ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ವೈರಲ್ ಆಗಿದ್ದ ಗುಪ್ತಚರ ಇಲಾಖೆ ವರದಿ ಸುಳ್ಳು

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಏಪ್ರಿಲ್ 8: ಚಾಮುಂಡೇಶ್ವರಿ ಕ್ಷೇತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆಗೆ ಸೂಕ್ತವಲ್ಲ ಎಂಬುದಾಗಿ ಗುಪ್ತಚರ ಇಲಾಖೆ ವರದಿ ನೀಡಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ವರದಿಯ ಪ್ರತಿಯೂ ಎಲ್ಲೆಡೆ ಹರಿದಾಡಿತ್ತು. ಈ ಪತ್ರವೀಗ ಸುಳ್ಳು ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ತಾವು ಚಾಮುಂಡೇಶ್ವರಿಯಿಂದ ಸ್ಪರ್ಧಿಸುವುದಾಗಿ ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಹರಿದಾಡಿದ್ದ ವರದಿಯಲ್ಲಿ, ಚಾಮುಂಡೇಶ್ವರಿ ಸಿಎಂ ಸ್ಪರ್ಧೆಗೆ ಸೂಕ್ತವಲ್ಲ ಎಂದು ಹೇಳಲಾಗಿತ್ತು.

ಸಿಎಂ ಸ್ಪರ್ಧೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ: ಅಸಲಿಯೊ, ನಕಲಿಯೊ

"ಸೂಚನೆ ಮೇರೆಗೆ ವಿಧಾನಸಭಾ ಕ್ಷೇತ್ರಗಳ ಪರಿಶೀಲನೆಯನ್ನು ನಾವು ನಡೆಸಿದ್ದೇವೆ. ಇದರ ಫಲಿತಾಂಶಗಳು ಈ ಕೆಳಗಿನಂತಿವೆ. ಜಾತ್ಯಾತೀತ ಜನತಾದಳದ ನಾಯಕ ಜಿಟಿ ದೇವೇಗೌಡ ಮತ್ತು ಸ್ಥಳೀಯ ಒಕ್ಕಲಿಗ ನಾಯಕರು ಒಕ್ಕಲಿಗ ಮತಗಳ ಧ್ರುವೀಕರಣ ನಡೆಸಿದ್ದಾರೆ. ಹಾಗಾಗಿ ಚಾಮುಂಡೇಶ್ವರಿ ಉತ್ತಮ ಆಯ್ಕೆಯಲ್ಲ," ಎಂದು ಈ ವರದಿಯಲ್ಲಿ ಹೇಳಲಾಗಿತ್ತು.

“IB document advising Siddaramaiah not to fight from Chamundeshwari fake”

ವರುಣಾ, ಬಸವಕಲ್ಯಾಣ, ಗಂಗಾವತಿ ಮತ್ತು ಶಾಂತಿನಗರ ಮುಖ್ಯಮಂತ್ರಿ ಸ್ಪರ್ಧೆಗೆ ಉತ್ತಮ ಕ್ಷೇತ್ರಗಳು ಎಂದು ಇದರಲ್ಲಿ ಸಲಹೆ ನೀಡಲಾಗಿತ್ತು.

ಆದರೆ ಈ ಕುರಿತು ಟ್ಟಿಟ್ಟರ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇದು ನಕಲಿ ದಾಖಲೆ. ಬಿಜೆಪಿ ನಾಯಕರು ಯಾಕೆ ನಕಲಿ ದಾಖಲೆಗಳನ್ನು ಮತ್ತು ಸುದ್ದಿಗಳನ್ನು ನೋಡಿದಾಗ ಉತ್ತೇಜಿತರಾಗುತ್ತಾರೆ. ವಿಷಯಗಳನ್ನು ಇಟ್ಟುಕೊಂಡು ಹೋರಾಡಿ. ನೀವು ಮತದಾರರಿಗೆ ಏನನ್ನು ನೀಡಲು ಹೊರಟಿದ್ದೀರಿ," ಎಂದು ಕಿಡಿಕಾರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A note apparently out by the Karnataka State Intelligence Bureau suggests that Chamundeshwari is not a safe seat for Chief Minister, Siddaramaiah. The Chief Minister has called the note fake.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ