Karnataka Chief Secretary: ಕರ್ನಾಟಕದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್‌ ನೇಮಕ

ಬೆಂಗಳೂರು, ಜುಲೈ 26: ಕರ್ನಾಟಕ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಅಧಿಕಾರಾವಧಿ ಜುಲೈ 31ಕ್ಕೆ ಮುಕ್ತಾಯವಾಗಲಿದ್ದು, ನೂತನ ಕಾರ್ಯದರ್ಶಿ ಯಾರು ಎನ್ನುವ ಪ್ರಶ್ನೆಗೆ ಹುಟ್ಟಿಕೊಂಡಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು(ಶುಕ್ರವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು, ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಕರ್ನಾಟಕ ಮುಖ್ಯ ಕಾರ್ಯದರ್ಶಿಯಾಗಿದ್ದ ರಜನೀಶ್‌ ಗೋಯೆಲ್‌ ನಿವೃತ್ತಿ ಅವರು ನಿವೃತ್ತಿ ಬೆನ್ನಲ್ಲೇ ರಜನೀಶ್‌ ಗೋಯೆಲ್‌ ಪತ್ನಿ ಶಾಲಿನಿ ರಜನೀಶ್‌ ಮುಖ್ಯ ಕಾರ್ಯದರ್ಶಿಯಾಗುವುದು ಖಚಿತವಾಗಿದೆ.ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಈ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್​ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.

IAS Shalini Rajneesh Is The Next Chief Secretary Of Karnataka Says Minister HK Patil

ರಜನೀಶ್​ ಪತ್ನಿ ಶಾಲಿನಿ ರಜನೀಶ್‌ ಅವರು ಮುಂದಿನ ನೂತನ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಯಾಗಲಿದ್ದಾರೆ. ಇಂದು (ಜುಲೈ 26) ನಡೆದ ಸಚಿವ ಸಂಪುಟದಲ್ಲಿ ಶಾಲಿನಿ ರಜನೀಶ್​ರನ್ನು ಸರ್ಕಾರದ ಸಿಎಸ್​ ಆಗಿ ಮಾಡಲು ತೀರ್ಮಾನಿಸಿದ್ದು, ಸಚಿವ ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್‌ ಕೆ ಪಾಟೀಲ್​ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಸಚಿ ಸಂಪುಟ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್​ ಕೆ ಪಾಟೀಲ್, ಹಾಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಐದು ದಿನದಲ್ಲಿ​ ನಿವೃತ್ತಿ ಆಗುತ್ತಾರೆ. ಹೀಗಾಗಿ ನೂತನ ಸಿಎಸ್​ ಆಗಿ ಶಾಲಿನಿ ರಜನೀಶ್​ರನ್ನು ನೇಮಿಸಲು ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಅಧಿಕೃತ ಮಾಹಿತಿ ನೀಡಿದರು.

ರಾಜ್ಯ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಅಧಿಕಾರಾವಧಿ ಜುಲೈ 31ಕ್ಕೆ ಮುಕ್ತಾಯವಾಗಲಿದ್ದು, ನೂತನ ಕಾರ್ಯದರ್ಶಿ ಯಾರು ಎಂಬ ಚರ್ಚೆ ನಡೆದಿತ್ತು. ಜ್ಯೇಷ್ಠತೆಯಲ್ಲಿ ಕ್ರಮವಾಗಿ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಜಯ್‌ ಸೇಠ್‌, ಅಭಿವೃದ್ಧಿ ಆಯುಕ್ತರಾಗಿರುವ ಶಾಲಿನಿ ರಜನೀಶ್‌ ಅವರ ಹೆಸರುಗಳು ಕೇಳಿಬಂದಿದ್ದವು. ಇಬ್ಬರ ಪೈಕಿ ಶಾಲಿನಿ ರಜನೀಶ್‌ ಅವರೇ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸುವ ಸಾಧ್ಯತೆ ದಟ್ಟವಾಗಿತ್ತು. ಇದೀಗ ಶಾಲಿನಿ ರಜನೀಶ್ ಅವರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗುವುದು ಖಚಿತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+