ಬೀದರ್: ಬಿಜೆಪಿಯ ನಂಗಾನಾಚ್ ಬಟಾಬಯಲು

Hyderabad girls nanga naach video shows Bidar BJP leaders in awkward positions
ಬೀದರ್, ಅ.4: ಅಧಿಕಾರದಿಂದ ಕೆಳಗಿಳಿದರೂ ಬಿಜೆಪಿಯ ನಂಗಾನಾಚ್ ಸಂಸ್ಕೃತಿ ಇನ್ನೂ ನಿಂತಿಲ್ಲ. ಬಿಜೆಪಿಯ ನಂಗಾನಾಚ್ ಮತ್ತೊಮ್ಮೆ ಬಟಾಬಯಲಾಗಿದ್ದು, ಪಕ್ಷದ ಮರ್ಯಾದೆ ಬೀದಿಗೆ ಬಿದ್ದಿದೆ.

ಈ ಸಂಬಂಧ ಟಿವಿ ಮಾದ್ಯಮಗಳಲ್ಲಿ ಬೆಳಗ್ಗೆಯಿಂದ ವಿಡಿಯೋ ದೃಶ್ಯಗಳು ಒಂದೇ ಸಮನೆ ಪ್ರಸಾರವಾಗುತ್ತಿವೆ. ಬಿಜೆಪಿಯ ಬೀದರ್ ಜಿಲ್ಲಾ ಘಟಕದ ನಾಯಕರು ಈ ನಂಗಾನಾಚ್ ವಿಡಿಯೋ ಮೂಲಕ ಬೆತ್ತಲಾಗಿದ್ದಾರೆ. ಬಿಜೆಪಿ ಮಂದಿಯ ಈ ನಂಗಾನಾಚ್ ವಿರುದ್ಧ ರಾಜ್ಯಾದೆಲ್ಲೆಡೆಯಿಂದ ಆಕ್ರೋಶಗಳ ಸುರಿಮಳೆಯಾಗುತ್ತಿದೆ.

ಏನೆಂದರೆ ಹೈದರಾಬಾದಿನಿಂದ ಯುವತಿಯರನ್ನು ಕರೆತಂದು ಬಿಜೆಪಿ ಜಿಲ್ಲೆ ಪ್ರಧಾನ ಕಾರ್ಯದರ್ಶಿಯಾದ ಬಾಬು ವಾಲಿ ಅವರು ಇಲ್ಲಿನ ಗೆಸ್ಟ್ ಹೌಸ್ ನಲ್ಲಿ ಈ ನಂಗಾನಾಚ್ ಏರ್ಪಡಿಸಿದ್ದಾರೆ. ಅದರಲ್ಲಿ ಸುಮಾರು 10 ಜೋಡಿಗಳು ವೃತ್ತಾಕಾರದಲ್ಲಿ ಆಸೀನರಾಗಿ, ವೇದಿಕೆಯ ಮಧ್ಯೆ ಹೈದರಾಬಾದ್ ಯುವತಿಯರನ್ನು ಸಂಪೂರ್ಣವಾಗಿ ನಗ್ನಗೊಳಿಸಿ ಬೆತ್ತಲೆನೃತ್ಯ ಮಾಡಿಸುತ್ತಾರೆ.

ಇತರೆ ಜೋಡಿಗಳು ಅದನ್ನು ಆಸ್ವಾದಿಸುತ್ತಾ ವಿಕೃತ ಆನಂದ ಪಡುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಬಾಬು ವಾಲಿ ಸಹ ಈ ದೃಶ್ಯಗಳಲ್ಲಿ ಢಾಳಾಗಿ ಕಂಡುಬರುತ್ತಾರೆ. 'ಪ್ರವರ್ಧ' ಎಂಬ NGO ಮುಖ್ಯಸ್ಥ ಕುದುರೆ ಅವರೂ ಸಹ ಬಾಬು ವಾಲಿಗೆ ಸಾಥ್ ನೀಡಿರುವುದು ವಿಡಿಯೋ ದೃಶ್ಯಗಳು ಕಂಡುಬರುತ್ತದೆ. ಬಿಎಸ್ ಕುದುರೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರೂ ಆಗಿದ್ದಾರೆ. ಇನ್ನು, ಡಿಸಿಸಿ ಬ್ಯಾಂಕ್ ನ ಮಾಜಿ ಎಂಡಿ ಪತ್ರಿ ನಂಗಾನಾಚ್ ನಲ್ಲಿ ಪಾಲ್ಗೊಂಡಿರುವುದು ಕಂಡುಬರುತ್ತದೆ.

ಆದರೆ ಬಾಬು ವಾಲಿ ಇದನ್ನು ಅಲ್ಲಗಳೆದಿದ್ದು, ಆ ವಿಡಿಯೋದಲ್ಲಿರುವ ವ್ಯಕ್ತಿ ತಾನು ಅಲ್ಲವೇ ಅಲ್ಲ ಅಂದಿದ್ದಾರೆ. ರಾಜಕೀಯವಾಗಿ ತನ್ನ ಏಳ್ಗೆಯನ್ನು ಸಹಿಸದೆ ವಿರೋಧಿಗಳು ಇಂತಹ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ 'ಬಾಬು ವಾಲಿಯೇ ತನಗೆ ಬೆದರಿಕೆಯೊಡ್ಡಿ ಬಲವಂತವಾಗಿ ಇಂತಹ ನಗ್ನ ನೃತ್ಯ ಮಾಡಿಸಿದ್ದಾರೆ' ಎಂದು ನಂಗಾನಾಚ್ ಮಾಡುವ ಹೈದರಾಬಾದಿನ ಯುವತಿ ಅಲವತ್ತುಕೊಂಡಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+