ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲಲ್ಲ ಕೊನೆ ಕ್ಷಣದಲ್ಲಿ ಬೇರೆ ಕಡೆ ಹೋಗುತ್ತಾರೆ: ಸಿ.ಎಂ. ಇಬ್ರಾಹಿಂ

ಕೋಲಾರ,ಜನವರಿ 17: ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ನವರಿಗೆ ಓಟು ಇಲ್ಲ ಮುನಿಯಪ್ಪ ಹೇಳಿದರೂ ಅವರ ಸಮಾಜದವರು ಸಿದ್ದರಾಮಯ್ಯ ಗೆ ಓಟು ಹಾಕಲ್ಲ. ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲಲ್ಲ ಕೊನೆ ಕ್ಷಣದಲ್ಲಿ ಬೇರೆ ಕಡೆ ಹೋಗುತ್ತಾರೆ, ಕೊನೆಗೆ ಹೈಕಮಾಂಡ್ ಮೇಲೆ‌ ಹಾಕುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ‌.ಇಬ್ರಾಹಿಂ ಹೇಳಿದರು.

ಈ ಕುರಿತು ಸೋಮವಾರ ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಮನೆ ದೇವರು ಹೇಳಿದರೆ ಅವರು ಬರಲ್ಲ, ಸಿದ್ದರಾಮಯ್ಯ ಬಲವಂತಕ್ಕೆ ಕೋಲಾರಕ್ಕೆ ಬರುತ್ತಿದ್ದಾರೆ. ಸಿದ್ದರಾಮಯ್ಯ ಸೋಲಿಸಲು‌ ಕೆಲವರು ಕರೆದುಕೊಂಡು ಬರುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಬಾದಾಮಿಯಲ್ಲಿ ಗೆಲ್ಲಲು ‌ನಾನೇ ಕಾರಣ. ಸಿದ್ದರಾಮಯ್ಯ ಅವರು ಬಾದಾಮಿಗೆ ಬಂದಿದ್ದು ಎರಡು ಸಲ ಮಾತ್ರ, ಹದಿನೈದು ದಿನ ಮೂಗಿನಲ್ಲಿ ರಕ್ತ ಬಂತು ಆ ರೀತಿ ಕೆಲಸ ಮಾಡಿ ಗೆಲ್ಲಿಸಿದ್ದೆ. ಬಾದಾಮಿ ಚುನಾವಣೆಯಲ್ಲಿ ಹೋಂ ವರ್ಕ್ ಮಾಡಿದ್ದು ನಾನು, ಸಿದ್ದರಾಮಯ್ಯ ಅಲ್ಲ. ನಾನು ಅವರನ್ನು ಗೆಲ್ಲಿಸಿದೆ ಅದಕ್ಕೆ ಅವರು ಉಪಕಾರ ಮಾಡಿದ್ದಾರೆ ನನಗೆ ಎಂದು ಸಿ.ಎಂ‌.ಇಬ್ರಾಹಿಂ ಸಿದ್ದರಾಮಯ್ಯ ವಿರುದ್ದ ವ್ಯಂಗ್ಯ ವಾಡಿದ್ದಾರೆ.

I Am The Reason Why Siddaramaiah Won In Badami CM Ibrahim Said

ರಮೇಶ್ ಕುಮಾರ್ ಸೇರಿ ಕೆಲವರು ಸಿದ್ದರಾಮಯ್ಯ ರನ್ನು ಕೋಲಾರಕ್ಕೆ ಕರೆತರುತ್ತಿದ್ದಾರೆ. ಚೇಳು ಕಚ್ಚಿದ ಮೇಲೆ ಗೊತ್ತಾಗುತ್ತದೆ, ಮೂರು ಜನ ಕಚ್ಚಿಸಿ ಕೊಳ್ಳಬೇಕಾಗಿದೆ ಒಂದು ರಮೇಶ್ ಕುಮಾರ್ ಎರಡನೆಯದು ಕೆ ಎಚ್ ಮುನಿಯಪ್ಪ ಈಗಾಗಲೇ ಕಚ್ಚಿಸಿಕೊಂಡಿದ್ದಾರೆ ಮೂರನೆಯವರು ಬೇಕಲ್ಲ ಅದಕ್ಕೆ ಸಿದ್ದರಾಮಯ್ಯ ರನ್ನು ಕರೆತಂದು ಕಚ್ಚಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ಸ್ಯಾಂಟ್ರೋ ರವಿ ವಿಚಾರವಾಗಿ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಪ್ರಕರಣ ಸಿಬಿಐ ತನಿಖೆ ಆಗಬೇಕು. 12 ಕ್ಯಾಸೆಟ್, ಸಿಡಿಗಳು ಇದ್ದಾವೆ 12 ಬಾಂಬೆ ಕ್ಯಾಸೆಟ್ ಗಳ ಬಗ್ಗೆ ಕಾಂಗ್ರೆಸ್ ನವರು ಮಾತಾಡುತ್ತಿಲ್ಲ ಅವರದೂ ಸಹ ಸಿಡಿಗಳು ಇರಬಹುದು ಅದಕ್ಕೆ ಅದರ ಬಗ್ಗೆ ಮಾತಾಡುತ್ತಿಲ್ಲ ಸಿಡಿಗಳ ಭಯದಿಂದ ಮಂತ್ರಿಗಳು ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ ಸದಾನಂದ ಗೌಡರೂ ಸಹ ಇದರಲ್ಲಿ ಇದ್ದಾರೆ ಅವರೂ ಸ್ಟೇ ತಂದಿದ್ದಾರೆ. ಇವರಿಗೆ ನಾಚಿಕೆ ಇದೆಯಾ? ಬಸವರಾಜ ಬೊಮ್ಮಾಯಿಯವರು ಹೋಗಿ ಸಿಕ್ಕಾಕಿ ಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

I Am The Reason Why Siddaramaiah Won In Badami CM Ibrahim Said

ನಾನು ಬಂದು ಕೋಲಾರದಲ್ಲಿ ಮುಸ್ಲಿಂ ಸಭೆ ಮಾಡಿದರೆ 20 ಸಾವಿರ ಜನ ಸೇರುತ್ತಾರೆ ಆದರೆ ಏಳು ಜನ ಸಿಟ್ಟಿಂಗ್ ಎಮ್ ಎಲ್ ಎ ಗಳು ಹಗಲು ರಾತ್ರಿ ಕೆಲಸ ಮಾಡಿ ಮೊನ್ನೆ ಸಿದ್ದರಾಮಯ್ಯ ಸಭೆಗೆ ಎರಡು ಸಾವಿರ ಜನರನ್ನು ಸೇರಿಸಿದ್ದಾರೆ. ಒಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನವರು ಹೆಚ್ಚು ಜನರನ್ನು ಸೇರಿಸಲಿಲ್ಲ ಅಂದರೆ ಕಾಂಗ್ರೆಸ್ ನವರ ಓಟು ಎಷ್ಟು ಇದೆ ಎಂಬುದು ಗೊತ್ತಾಗುತ್ತದೆ. ಕಾಂಗ್ರೆಸ್ ಪಕ್ಷ ಕೋಲಾರದಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ. ಇತಿಹಾಸದಲ್ಲಿ ಕೋಲಾರ ಜನರು ಜೆಡಿಎಸ್ ಕೈ ಹಿಡಿದಿದ್ದಾರೆ ಈ ಬಾರಿ ಸಿ ಎಮ್ ಆರ್ ಶ್ರೀನಾಥ್ 70 ಸಾವಿರ ಮತಗಳಿಂದ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+