ಹಟ್ಟಿ ಚಿನ್ನದ ಗಣಿಯಲ್ಲಿ 35 ಉದ್ಯೋಗಾವಕಾಶಗಳು
ರಾಯಚೂರು, ನ.5: ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ 35ಕ್ಕೂ ಅಧಿಕ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮ್ಯಾನೇಜ್ಮೆಂಟ್ ಟ್ರೈನಿ, ಮೆಡಿಕಲ್ ಆಫೀಸರ್, ಹಿರಿಯ ವ್ಯವಸ್ಥಾಪಕ, ಸೆಕ್ಯುರಿಟಿ ಅಧಿಕಾರಿ ಮುಂತಾದ ಹುದ್ದೆಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.
ಹಟ್ಟಿ ಚಿನ್ನದ ಗಣಿ ಕಂಪನಿ ಹುದ್ದೆಗಳ ಹೆಸರು ಹಾಗೂ ಖಾಲಿ ಇರುವ ಹುದ್ದೆಗಳ ಸಂಖ್ಯೆ ವಿವರ:
1. ಮ್ಯಾನೇಜ್ಮೆಂಟ್ ಟ್ರೈನಿ (Metallurgy) : 6
2. ಮ್ಯಾನೇಜ್ಮೆಂಟ್ ಟ್ರೈನಿ (Exploration) : 1
3. ಮ್ಯಾನೇಜ್ಮೆಂಟ್ ಟ್ರೈನಿ (Mining) : 8
4. ಮ್ಯಾನೇಜ್ಮೆಂಟ್ ಟ್ರೈನಿ (Civil) : 4
5. ಮ್ಯಾನೇಜ್ಮೆಂಟ್ ಟ್ರೈನಿ (Mechanical) : 4
6. ಮೆಡಿಕಲ್ ಆಫೀಸರ್ (ಪುರುಷ/ಸ್ತ್ರೀ) : 4
7. ಹಿರಿಯ ಮ್ಯಾನೇಜರ್ (Mining) : 1
8. ಹಿರಿಯ ಮ್ಯಾನೇಜರ್ (Finance) : 1
9. ಹಿರಿಯ ಮ್ಯಾನೇಜರ್ (Exploration) : 1
10. ಹಿರಿಯ ಮ್ಯಾನೇಜರ್ (HR) : 1
11. ಮ್ಯಾನೇಜರ್ (Mining) : 1
12. ಮುಖ್ಯ ಭದ್ರತಾ ಸಿಬ್ಬಂದಿ : 1
13. ಮ್ಯಾನೇಜರ್ (Finance) : 1
14. ಮ್ಯಾನೇಜರ್(HR) : 1

ವಿದ್ಯಾರ್ಹತೆ:
* ಹುದ್ದೆ 1: ಪಿ.ಜಿ ಡಿಗ್ರಿ ಮಿನರಲ್ ಡ್ರೆಸ್ಸಿಂಗ್ ಅಥವಾ ಪ್ರಥಮ ದರ್ಜೆಯಲ್ಲಿ ಮೆಟಲರ್ಜಿ ಪದವಿ/ ಕೆಮಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ.
* ಹುದ್ದೆ 2: ಎಂ ಎಸ್ಸಿ(ಜಿಯೋಲಜಿ)
* ಹುದ್ದೆ 3 ರಿಂದ 5: ಬಿ.ಇ ಡಿಗ್ರಿ ಮೈನಿಂಗ್ ಇಂಜಿನಿಯರಿಂಗ್/ಸಿವಿಲ್/ ಮೆಕ್ಯಾನಿಕಲ್
* ಹುದ್ದೆ 6 : ಎಂ.ಬಿ.ಬಿ.ಎಸ್
* ಹುದ್ದೆ 7 ಹಾಗೂ 11 : ಬಿ.ಇನ್ ಮೈನಿಂಗ್
* ಹುದ್ದೆ 8 ಹಾಗೂ 13 : ಸಿ.ಎ ಎಫ್ ಐಸಿಡಬ್ಲ್ಯೂಎ, ಎಫ್ ಸಿಎ
* ಹುದ್ದೆ 9: ಎಂಎಸ್ಸಿ(ಜಿಯೋಲಜಿ) ಪಿಎಚ್ ಡಿ ಜಿಯೋಲಜಿ
* ಹುದ್ದೆ 10 ಹಾಗೂ 14 : ಸಾಮಾಜಿಕ ಸೇವೆಯಲ್ಲಿ ಸ್ನಾತಕೋತ್ತರ ಪದವಿ.
* ಹುದ್ದೆ 12: ಲೆ. ಕರ್ನಲ್, ಮೇಜರ್, ಕ್ಯಾಪ್ಟನ್ ಅಥವಾ ತತ್ಸಮಾನ ಹುದ್ದೆಯಲ್ಲಿದ್ದವರು/ ಪ್ಯಾರಾ ಮಿಲಿಟರಿ ದಳ/ ಪೊಲೀಸ್ ಇಲಾಖೆಯಲ್ಲಿದ್ದವರು
ಆಯ್ಕೆ ಪ್ರಕ್ರಿಯೆ: ಸಂದರ್ಶನ ಹಾಗೂ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
ಅರ್ಜಿ ಶುಲ್ಕ: ಎಸ್ ಸಿ, ಎಸ್ ಟಿ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ 100 ರು, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 250 ರು.
Hutti Gold Mines Company ಹೆಸರಿನಲ್ಲಿ ಡಿಡಿ ತೆಗೆಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ? : ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆ ಜೊತೆಗೆ ಸ್ವವಿವರ ಹಾಗೂ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಕೆಳಕಂಡ ವಿಳಾಸಕ್ಕೆ ಕಳಿಸಬೇಕು.
ಅರ್ಜಿ ಕಳಿಸಬೇಕಾದ ವಿಳಾಸ:
General Manager (Coord),
Hutti Gold Mines Company Ltd,
PO Hutti 584115,
Raichur District, Karnataka
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15/11/2014
* ಅರ್ಜಿ ನಮೂನೆ ಹಾಗೂ ಇನ್ನಿತರ ವಿವರಗಳಿಗೆ ಹಟ್ಟಿ ಚಿನ್ನದ ಗಣಿ ಕಂಪನಿ ವೆಬ್ ತಾಣಕ್ಕೆ ಭೇಟಿ ಕೊಡಿ.












Click it and Unblock the Notifications