ಸಿ.ಪಿ ಯೋಗೇಶ್ವರ ರಾಜೀನಾಮೆಗೂ ಮುಂಚೆ ಹೈಡ್ರಾಮಾ, ಆ ನಾಯಕರ ಕರೆ
Channapatna by-election: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯೂ ಭಾರೀ ಹೈವೋಲ್ಟೇಜ್ ಅನ್ನೇ ಸೃಷ್ಟಿ ಮಾಡಿದೆ. ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಸಮೀಪಿಸುತ್ತಿರುವಂತೆಯೇ ಹಲವು ಹೈಡ್ರಾಮಾಗಳಿಗೆ ಕರ್ನಾಟಕದ ಜನತೆ ಸಾಕ್ಷಿಯಾಗುತ್ತಿದ್ದಾರೆ. ಇದೀಗ ವಿಧಾನ ಪರಿಷತ್ ಸದಸ್ಯರಾಗಿದ್ದ ಸಿ.ಪಿ. ಯೋಗೀಶ್ವರ ಅವರ ರಾಜೀನಾಮೆಗೆ ಬಿಗ್ ಟ್ವಿಸ್ಟ್‌ವೊಂದು ಸಿಕ್ಕಿದೆ.
ಚನ್ನಪಟ್ಟಣ ಉಪ ಚುನಾವಣಾ ಕಣಕ್ಕೆ ಸಿ.ಪಿ ಯೋಗೇಶ್ವರ ಅವರು ಅಧಿಕೃತವಾಗಿ ಧುಮುಕಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಸಿ.ಪಿ ಯೋಗೇಶ್ವರ್ ಅವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಇನ್ನು ಈ ಕ್ಷೇತ್ರದ ಉಪ ಚುನಾವಣೆಯು ಈಗಾಗಲೇ ಪಕ್ಷಕ್ಕಿಂತ ವ್ಯಕ್ತಿಗಳ ಪ್ರತಿಷ್ಠೆಯ ಕಣವಾಗಿ ಬದಲಾಗಿದೆ. ಸಿ.ಪಿ. ಯೋಗೀಶ್ವರ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು ರಾಜೀನಾಮೆ ನೀಡುವುದಕ್ಕೂ ಮೊದಲು ಹಲವು ರಾಜಕೀಯ ಹೈಡ್ರಾಮಗಳು ನಡೆದಿವೆ ಎನ್ನಲಾಗುತ್ತಿದೆ.

ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದೇನು: ಇನ್ನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಿ.ಪಿ. ಯೋಗೀಶ್ವರ ಅವರು ರಾಜೀನಾಮೆ ನೀಡುರುವ ವಿಚಾರವಾಗಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಹಲವು ಅಚ್ಚರಿಯ ವಿಷಯಗಳನ್ನು ಅವರು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೀಶ್ವರ ಅವರು ಯಾರ ಒತ್ತಡಕ್ಕೊಳಗಾಗದೆ ತಮ್ಮ ಸ್ಥಾನಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.ಈಗಾಗಲೇ ಸಿ.ಪಿ. ಯೋಗೇಶ್ವರ ಅವರು ತಮ್ಮ ಜೊತೆಗೆ ಮಾತನಾಡಿದ್ದು ಯಾವುದೇ ಒತ್ತಡಕ್ಕೆ ಒಳಗಾಗದೇ ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅದನ್ನು ನಾನು ಅಂಗೀಕಾರ ಮಾಡಿದ್ದೇನೆ ಎಂದಿದ್ದಾರೆ. ಆದರೆ, ರಾಜೀನಾಮೆಗೂ ಮುಂಚೆ ಹಲವು ನಾಯಕರು ಕರೆ ಮಾಡಿದ್ದಾಗಿ ಹೇಳಿದ್ದಾರೆ.
ಇನ್ನು ಸಿ.ಪಿ.ಯೋಗೇಶ್ವರ ಅವರ ರಾಜೀನಾಮೆ ವಿಚಾರವಾಗಿ ಅನೇಕ ರಾಜ್ಯ, ರಾಷ್ಟ್ರಮಟ್ಟದ ನಾಯಕರು ನನಗೆ ಕರೆ ಮಾಡಿ ಮಾತನಾಡಿದ್ದರು. ಆದರೆ, ಅವರು ಯಾರು, ಏನು ಮಾತನಾಡಿದ್ರು ಅಂತ ನಾನು ಹೇಳಲ್ಲ ಎಂದು ಬಸವರಾಜ ಹೊರಟ್ಟಿ ಅವರು ಹೇಳಿದ್ದಾರೆ. ಈ ವಿಷಯ ಇದೀಗ ಕುತೂಹಲ ಮೂಡಿಸಿದೆ.
ರಾಷ್ಟ್ರೀಯ ಎಂದರೆ ಬಿಜೆಪಿ ನಾಯಕರೇ ಎಂದು ಅಂದಾಜಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ನಡುವೆ ಮೈತ್ರಿ ಇದೆ. ಕರ್ನಾಟಕದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಅದರಲ್ಲಿ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧೆ ಮಾಡುತ್ತಿದ್ದರೆ, ಜೆಡಿಎಸ್‌ಗೆ ಒಂದು (ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ) ಕ್ಷೇತ್ರವನ್ನು ಬಿಟ್ಟುಕೊಡಲಾಗಿದೆ ಎಂದು ಹೇಳಲಾಗಿದೆ.
14 ವಿಧಾನ ಪರಿಷತ್ ಸದಸ್ಯರ ರಾಜೀನಾಮೆ: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಿ.ಪಿ ಯೋಗೇಶ್ವರ ಅವರು ಸೋಮವಾರ ರಾಜೀನಾಮೆ ನೀಡುವ ಮೂಲಕ ಇಲ್ಲಿಯವರೆಗೆ ಒಟ್ಟು 14 ಜನ ರಾಜೀನಾಮೆ ನೀಡಿದಂತಾಗಿದೆ. ಈಗಾಗಲೇ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ವಿ.ಎಸ್.ಉಗ್ರಪ್ಪ, ಶ್ರೀನಿವಾಸ ಮಾನೆ, ಸಿ.ಆರ್ .ಮನೋಹರ, ಸಿ ಎಂ ಇಬ್ರಾಹಿಂ, ಪುಟಣ್ಣ, ಬಾಬುರಾವ್ ಚಿಂಚನಸೂರ, ಆರ್ ಶಂಕರ, ಲಕ್ಷ್ಮಣ, ಸವದಿ, ಆಯನೂರು ಮಂಜುನಾಥ, ಜಗದೀಶ್ ಶೆಟ್ಟರ್, ಮರಿತಿಬ್ಬೇಗೌಡ, ತೇಜೀಸ್ವೀನಗೌಡ,ಕೆ. ಪಿ.ನಂಜುಂಡಿ ಹಾಗೂ ಸಿ. ಪಿ.ಯೋಗೇಶ್ವರ ರಾಜೀನಾಮೆ ನೀಡಿದ್ದಾರೆ.












Click it and Unblock the Notifications