ನಾನು ಸಿಎಂ ಆಕಾಂಕ್ಷಿ ಎನ್ನುತ್ತಿದ್ದಾರೆ ಹಲವು ಕೈ ನಾಯಕರು
ಬೆಂಗಳೂರು, ಸೆಪ್ಟೆಂಬರ್ 09: ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮ ಹಗರಣ ಕಾಂಗ್ರೆಸ್ ಪಕ್ಷಕ್ಕೆ ಕಳಂಕವನ್ನು ತಂದಿದೆ. ರಾಜಕೀಯ ಇತಿಹಾಸದಲ್ಲಿ ಒಂದೂ ಭ್ರಷ್ಟಾಚಾರದ ಆರೋಪ ಇಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊರಳಿಗೆ ಮುಡಾ ಹಗರಣ ಸುತ್ತಿಕೊಂಡಿದ್ದು ಭಾರೀ ಮುಜುಗರ ತಂದಿದ್ರೆ, ಇತ್ತ ಸಿಎಂ ಸ್ಥಾನಕ್ಕಾಗಿ ಹಲವು ನಾಯಕರು ರೇಸ್ ನಲ್ಲಿದ್ದಾರೆ.
ಸರ್ಕಾರದ ರಚನೆಯ ಆರಂಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿ ಕೆ ಶಿವಕುಮಾರ್ ಸೇರಿದಂತೆ ಕೆಲ ದಲಿತ ಸಮುದಾಯದ ನಾಯಕರು ಬೇಡಿಕೆ ಇಟ್ಟಿದ್ದರು. ಇದೀಗ ಕೈ ಪಾಳಯದ ಹಲವು ನಾಯಕರು ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಆರ್ ವಿ ದೇಶಪಾಂಡೆ, ಸತೀಶ್ ಜಾರಕಿಹೊಳಿ, ಎಂ ಬಿ ಪಾಟೀಲ್ ಈಗಾಗಲೇ ಸಿಎಂ ಸ್ಥಾನದ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿರುವಾಗಲೇ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಅವರು ಹೈಕಮಾಂಡ್ ಬಯಸಿದರೆ ನಾನೇ ಸಿಎಂ ಆಗುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸಿಎಂ ಸ್ಥಾನ ಖಾಲಿಯಿಲ್ಲ. ಖಾಯಿಯಾದಾಗ ಚರ್ಚೆ ಮಾಡೋಣ, ನಮ್ಮ ಪಕ್ಷದಲ್ಲಿ 136 ಶಾಸಕರು ಮಂತ್ರಿಯಾಗಲು ಅರ್ಹರಿದ್ದಾರೆ. ರಾಹುಲ್ ಗಾಂಧಿ, ಖರ್ಗೆ ಅವರು ಸಿಎಂ ಆಗು ಅಂದ್ರೆ ನಾನು ಸಿಎಂ ಆಗುತ್ತೇನೆ. ಹೈಕಮಾಂಡ್ ಹೇಳಬೇಕು ಎಂದು ಆಸೆ ವ್ಯಕ್ತಪಡಿಸಿದರು. 150 ಜನ ಸಿಎಂ ಆಕಾಂಕ್ಷಿಗಳಿದ್ದರೂ, ಒಬ್ಬರೇ ಸಿಎಂ ಆಗುತ್ತಾರೆ. ಸಿಎಂ ಆಗು ಅಂದ್ರೆ ಯಾರು ಒಲ್ಲ ಎನ್ನುತ್ತಾರೆ, ನಮ್ಮಲ್ಲಿ ಎಲ್ಲರೂ ಸಿಎಂ ಆಗುವ ಯೋಗ್ಯತೆ ಹೊಂದಿದ್ದಾರೆ. ಬಿಜೆಪಿಯಲ್ಲಿ ಅಂಥವರು ಇಲ್ಲ ಎಂದು ಹೇಳುವ ಮೂಲಕ ಸಿಎಂ ಬದಲಾವಣೆ ಚರ್ಚೆಗೆ ಪುಷ್ಟಿ ನೀಡಿದ್ದಾರೆ.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾದ ರಾಯರೆಡ್ಡಿ ಅವರು ಮಾತನಾಡಿ, ನಾನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿನಿಯರ್. ಲಿಂಗಯತ್ ಕೋಟಾದಲ್ಲಿಯೂ ನಾನೇ ಸಿನಿಯರ್ ಹೀಗಾಗಿ ನಾನು ಸಿಎಂ ಆಕಾಂಕ್ಷಿ ಎಂದು ಸಿ ಎಂ ಆರ್ಥಿಕ ಸಲಹೇಗಾರ ಬಸವರಾಜ ರಾಯರೆಡ್ಡಿ ಹೇಳಿದರು.
ರಾಜ್ಯದಲ್ಲಿ ಸಿ ಎಂ ಬೇರೆಯವರು ಆಗಬೇಕು ಅಂತ ಆದೆ ಪಡ್ತಿದ್ದಾರೆ ಆದ್ರೆ ಅದು ಖಾಲಿ ಇಲ್ಲ. ಈಗ ನಾನು ಕೂಡಾ ಸಿ ಎಂ ಸ್ಥಾನದ ಆಕಾಂಕ್ಷಿ.ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿ ಎಂ ಸ್ಥಾನ ಕೊಡೊದಾದ್ರೆ ನಾನೆ ಪ್ರಂಟ್ ರನ್ನರ್ ಎಂದು ಹೇಳಿದರು. ಸಿದ್ದರಾಮಯ್ಯ ಮುಂದಿನ ಮೂರುವರೆ ವರ್ಷ ಸಿ ಎಂ ಆಗಿರಬೇಕು.ಅಂದ್ರೆ ರಾಜ್ಯ ಅಭಿವೃದ್ಧಿ ಆಗತ್ತೆ, ಅವರ ಮುಂದುವರೆಯಬೇಕು ಅಂತ ನಮ್ಮ ಆಸೆ. ಅವರು ಸಿ ಎಂ ಸೀಟ್ ನಿಂದ ಇಳಿತಾರೆ ಅಂತ ಯಾರು ಹೇಳಿದ್ದು...?ಯಾರು ಆಸೆ ಪಡುವ ಅವಶ್ಯಕತೆ ಇಲ್ಲ.
ದೇಶಪಾಂಡೆ ಅವರು ಹೇಳಿದ್ದು ತಪ್ಪೇನಿಲ್ಲ, ಸಿದ್ದರಾಮಯ್ಯ ಹೇಳಿದ್ರೆ ಆಗ್ತಿನಿ ಅಂತ ಹೇಳಿದ್ದಾರೆ.ಯಾರೆ ಸಿ ಎಂ ಆಸೆ ಪಟ್ಟರೆ ತಪ್ಪೇನಿಲ್ಲ, ನಾನು ಸಿ ಎಂ ಯಾಕೆ ಆಗಬಾರದು. ನಾನು ಕೂಡಾ ಲಿಂಗಾಯತರು ನಾನ ಯಾಕ ಆಗಬಾರದು. ನಾನು ಬಿ ಆರ್ ಪಾಟೀಲ್ ಇಬ್ಬರು ಸೀನಿಯರ್, ಹೆಚ್ಚು ಬಾರಿ ಆಯ್ಕೆ ಆಗಿರೋದು ನಾನು. ಸಿ ಎಂ ಯಾಕೆ ಆಗಬಾರದು, ನಮ್ಮ ಪಕ್ಷ ಲಿಂಗಾಯತ ಕಮ್ಯೂನಿಟಿಗೆ ಕೊಡೊದಾದ್ರೆ ನನಗೆ ಕೊಡಲಿ ನನಗೆ ಯಾವುದೆ ಮುಜುಗರ ಇಲ್ಲ, ಮೊದಲೆ ನಾನು ಹೇಳಿದ್ದೆನೆ ಎಂದರು.
ಖರ್ಗೆ ಅವರು ಪ್ರದಾನ ಮಂತ್ರಿ ಆಗಲು ಅಂತ ನಾನು ಆಸೆ ಪಟ್ಟವನು. ಕಲ್ಯಾಣ ಕರ್ನಾಟಕಕ್ಕೆ ಸಿ ಎಂ ಸ್ಥಾನ ಕೊಡೊದಾದ್ರೆ ನಾನು ಪ್ರಂಟ್ ರನ್ನರ್. ನಾನು ಸಿ ಎಂ ಆಗೋಕೆ ಆಸೆ ಪಡೋದಕ್ಕೆ ಕಾರಣ ನಾನು ಸೀನಿಯರ್ನಾನು ಕೂಡಾ ಸಿ ಎಂ ಆಗೋಕೆ ಆಸೆ ಪಡ್ತಿನಿ.ನಮ್ಮ ಪಕ್ಷ ಹಾಗೂ ಸಿದ್ದರಾಮಯ್ಯ ಮನಸ್ಸು ಮಾಡಬೇಕು.ಯಾವಾಗ ಯಾರು ಏನಾಗ್ತಾರೆ ಅಂತ ಗೊತ್ತಿಲ್ಲ ಎಂದು ಹೇಳಿದರು.












Click it and Unblock the Notifications