IAS Transfer: ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಇಲ್ಲಿದೆ ಸಂಪೂರ್ಣ ಪಟ್ಟಿ
IAS Transfer: ಕರ್ನಾಟಕ ಸರ್ಕಾರ ಆಡಳಿತ ಯಂತ್ರದಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, 10 ಐಎಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಹೊಸ ಜವಾಬ್ದಾರಿಗಳನ್ನು ನೀಡಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಈ ಕುರಿತು ಆದೇಶ ಹೊರಡಿಸಿದೆ.
ಕೃಷಿ ಇಲಾಖೆ, ಉಪಮುಖ್ಯಮಂತ್ರಿಗಳ ಕಚೇರಿ, ಗ್ರಾಮೀಣಾಭಿವೃದ್ಧಿ, HESCOM, MSIL ಹಾಗೂ ಮೂರು ಜಿಲ್ಲಾ ಪಂಚಾಯಿತಿಗಳ ಸಿಇಒ ಹುದ್ದೆಗಳಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ.

IAS Transfer: ಪ್ರಮುಖ ವರ್ಗಾವಣೆಗಳು
ಡಾ. ತ್ರಿಲೋಕ್ ಚಂದ್ರ ಕೆ.ವಿ. (IAS-2007): ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಕಾರ್ಯದರ್ಶಿಯಾಗಿದ್ದ ಅವರನ್ನು ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಕೃಷಿ ಇಲಾಖೆ ಕಾರ್ಯದರ್ಶಿಯಾಗಿದ್ದ ಕ್ಯಾಪ್ಟನ್ ಡಾ. ರಾಜೇಂದ್ರ ಕೆ. ಅವರನ್ನು ವರ್ಗಾವಣೆ ಮಾಡಲಾಗಿದೆ.
ಡಾ. ರಾಕೇಶ್ ಕುಮಾರ್ ಕೆ. (IAS-2012): ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾಗಿದ್ದ ಅವರನ್ನು ಉಪಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಜೊತೆಗೆ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಆಯುಕ್ತ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.
ಡಾ. ಅರುಂಧತಿ ಚಂದ್ರಶೇಖರ್ (IAS-2012): ಪಂಚಾಯತ್ ರಾಜ್ ಆಯುಕ್ತರಾಗಿದ್ದ ಅವರನ್ನು ಖಜಾನೆ ಇಲಾಖೆಯ ಆಯುಕ್ತರಾಗಿ ವರ್ಗಾಯಿಸಲಾಗಿದೆ.
ಪಾಟೀಲ್ ಯಲಗೌಡ ಶಿವನಗೌಡ (IAS-2012): MSME ನಿರ್ದೇಶಕರಾಗಿದ್ದ ಅವರನ್ನು ಗ್ರಾಮೀಣಾಭಿವೃದ್ಧಿ ಆಯುಕ್ತರಾಗಿ ನೇಮಿಸಲಾಗಿದೆ. ಇದರೊಂದಿಗೆ ಪಂಚಾಯತ್ ರಾಜ್ ಆಯುಕ್ತ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕರ ಹೆಚ್ಚುವರಿ ಜವಾಬ್ದಾರಿಯನ್ನೂ ನೀಡಲಾಗಿದೆ.
IAS Transfer: ಹಟ್ಟಿ ಗೋಲ್ಡ್ ಮೈನ್ಸ್‌ಗೂ ಹೊಸ ಅಧಿಕಾರಿಗಳು
ವೈಶಾಲಿ ಎಂ.ಎಲ್. (IAS-2013): ಹುಬ್ಬಳ್ಳಿಯ HESCOM ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅವರನ್ನು ಬೆಂಗಳೂರು MSIL ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ.
ಶಶಿಧರ್ ಕುರೇರ (IAS-2018): ಕಲಬುರಗಿಯ GESCOM ವ್ಯವಸ್ಥಾಪಕ ನಿರ್ದೇಶಕರಾಗಿರುವ ಅವರಿಗೆ ಹಟ್ಟಿ ಗೋಲ್ಡ್ ಮೈನ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರ ಹೆಚ್ಚುವರಿ ಹೊಣೆ ನೀಡಲಾಗಿದೆ.
ಮೂರು ಜಿಲ್ಲಾ ಪಂಚಾಯಿತಿಗಳ CEO ಬದಲಾವಣೆ
ಆನಂದ್ ಪ್ರಕಾಶ್ ಮೀನಾ (IAS-2019): ಕೊಡಗು ಜಿಲ್ಲಾ ಪಂಚಾಯಿತಿ CEO ಹುದ್ದೆಯಿಂದ ವಿಜಯಪುರ ಜಿಲ್ಲಾ ಪಂಚಾಯಿತಿ CEO ಆಗಿ ವರ್ಗಾವಣೆ.
ರಿಷಿ ಆನಂದ್ (IAS-2020): ವಿಜಯಪುರ ಜಿಲ್ಲಾ ಪಂಚಾಯಿತಿ CEO ಹುದ್ದೆಯಿಂದ ಶಿವಮೊಗ್ಗ ಜಿಲ್ಲಾ ಪಂಚಾಯಿತಿ CEO ಆಗಿ ವರ್ಗಾವಣೆ.
ಹೇಮಂತ್ ಎನ್. (IAS-2020): ಶಿವಮೊಗ್ಗ ಜಿಲ್ಲಾ ಪಂಚಾಯಿತಿ CEO ಹುದ್ದೆಯಿಂದ HESCOM ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ.
ದಿನೇಶ್ ಕುಮಾರ್ ಮೀನಾ (IAS-2023): ಕೊಳ್ಳೇಗಾಲ ಉಪವಿಭಾಗದ ಸಹಾಯಕ ಆಯುಕ್ತರಾಗಿದ್ದ ಅವರನ್ನು ಕೊಡಗು ಜಿಲ್ಲಾ ಪಂಚಾಯಿತಿ CEO ಆಗಿ ವರ್ಗಾಯಿಸಲಾಗಿದೆ. ಈ ವರ್ಗಾವಣೆ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗದ ಅಂತಿಮ ಅನುಮೋದನೆಗೆ ಒಳಪಟ್ಟಿದೆ.


Click it and Unblock the Notifications
