ಶಾಸಕರ ಪ್ರಶ್ನೆಗೆ ಉತ್ತರ ಕೊಡಲು ಸಚಿವರ ನಿರಾಸಕ್ತಿ: ಸಭಾಧ್ಯಕ್ಷರಿಂದಲೇ ಸಭಾತ್ಯಾಗ | Karnataka Assembly Speaker
ಕರ್ನಾಟಕ ನಮ್ಮ ದೇಶದಲ್ಲೇ ಅತ್ಯಂತ ಶ್ರೀಮಂತ ರಾಜ್ಯಗಳ ಪೈಕಿ ಒಂದಾಗಿದ್ದು, ಲಕ್ಷಾಂತರ ಕೋಟಿ ರೂಪಾಯಿ ಆದಾಯ ಸೃಷ್ಟಿಸುವ ರಾಜ್ಯವಾಗಿದೆ. ಇದೇ ಕಾರಣಕ್ಕೆ ಕರ್ನಾಟಕದ ರಾಜಕೀಯ ಹಾಗೂ ವಿಧಾಸಭೆ ಕಲಾಪಗಳ ಬಗ್ಗೆ ಇಡೀ ದೇಶ ಗಮನ ಇಡುತ್ತದೆ. ಹೀಗಿದ್ದಾಗ ಕರ್ನಾಟಕ ವಿಧಾನಸಭೆ ದೊಡ್ಡ ಇತಿಹಾಸ ಹೊಂದಿದ್ದು, ಹೀಗಿದ್ದಾಗ ಕರ್ನಾಟಕದ ವಿಧಾನಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಘಟನೆ ಸಂಭವಿಸಿದೆ. ಸಭಾಧ್ಯಕ್ಷರಿಂದಲೇ ದಿಢೀರ್ ಸಭಾತ್ಯಾಗ ನಡೆದಿರುವುದು ಇದೀಗ ಗಮನ ಸೆಳೆದಿದೆ. ಹಾಗಾದರೆ ಸಭಾಧ್ಯಕ್ಷರು ದಿಢೀರ್ ಸಭಾತ್ಯಾಗ ಮಾಡಿದ್ದು ಏಕೆ? ಬನ್ನಿ ತಿಳಿಯೋಣ.
ಅಂದಹಾಗೆ ಕರ್ನಾಟಕದಲ್ಲಿ ಇದೀಗ ಆಯವ್ಯಯ ಎಂದರೆ ವಾರ್ಷಿಕ ಬಜೆಟ್ ಕುರಿತು ಅಧಿವೇಶನವನ್ನ ನಡೆಸಲಾಗುತ್ತಿದ್ದು, ಈ ಹಿನ್ನೆಲೆ ಶಾಸಕರು ಪ್ರಶ್ನೆಗಳನ್ನ ಮುಂದಿಡುತ್ತಿದ್ದಾರೆ. ಆದರೆ ವಿಧಾನಸಭೆಯ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಚಿವರು & ಅಧಿಕಾರಿಗಳು ಸಮರ್ಪಕ ಉತ್ತರ ನೀಡದ ಕಾರಣಕ್ಕೆ ದಿಢೀರ್ ವಿಧಾನಸಭೆ ಸಭಾಧ್ಯಕ್ಷರು ಕೋಪಗೊಂಡಿದ್ದಾರೆ. ಅಲ್ಲದೆ ಸಚಿವರು & ಅಧಿಕಾರಿಗಳ ವರ್ತನೆಯ ಕಾರಣ ಬೇಸರಗೊಂಡು ಸಭಾಧ್ಯಕ್ಷ ಯು.ಟಿ. ಖಾದರ್ ಅವರು ತಾವೇ ಸಭಾತ್ಯಾಗ ಮಾಡಿ ಕಲಾಪ ಮುಂದೂಡಿಕೆ ಮಾಡಿದರು. ಈ ಮೂಲಕ ಕರ್ನಾಟಕ ವಿಧಾನಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಘಟನೆಯು ನಡೆದಿದೆ.

230 ಪ್ರಶ್ನೆಗಳಲ್ಲಿ 80ಕ್ಕೆ ಉತ್ತರ
ಸದಸ್ಯರು ಕೇಳಿದ ಪ್ರಶ್ನೆಗೆ ಸಚಿವರು & ಅಧಿಕಾರಿಗಳು ಸಮರ್ಪಕವಾಗಿ ಪ್ರತಿಕ್ರಿಯೆ ನೀಡಿರಲಿಲ್ಲ, ಇನ್ನು ಸರ್ಕಾರ ಲಿಖಿತ ಉತ್ತರ ನಿರಂತರವಾಗಿ ನಿರ್ಲಕ್ಷಿಸುತ್ತಿರುವುದನ್ನು ಅವರು ತೀವ್ರವಾಗಿ ಟೀಕಿಸಿದ್ದಾರೆ. ಈ ಅಧಿವೇಶನದಲ್ಲೇ ಹಲವು ಬಾರಿ ಅವರ ಸೂಚನೆ ಕಡೆಗಣಿಸಲಾಗಿದ್ದು, 230 ಪ್ರಶ್ನೆಗಳ ಪೈಕಿ ಕೇವಲ 80 ಪ್ರಶ್ನೆಗೆ ಗೃಹ ಸಚಿವರು ಉತ್ತರವನ್ನ ನೀಡಿದ್ದಾರೆ. ಇದನ್ನ ವಿರೋಧಿಸಿ ವಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರದ ನಿರ್ಲಕ್ಷ್ಯ ಎಂದು ಆರೋಪಿಸಿ, ಆಕ್ರೋಶವನ್ನ ಹೊರ ಹಾಕಿದ್ದಾರೆ. ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಅತ್ತ ಸಭಾಧ್ಯಕ್ಷರು ಕೂಡ ಸಭಾತ್ಯಾಗ ಮಾಡಿದ್ದಾರೆ.
ಸ್ಪೀಕರ್ ಮನವೊಲಿಸಲು ಸಿಎಂ ಯಶಸ್ವಿ
ಯು.ಟಿ. ಖಾದರ್ ಅವರು ಕೋಪ ಮಾಡಿಕೊಂಡು ಸಭಾತ್ಯಾಗ ಮಾಡಿದ ನಂತರ, ಅವರನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಮನವೊಲಿಸಲು ಮುಂದಾದರು. ಈ ಬಗ್ಗೆ ಚರ್ಚೆ ನಡೆಸಿ ಕೊನೆಗೂ, ಸ್ಪೀಕರ್ ಯು.ಟಿ. ಖಾದರ್ ಅವರ ಮನವೊಲಿಸುವಲ್ಲಿ ಕೂಡ ಸಿಎಂ ಯಶಸ್ವಿಯಾದರು. ಉತ್ತರ ನೀಡದ 4 ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಈಗ ನೋಟಿಸ್ ಜಾರಿ ಮಾಡಲು ಸೂಚನೆ ನೀಡಿರುವ ಸಿಎಂ, ಅಧಿಕಾರಿಗಳಿಗೆ ಈ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದೇ ವಿಚಾರ ಸಂಬಂಧ ಇದೀಗ 3 ಅಧಿಕಾರಿಗಳನ್ನ ಅಮಾನತು ಮಾಡಿ ಗೇಟ್‌ಪಾಸ್ ಕೂಡ ನೀಡಲಾಗಿದ್ದು, ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಇಂತಹ ಘಟನೆ ಇದೇ ಮೊದಲ ಬಾರಿಗೆ ನಡೆದಿದೆ. ಹಾಗೇ ಇನ್ನೊಂದು ಕಡೆ ವಿರೋಧ ಪಕ್ಷಗಳು ಇದೇ ಅಸ್ತ್ರವನ್ನು ಸರ್ಕಾರದ ವಿರುದ್ಧ ಪ್ರಯೋಗಿಸಲು ಸಜ್ಜಾಗಿದ್ದು, ಅಧಿವೇಶನ ಮುಂದಿನ ದಿನಗಳಲ್ಲಿ ಮತ್ತಷ್ಟು ತಿಕ್ಕಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications