ಚುನಾವಣೆ ಹೊತ್ತಲಿ ಜೋರಾಯ್ತು ಆಪರೇಷನ್ ಹಸ್ತ: ಕಳೆದ ಮೂರು ತಿಂಗಳಿಂದ ಕಾಂಗ್ರೆಸ್ ನಿಂದ ಸತತ ಪ್ರಯತ್ನ: ಮುನಿರತ್ನ
ಬೆಂಗಳೂರು, ಮಾರ್ಚ್29: ವಿಧಾನಸಭಾ ಚುನಾವಣಾ ರಣಕಣ ರಂಗೇರಿದ್ದು, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಮೂರು ಪಕ್ಷಗಳು ತಂತ್ರಗಾರಿಕೆ ಹಾಗೂ ಭರ್ಜರಿಯನ್ನ ನಡೆಸುತ್ತಿವೆ. ಇತ್ತ ರಾಜಕೀಯ ಭವಿಷ್ಯಕ್ಕಾಗಿ ಹಲವು ಜನ ನಾಯಕರು ಪಕ್ಷಾಂತರ ಪರ್ವವನ್ನ ಆರಂಭಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ನ ಹಲವು ನಾಯಕರನ್ನ ಸಂಪರ್ಕಿಸುತ್ತಿದ್ದು, ಅಸಮಾಧಾನಗೊಂಡ ಅನ್ಯ ಪಕ್ಷದ ನಾಯಕರಿಗೆ ಗಾಳ ಹಾಕುತ್ತಿದೆ. ಈಗಾಗಲೇ 124 ಜನರ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿರುವ ಕಾಂಗ್ರೆಸ್ ಅನ್ಯ ಪಕ್ಷದ ನಾಯಕರಿಗಾಗಿ 25 ರಿಂದ 30 ಸ್ಥಾನಗಳನ್ನ ಕಾಯ್ದಿರಿಸಲಾಗಿದೆ.

ಇನ್ನುಎಸ್.ಟಿ ಸೋಮಶೇಖರ್ ಹಾಗೂ ಬೈರತಿ ಬಸವರಾಜ ಕಾಂಗ್ರೆಸ್ ಪಕ್ಷಕ್ಕೆ ಬರವ ಚರ್ಚ ನಡೆಯುತ್ತಿದೆ ಎಂದು ಈಗಾಗಲೇ ಚರ್ಚೆ ನಡೆಯುತ್ತಿದ್ದು, ಇದೀಗ ಸಚಿವ ಮುನಿರತ್ನ ಆಪರೇಷನ್ ಹಸ್ತದ ಕುರಿತು ಆರೋಪ ಮಾಡಿದ್ದಾರೆ. ಹೌದು, ವಲಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕಳೆದ ಮೂರು ತಿಂಗಳಿಂದ ಕಾಂಗ್ರೆಸ್ ನಿಂದ ಸತತ ಪ್ರಯತ್ನ ನಡೆಯುತ್ತಿದೆ ಎಂದು ಬೆಂಗಳೂರಿನಲ್ಲಿ ಸಚಿವ ಮುನಿರತ್ನ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ಅವರ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಎಲ್ಲರ ಜೊತೆಗೆ ಸಂಪರ್ಕ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಕಾಂಗ್ರೆಸ್ ನಾಯಕರು ಸತತ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನೂ ನಾವು ನಿಮ್ಮ ಜೊತೆ ಬರಲ್ಲ ಎಂದು ಅವರಿಗೆ ಹೇಳಿದ್ದೇವೆ. ನಿಮ್ಮ ಸಹವಾಸ ಬೇಡ ಎಂದಿದ್ದೇವೆ. ಆದರೂ ನಿಮಗೋಸ್ಕರ ಕಾಯುತ್ತಿದ್ದೇವೆ ಬನ್ನಿ ಎಂದು ಆಹ್ವಾನ ನೀಡುತ್ತಿದ್ದಾರೆ. ಕಾಂಗ್ರೆಸ್ ಪ್ರಯತ್ನಗಳು ನಡೆಯುತ್ತಿವೆ , ಆದರೆ ನಾವು ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಎಂದು ಹೇಳಿದರು.
ನನ್ನ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ನನಗೆ ಯಾವುದೇ ಸಂಬಂಧ ಇಲ್ಲ. ನಾನು ರಾಜಕೀಯ ಬಿಡುತ್ತೇನೆ ಹೊರತು ಬಿಜೆಪಿ ಬಿಡುವುದು ಅಥವಾ ಬೇರೆ ಪಕ್ಷಕ್ಕೆ ಹೋಗಲ್ಲ. 17 ಜನರನ್ನು ಪಕ್ಷಕ್ಕೆ ಕರೆತರಲು ಪ್ರಯತ್ನ ಮಾಡಿದ್ದಾರೆ, 17 ಜನ ಶಾಸಕರು ಇದ್ದಿದ್ದರೆ ಸರ್ಕಾರ ಮಾಡುತ್ತಿದ್ದೆವು ಎನ್ನುತ್ತಿದ್ದರು.

ನಾವು ಇದ್ದಾಗ ಬೆಲೆ ಗೊತ್ತಿರಲಿಲ್ಲ, ಕಾಲಕಸದ ರೀತಿಯಲ್ಲಿ ನೋಡಿಕೊಂಡರು, ಅವತ್ತು ಸರಿಯಾಗಿ ನಡೆಸಿಕೊಂಡರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು. ಇನ್ನೂ ಬಿಜೆಪಿ ಪಕ್ಷದಲ್ಲಿ ನಮ್ಮನ್ನು ಗೌರವಯುತವಾಗಿ ನೋಡಿಕೊಳ್ಳುತ್ತಿದೆ. ಪ್ರೀತಿ ಅಭಿಯಾನದಿಂದ ನೋಡಿಕೊಳ್ಳುತ್ತಿದೆ.ಯಾವುದೇ ಕಾರಣಕ್ಕೂ ಪಕ್ಷ ತೊರೆಯಲ್ಲ ಎಂದರು.
ಇನ್ನು ಇದೇ ಸಂದರ್ಭದಲ್ಲಿ ಯಲಹಂಕದಲ್ಲಿ ನಾಡಗೌಡ ಕೆಂಪೇಗೌಡರ ಉದ್ಯಾನವನ ನಿರ್ಮಾಣದ ಗದ್ದಲಿ ಪೂಜೆಯನ್ನು ವರ್ಚುವಲ್ ಮೂಲಕ ಪೂರ್ಣಗೊಳಿಸಿದ್ದೇವೆ ಎಂದು ಹೇಳಿದ ಅವರು, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸೂಕ್ತ ಸ್ಪಂದನೆಯನ್ನು ನೀಡಲಾಗಿದೆ.ಈ ಇಲಾಖೆಯಲ್ಲಿ ಕೆಲಸ ಮಾಡಿದ್ದು ತೃಪ್ತಿ ಇದೆ .75 ವರ್ಷದಲ್ಲಿ ಯಾರೂ ಮಾಡಲು ಆಗದ ಸಾಧನೆ ನಮ್ಮ ಇಲಾಖೆ ಮಾಡಿದೆ ಎಂದರು.
ಇನ್ನೂ ಈ ವಿಚಾರವಾಗಿ ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ವಿಶ್ವಾಸ ಹೋಗಿದೆ. ಬೇರೆಯವರು ಯಾರೂ ಹೋಗಲ್ಲ. ಅವರ ಪಕ್ಷದಲ್ಲಿರುವವರ ಮೇಲೆ ವಿಶ್ವಾಸ ಇಲ್ಲ. ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಗೆ ಯಾರೂ ಹೋಗಲ್ಲ. ಚುನಾವಣೆ ವೇಳೆ ಖೋಖೋ ಆಟ ನಡೆಯುತ್ತಿರುತ್ತೆ. ಪಾರ್ಟಿ ಕಮೀಟ್ಮೆಂಟ್ ಇಲ್ಲದವರು ಅಲ್ಲಿ,ಇಲ್ಲಿ ಹೋಗ್ತಾರೆ. ವಲಸೆ ಬಂದವರು ಇಲ್ಲೇ ಇರ್ತಾರೆ ಎಂದು ಹೇಳಿದರು.












Click it and Unblock the Notifications