• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನು ಗಾಂಧಿ ಅನುಯಾಯಿ, ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ: ಡಿಕೆಶಿ

|
   ಚುನಾವಣೆಯಲ್ಲಿ ಸೋತಿದ್ದಕ್ಕೆ ಡಿಕೆಶಿ ಹೇಳಿದ್ದೇನು ಗೊತ್ತಾ..? | Oneindia kannada

   ಬೆಂಗಳೂರು, ಮೇ 28: ಲೋಕಸಭಾ ಚುನಾವಣಾ ಫಲಿತಾಂಶದ ಎಲ್ಲಾ ಅಪ್ಡೇಟ್ಸ್ ಗಳು ನನ್ನಲ್ಲಿದ್ದು, ಎಲ್ಲಾ ವಿಷಯಗಳನ್ನು ಅರಿತಿದ್ದೇನೆ ಎಂದು ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

   ವಿದೇಶ ಪ್ರವಾಸದ ನಂತರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿಕೆಶಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಮಹಾತ್ಮ ಗಾಂಧಿಯ ಅನುಯಾಯಿ ಆಗಿದ್ದೇನೆ, ಹಾಗಾಗಿ ಅವರ ತತ್ವವನ್ನೇ ಅನುಸರಿಸುತ್ತಿದ್ದೇನೆ ಎಂದಿದ್ದಾರೆ.

   ಚುನಾವಣಾ ಫಲಿತಾಂಶದ ಬಗ್ಗೆ ಮಾರ್ಮಿಕವಾಗಿ ಉತ್ತರಿಸುತ್ತಾ, 'ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದೇನೆ. ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ. ಕಿವಿಗೆ ಹತ್ತಿ ಇಟ್ಟುಕೊಂಡಿದ್ದೇನೆ' ಎಂದು ಹೇಳಿ ವಿಮಾನನಿಲ್ದಾಣದಿಂದ ತೆರಳಿದರು.

   ಡಿಕೆಶಿ ಯಾವ ಲೆಕ್ಕ, ನಮ್ ರೇಂಜ್ ಏನಿದ್ರೂ ರಾಹುಲ್ ಗಾಂಧಿ: ಜಾರಕಿಹೊಳಿ

   ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಮೂರು ದಿನ ಇರಬೇಕಾದರೆ, ಡಿ ಕೆ ಶಿವಕುಮಾರ್ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಅಗತ್ಯ ಬಿದ್ದಲ್ಲಿ, ವಿದೇಶ ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಆಗಬೇಕೆನ್ನುವ ಸೂಚನೆಯನ್ನು ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ್ ನೀಡಿದ್ದರು.

   ರಾಜ್ಯದ ಒಟ್ಟು 28ಲೋಕಸಭಾ ಕ್ಷೇತ್ರಗಳ ಪೈಕಿ, ಕಾಂಗ್ರೆಸ್ ಗೆದ್ದದ್ದು ಡಿಕೆಶಿ ಸಹೋದರ ಡಿ ಕೆ ಸುರೇಶ್ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಮಾತ್ರ.

   ರಾಜ್ಯದಲ್ಲಿ ಬಿಜೆಪಿ ಈ ಬಾರಿ ಎರಡಂಕಿ ದಾಟುವುದಿಲ್ಲ ಎಂದು ಹೇಳಿದ್ದ ಡಿಕೆಶಿಗೆ, ತಾನು ಉಸ್ತುವಾರಿ ವಹಿಸಿಕೊಂಡಿದ್ದ ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ ಪಕ್ಷವನ್ನು ದಡಸೇರಿಸಲು ಸಾಧ್ಯವಾಗಲಿಲ್ಲ.

   English summary
   I am the follower of Mahatma Gandhi, DK Shivakumar statement after returning from foreign trip.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X