊಬ್ಬರು ಅವರೇ ನಮ್ಮ ಎದುರಾಳಿ ಅನ್ನುತ್ತಿದ್ದಾರೆ.

ಮೋದಿ ಪ್ರಧಾನಿಯಾದ್ರೆ ದೇವೇಗೌಡ್ರು ದೇಶ ಬಿಡ್ತೀನಿ ಅಂದಿದ್ರು, ಬಿಟ್ಟಿದ್ದಾರಾ?: ಈಶ್ವರಪ್ಪ ವಾಗ್ದಾಳಿ ಮೋದಿ ಪ್ರಧಾನಿಯಾದ್ರೆ ದೇವೇಗೌಡ್ರು ದೇಶ ಬಿಡ್ತೀನಿ ಅಂದಿದ್ರು, ಬಿಟ್ಟಿದ್ದಾರಾ?: ಈಶ್ವರಪ್ಪ ವಾಗ್ದಾಳಿ

ಮಗ ಪ್ರಜ್ವಲ್ ನ ಉಜ್ವಲ ರಾಜಕೀಯ ಭವಿಷ್ಯಕ್ಕಾಗಿ ಹಾಸನದಲ್ಲೇ ಬೀಡುಬಿಟ್ಟಿರುವ ಲೋಕೋಪಯೋಗಿ ಸಚಿವ, ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎನ್ನುವ ಭವಿಷ್ಯವನ್ನು ನುಡಿದಿದ್ದಾರೆ. ಅವರು ಈ ಮಾತನ್ನು ಪತ್ರಿಕಾಗೋಷ್ಥಿಯಲ್ಲಿ ಹೇಳುವಾಗ, ಅವರ ಕೈಯಲ್ಲಿ ಲಿಂಬೆಹಣ್ಣು ಇರಲಿಲ್ಲ.

ಇಷ್ಟು ದಿನ ಅಪ್ಪ ಮಕ್ಕಳ ಕಾಟವಿತ್ತು ಈಗ ಮೊಮ್ಮಕ್ಕಳ ಕಾಟ ಎಂದ ಯಡಿಯೂರಪ್ಪ ಇಷ್ಟು ದಿನ ಅಪ್ಪ ಮಕ್ಕಳ ಕಾಟವಿತ್ತು ಈಗ ಮೊಮ್ಮಕ್ಕಳ ಕಾಟ ಎಂದ ಯಡಿಯೂರಪ್ಪ

ನನ್ನನ್ನು 'ಲಿಂಬೆಹಣ್ಣು ರೇವಣ್ಣ' ಎಂದು ಲೇವಡಿ ಮಾಡಲಾಗುತ್ತಿದೆ ಎಂದಿರುವ ರೇವಣ್ಣ, ಸಂಖ್ಯಾಶಾಸ್ತ್ರದ ಪ್ರಕಾರ, ಮೋದಿ ಪ್ರಧಾನಿಯಾಗುವುದಿಲ್ಲ ಎಂದು ಮಾಧ್ಯಮದವರ ಮುಂದೆ ಚಾಲೆಂಜ್ ಮಾಡಿದ್ದು, ರಾಜಕೀಯ ಸನ್ಯಾಸದ ಬಗ್ಗೆ ಮಾತನ್ನಾಡಿದ್ದಾರೆ. ರೇವಣ್ಣ ಅವರ ಹೇಳಿಕೆ, 'ಮೋದಿ ಮುಂದಿನ ಭವಿಷ್ಯದ ಮುನ್ಸೂಚನೆಯಾ' ಎಂದು ಪ್ರಶ್ನಿಸುವಂತಾಗಿದೆ.

ಕುಮಾರಸ್ವಾಮಿ ಅವರಪ್ಪನಾಣೆಗೂ ಮುಖ್ಯಮಂತ್ರಿಯಾಗುವುದಿಲ್ಲ ಎಂದಿದ್ದ ಸಿದ್ದು

ಕುಮಾರಸ್ವಾಮಿ ಅವರಪ್ಪನಾಣೆಗೂ ಮುಖ್ಯಮಂತ್ರಿಯಾಗುವುದಿಲ್ಲ ಎಂದಿದ್ದ ಸಿದ್ದು

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದ ಮೇಲೆ ಯಾವ ರೀತಿ ಸಿದ್ದರಾಮಯ್ಯ ಹರಿಹಾಯುತ್ತಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಿಎಂ ಹುದ್ದೆಯ ಹಗಲುಕನಸು ಕಾಣುವುದನ್ನು ಬಿಡಿ, ಕುಮಾರಸ್ವಾಮಿ ಅವರಪ್ಪನಾಣೆಗೂ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಸಿದ್ದು ಹೇಳಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರ ಜೊತೆ, ತಾವೇ ಕುಮಾರಸ್ವಾಮಿ ಮನೆಬಾಗಿಲಿಗೆ ಹೋಗಿ, ಸಿಎಂ ಹುದ್ದೆಯ ಆಫರ್ ನೀಡುವಂತಾಯಿತು.

ಮೋದಿ ಮತ್ತೆ ಪ್ರಧಾನಿಯಾದರೆ ಪ್ರಜಾಪ್ರಭುತ್ವ ಉಳಿಯಲ್ಲ: ಸಿದ್ದರಾಮಯ್ಯಮೋದಿ ಮತ್ತೆ ಪ್ರಧಾನಿಯಾದರೆ ಪ್ರಜಾಪ್ರಭುತ್ವ ಉಳಿಯಲ್ಲ: ಸಿದ್ದರಾಮಯ್ಯ

ಮೋದಿ ಪ್ರಧಾನಿಯಾದರೆ, ನಾನು ದೇಶಬಿಟ್ಟು ಹೋಗುತ್ತೇನೆ

ಮೋದಿ ಪ್ರಧಾನಿಯಾದರೆ, ನಾನು ದೇಶಬಿಟ್ಟು ಹೋಗುತ್ತೇನೆ

2014ರ ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್ ವರಿಷ್ಠ ದೇವೇಗೌಡ್ರು, ಮೋದಿಯವರನ್ನು ಟೀಕಿಸುವ ಬರದಲ್ಲಿ, ಮೋದಿ ಏನಾದರೂ ಪ್ರಧಾನಿಯಾದರೆ, ನಾನು ದೇಶಬಿಟ್ಟು ಹೋಗುತ್ತೇನೆ ಎನ್ನುವ ಮಾತನ್ನು ಹೇಳಿದ್ದರು. ಮೋದಿ ಪ್ರಧಾನಿಯಾದರು. 2019ರ ಚುನಾವಣೆಯಲ್ಲೂ ಗೌಡ್ರು, ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿಪಕ್ಷದ ಅಭ್ಯರ್ಥಿ. ಆದರೆ, ಈ ಬಾರಿ ದೇಶಬಿಟ್ಟು ಹೋಗುವ ಮಾತನ್ನು ದೊಡ್ಡ ಗೌಡ್ರು ಆಡುತ್ತಿಲ್ಲ.

ಮೋದಿ ಅವರಪ್ಪನಾಣೆಗೂ ಮತ್ತೆ ಪ್ರಧಾನಿಯಾಗುವುದಿಲ್ಲ

ಮೋದಿ ಅವರಪ್ಪನಾಣೆಗೂ ಮತ್ತೆ ಪ್ರಧಾನಿಯಾಗುವುದಿಲ್ಲ

ಹಾಲೀ ಲೋಕಸಭಾ ಚುನಾವಣೆಯ ವೇಳೆಯ ಪ್ರಚಾರದ ವೇಳೆಯೂ ಮಾಜಿ ಸಿಎಂ ಸಿದ್ದರಾಮಯ್ಯ, ಮೋದಿ ಅವರಪ್ಪನಾಣೆಗೂ ಮತ್ತೆ ಪ್ರಧಾನಿಯಾಗುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ನೀವು ಕುಮಾರಸ್ವಾಮಿಯವರ ವಿಚಾರದಲ್ಲೂ ಹೀಗೆ ಹೇಳಿದ್ರಿ, ಆಮೇಲೆ ಏನಾಯಿತು ಎಂದು ನಿಮಗೆ ಗೊತ್ತಿದೆ. ಈಗ ಮೋದಿ ಬಗ್ಗೆ ಹೇಳುತ್ತಿದ್ದೀರಾ, ನೀವು ಏನು ಹೇಳುತ್ತೀರೋ ಅದು ಉಲ್ಟಾ ಆಗುತ್ತೆ ಎಂದು ಬಿಜೆಪಿಯವರು ಸಿದ್ದು ವಿರುದ್ದ ವ್ಯಂಗ್ಯವಾಡುತ್ತಿದ್ದಾರೆ.

ಮೋದಿ ಮತ್ತೆ ಪಿಎಂ ಆದರೆ ರಾಜಕೀಯ ಬಿಟ್ಟು ಹೋಗ್ತೀನಿ: ಎಚ್ ಡಿ ರೇವಣ್ಣಮೋದಿ ಮತ್ತೆ ಪಿಎಂ ಆದರೆ ರಾಜಕೀಯ ಬಿಟ್ಟು ಹೋಗ್ತೀನಿ: ಎಚ್ ಡಿ ರೇವಣ್ಣ

ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ

ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ

ಈಗ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ, ಮೋದಿ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎನ್ನುವ ಮಾತನ್ನು ಮೈಸೂರಿನಲ್ಲಿ ಆಡಿದ್ದಾರೆ. ನನ್ನ ಮಾತು ನಿಜ, ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂದು ರೇವಣ್ಣ ಹೇಳುತ್ತಾ, ಚುನಾವಣೆ ನಡೆಯುವ ದಿನ 18, ನಮಗೆ ಅದು ಶುಭಸೂಚಕ ಎಂದು ತಮ್ಮದೇ ಲೆಕ್ಕಾಚಾರದಲ್ಲಿ ರೇವಣ್ಣ ಹೇಳಿದ್ದಾರೆ.

ಅಂದು ಎಚ್ಡಿಕೆಗೆ ನಂತರ ಮೋದಿಗೆ, ಇದರ ಮಧ್ಯೆ ಗೌಡ್ರು, ರೇವಣ್ಣ

ಅಂದು ಎಚ್ಡಿಕೆಗೆ ನಂತರ ಮೋದಿಗೆ, ಇದರ ಮಧ್ಯೆ ಗೌಡ್ರು, ರೇವಣ್ಣ

ಅಂದು ಕುಮಾರಸ್ವಾಮಿ ಬಗ್ಗೆ ಸಿದ್ದರಾಮಯ್ಯ ಹೇಳಿದ್ದು, ಅದಾದ ನಂತರ ಮೋದಿ ಬಗ್ಗೆ ಹೇಳಿದ್ದು. ಇದರ ಮಧ್ಯೆ ದೇವೇಗೌಡ್ರ ದೇಶಬಿಟ್ಟು ಹೋಗುವ ಹೇಳಿಕೆ, ಇವೆಲ್ಲದರ ನಡುವೆ ಈಗ ರೇವಣ್ಣ ಅವರ ಹೇಳಿಕೆ. ರಾಜಕೀಯ ಮುಖಂಡರು ನೀಡುವ ಹೇಳಿಕೆ, ಸಂಖ್ಯಾಶಾಸ್ತ್ರವನ್ನು ನಂಬುವುದಾದರೆ, ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರಾ ಅಥವಾ ವಿರೋಧ ಪಕ್ಷದ ನಾಯಕರಾಗಲಿದ್ದಾರಾ ಎನ್ನುವುದೇ ಕುತೂಹಲದ ಅಂಶ.

English summary
If Narendra Modi again becomes Prime Minister of India, I will take political retirement: Karnataka PWD Minister HD Revanna statement in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X