'ನಾನು ಬಿವೈ ವಿಜಯೇಂದ್ರ ಸ್ಥಾನದಲ್ಲಿದ್ದಿದ್ರೆ ಯತ್ನಾಳರನ್ನು ಪಕ್ಷದಿಂದ ಅಮಾನತು ಮಾಡ್ತಿದ್ದೆ'

ತುಮಕೂರು,ಫೆಬ್ರವರಿ 15: ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಒಂದು ವೇಳೆ ಬಿವೈ ವಿಜಯೇಂದ್ರ ಅವರ ಸ್ಥಾನದಲ್ಲಿ ನಾನೇನಾದರೂ ಇದ್ದಿದ್ದರೆ ಕೂಡಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಅಮಾನತು ಮಾಡುತ್ತಿದ್ದೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ತಿಳಿಸಿದರು.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣ ಸೃಷ್ಟಿಯಾಗಿದೆ ಎಂದು ಬಿಜೆಪಿ ನಾಯಕರ ಆರೋಪಗಳಿಗೆ ಸಚಿವ ಕೆ ಎನ್ ರಾಜಣ್ಣ ಇದೀಗ ತಿರುಗೇಟು ನೀಡಿದ್ದಾರೆ. ಬಿಜೆಪಿ ತಟ್ಟೆಯಲ್ಲೆ ಹೆಗ್ಗಣ ಸತ್ತಿದೆ ನಮಗೆ ಹೇಳೋಕೆ ಬರುತ್ತಾರೆ. ನಾನು ವಿಜಯೇಂದ್ರ ಸ್ಥಾನದಲ್ಲಿ ಇದ್ದಿದ್ರೆ ಶಾಸಕ ಯತ್ನಾಳ್ ಅವರನ್ನು ಅಮಾನತು ಮಾಡುತ್ತಿದ್ದೆ. ವಿಜಯೇಂದ್ರ ಬಗ್ಗೆ ಯತ್ನಾಳ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ.ಇವರು ಒಂದು ಬಾರಿಯಾದರೂ ನೋಟಿಸ್ ಕೊಟ್ಟಿದ್ದಾರಾ? ನಮ್ಮಲ್ಲೂ ಶಿಸ್ತು ಸಮಿತಿ ಇರುತ್ತೆ ಅಲ್ವಾ? ನಮ್ಮಲ್ಲಿ ಭಿನ್ನಮತ ಇರಬಹುದು ಆದರೆ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಹೇಳಿದರು.

If I Had Been In Vijayendra Position Yatnal Would Have Suspended From Party KN Rajanna

ಸಿಎಂ ಅಧಿಕಾರ ಅವಧಿ ಎರಡುವರೆ ವರ್ಷ ಅಂತ ಎಲ್ಲಿದೆ ಕೆಪಿಸಿಸಿಯಲ್ಲಿ ಏನಾದರೂ ಹೀಗೆ ಇದೆಯಾ ಹೈಕಮಾಂಡ್ ನಾಯಕರು ಸಹಿ ಮಾಡಿಕೊಟ್ಟಿದ್ದರಲ್ಲಿ ಇದೆಯಾ ನಮ್ಮ ಪಕ್ಷದಲ್ಲಿ ಎಲ್ಲೂ ಹೀಗೆ ಬರೆದಿಲ್ಲ ಹಾಗೆ ಹೇಳಿಯೂ ಇಲ್ಲ.ರಾಜ್ಯದಲ್ಲಿ ದಾವಣಗೆರೆ ಚಿತ್ರದುರ್ಗ ಅಥವಾ ಹುಬ್ಬಳ್ಳಿಯಲ್ಲಿ ದಲಿತ ಸಮಾವೇಶ ಮಾಡುವ ಉದ್ದೇಶ ಇದೆ. ಸಮಾವೇಶಕ್ಕೆ ಎಐಸಿಸಿ ನಾಯಕರಿಗೆ ಆಹ್ವಾನ ನೀಡಲಾಗುತ್ತೆ. ಕಾಂಗ್ರೆಸ್ ಪಕ್ಷದ ಅಡಿಯಲ್ಲಿಯೇ ಶೋಷಿತರ ಸಮಾವೇಶವನ್ನು ನಡೆಸಲಾಗುತ್ತದೆ ಮುಂದಿನ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಸಮಾವೇಶ ನಡೆಸಲು ಚಿಂತನೆ ನಡೆಯುತ್ತಿದೆ ಹೈಕಮಾಂಡ್ ನಾಯಕರನ್ನು ಒಪ್ಪಿಸಿಯೇ ಈ ಒಂದು ಸಮಾವೇಶ ನಡೆಸುತ್ತೇವೆ ಎಂದು ಕೆ ಎನ್ ರಾಜಣ್ಣ ತಿಳಿಸಿದರು.

ಹಲವಾರು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು. ದೆಹಲಿ ಹೋಗಿದ್ದು ಬಂದಿದ್ದು ಅಂತ್ಯದಲ್ಲಿ ಹೇಳ್ತೀನಿ. ಹರಿಪ್ರಸಾದ್ ಅವರು ಒಂದು ಕಾಲದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ಆಗ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇ. ಅವರು ಎಐಸಿಸಿ ನಿರ್ದೇಶನದಂತೆ ಹರಿಯಾಣಕ್ಕೆ ಉಸ್ತುವಾರಿಯಾಗಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೆನೆ ಎಂದು ಬಿ ಕೆ ಹರಿಪ್ರಸಾದ್‌ ಹೇಳಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರ ವಾಕ್ಸಮರ ವಿಚಾರವಾಗಿ ಮಾತನಾಡಿ, ತುಮಕೂರು ಗ್ರಾಮಾಂತರದ ಹಾಲಿ ಮಾಜಿ ಗಳು ಆರೋಪ ಪ್ರತ್ಯರೋಪ ಮಾಡ್ತಾ ಇದ್ದಾರೆ. ಇಬ್ಬರಿಗೂ ಹೇಳೋದು ವೈಯಕ್ತಿಕವಾಗಿ ಮಾತನಾಡೋದು ಭೂಷಣ ಅಲ್ಲ. ಸುರೇಶ್ ಗೌಡ್ರು ತಾಳ್ಮೆ ಇಟ್ಟುಕೊಳ್ಳಬೇಕು. ಗೌರಿಶಂಕರ್ ಕೂಡಾ ಪದ ಬಳಕೆಯಲ್ಲಿ ಯಾರ ಮನಸ್ಸಿಗೂ ನೋವಾಗದಂತೆ ಪದ ಬಳಿಸಬೇಕು. ಇಬ್ಬರು ಏಕವಚದಲ್ಲಿ ಮಾತನಾಡುವ ಕೆಲಸ ಮಾಡಬಾರದು ಎಂದು ತಿಳಿಸಿದರು.

ಡಾ‌.ಜಿ.ಪರಮೇಶ್ವರ್ ಅವರು ಗೃಹಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರಿಗೆ ತೇಜೋವಧೆ ಮಾಡುವ ಹಾಗೇ ಮಾತನಾಡೋದು ಖಂಡನೀಯ.ಪರಮೇಶ್ವರ್ ಬಗ್ಗೆ ಆಡಿರೋ ಮಾತು ವಾಪಾಸ್ ಪಡೆಯಬೇಕು ಹಾಗೂ ಕ್ಷೇತ್ರದ ಜನರ ಕ್ಷಮೆ ಕೇಳಬೇಕು. ಕೂಡಲೇ ಸುರೇಶ್ ಗೌಡ ಕ್ಷಮೆ ಕೇಳಬೇಕು. ತುಮಕೂರು ಗ್ರಾಮಾಂತರಕ್ಕೆ ತನ್ನದೇ ಆದ ಘನತೆ ಗೌರವ ಇದೆ. ಇವರು ಕೂಡಾ ಪ್ರತಿನಿಧಿಸಿ ಗೆದ್ದಿದ್ದಾರೆ. ಪಕ್ಷ ಘನತೆ ಮೇಲೆ ಅವರು ಗೆಲ್ಲೋದಕ್ಕೆ ಸಾಧ್ಯ.
ನಾವು ನಮ್ಮ ಪದ ಬಳಕೆ ಅದ್ದುಬಸ್ತಲಿ ಇಟ್ಟುಕೊಂಡು ಮಾತನಾಡಲಿ ಎಂದರು.

ಪರಮೇಶ್ವರ್ ವಿಚಾರವಾಗಿ ಕೊರಟಗೆರೆ ಕ್ಷೇತ್ರದ ಜನತೆಗೆ ಕ್ಷಮೆ ಕೇಳಬೇಕು. ತುಮಕೂರು ಗ್ರಾಮಾಂತರ ಜನರ ಕ್ಷಮೆಯನ್ನು ಕೇಳಬೇಕು ಸುರೇಶ್ ಗೌಡ. ಗ್ರಾಮಾಂತರ ಪಕ್ಷ ಜಾತಿ ಆಧಾರದಲ್ಲಿ ಗಲಭೆಯಾಗಿಲ್ಲ, ಸುಸಂಸ್ಕೃತ ಕ್ಚೇತ್ರದಿಂದ ಬಂದಿದ್ದು ಅವರಿಗೆ ಗೌರವ ಸಲ್ಲಿಸಬೇಕು. ಹಾಗಾಗಿ ಅವರು ಕ್ಷೇತ್ರದ ಜನತೆಗೆ ಕ್ಷಮೆ ಕೇಳಬೇಕು. ಅವರು ಯಾರೊಬ್ಬರ ಬಗ್ಗೆ ಅಸಂಭಂದ ಪದ ಬಳಕೆ ಸರಿಯಿಲ್ಲ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+