ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು: ಜೂನ್ ವರೆಗೆ ವಿಸ್ತರಣೆ- ಇಲ್ಲಿದೆ ನಂಬರ್, ಟೈಮ್, ನಿಲುಗಡೆ, ಮಾಹಿತಿ
ಹುಬ್ಬಳ್ಳಿ ಹಾಗೂ ತಮಿಳುನಾಡಿನ ರಾಮೇಶ್ವರದ ನಡುವೆ ಸಂಚರಿಸುವ ವಿಶೇಷ ರೈಲು ಈ ಜೂನ್ ವರೆಗೂ ಮುಂದುವರಿಯಲಿದೆ ಎಂದು ನೈರುತ್ಯ ರೇಲ್ವೆ ತಿಳಿಸಿದೆ. ಈ ರೈಲು ವಾರಕ್ಕೆ ಒಂದು ಸಾರಿ ಮಾತ್ರ ಸಂಚರಿಸುತ್ತದೆ. ಉಳಿದ ಮಾಹಿತಿ ತಿಳಿಯಿರಿ
ಹುಬ್ಬಳ್ಳಿ, ಮಾರ್ಚ್ 04: ಭಾರತೀಯ ರೈಲ್ವೆಯ ಹಲವು ಜನಪ್ರಿಯ ರೈಲು ಮಾರ್ಗಗಳನ್ನು ಹೊಂದಿದೆ. ಇದು ಹಬ್ಬದ ಋತುಗಳಲ್ಲಿ ಮಾತ್ರವಲ್ಲದೇ, ಉಳಿದ ದಿನಗಳಲ್ಲಿಯೂ ಅಪಾರ ಜನಸಂದಣಿಯನ್ನು ಆಕರ್ಷಿಸುತ್ತದೆ. ಹುಬ್ಬಳ್ಳಿಯಿಂದ ರಾಮೇಶ್ವರಂ ಜಂಕ್ಷನ್‌ಗೆ ಓಡುವ ಅನೇಕ ರೈಲುಗಳಿವೆ. ಆದರೆ, ಹುಬ್ಬಳ್ಳಿಯಿಂದ ರಾಮೇಶ್ವರಂ ನಡುವೆ ವಾರಕ್ಕೊಂದು ವಿಶೇಷ ರೈಲು ಸಂಚರಿಸುತ್ತದೆ.
ಹುಬ್ಬಳ್ಳಿ ಹಾಗೂ ತಮಿಳುನಾಡಿನ ರಾಮೇಶ್ವರದ ನಡುವೆ ಸಂಚರಿಸುವ ವಿಶೇಷ ರೈಲು ಈ ಜೂನ್ ವರೆಗೂ ಮುಂದುವರಿಯಲಿದೆ ಎಂದು ನೈರುತ್ಯ ರೇಲ್ವೆ ತಿಳಿಸಿದೆ. ಈ ರೈಲು ವಾರಕ್ಕೆ ಒಂದು ಸಾರಿ ಮಾತ್ರ ಸಂಚರಿಸುತ್ತದೆ. ಈ ರೈಲಿನ ಸಂಖ್ಯೆ 07355/ 07356 ಆಗಿದೆ.

ಹುಬ್ಬಳ್ಳಿ-ರಾಮೇಶ್ವರಂ ರೈಲಿನ ಟೈಮ್ ಟೇಬಲ್, ಲೈವ್ ಸ್ಟೇಟಸ್ ಪರಿಶೀಲಿಸಲು ಭಾರತೀಯ ರೈಲ್ವೆ ವೆಬ್‌ಸೈಟ್ ಅನ್ನು ನೋಡಬಹುದು. ಅಲ್ಲಿ ನಿಮ್ಮ ಟಿಕೆಟ್‌ಗಳನ್ನು ಮುಂಚಿತವಾಗಿ ಬುಕ್ ಮಾಡಿ ಮತ್ತು ನಿಮ್ಮ ಪ್ರಯಾಣವನ್ನು ತೊಂದರೆ-ಮುಕ್ತ ಅನುಭವವನ್ನಾಗಿ ಮಾಡಿಕೊಳ್ಳಬಹುದು.
ಹಾವೇರಿ, ತುಮಕೂರು, ಯಶವಂತಪುರ, ಬಾಣಸವಾಡಿ, ಹೊಸೂರು, ಸೇಲಂ, ನಾಮಕ್ಕಲ್, ತಿರುಚ್ಚಿ, ಪುದುಕೊಟ್ಟೈ ಮೂಲಕ ಹುಬ್ಬಳ್ಳಿ- ರಾಮೇಶ್ವರಂ ವಿಶೇಷ ರೈಲು ಸಂಚರಿಸುತ್ತದೆ.

ಈ ವಿಶೇಷ ರೈಲನ್ನು ಹೊಂದಿರುವ ಹುಬ್ಬಳ್ಳಿ-ರಾಮೇಶ್ವರಂ ಮಾರ್ಗವು ಭಾರತೀಯ ರೈಲ್ವೆಯ ಅತ್ಯಂತ ಜನನಿಬಿಡ ರೈಲು ಮಾರ್ಗಗಳಲ್ಲಿ ಒಂದಾಗಿದೆ. ಹುಬ್ಬಳ್ಳಿಯಿಂದ ರಾಮೇಶ್ವರಂಗೆ ಸಂಪರ್ಕ ಕಲ್ಪಿಸುವ ರೈಲು ವಿಶಾಲವಾದ ಹಸಿರು ಗದ್ದೆಗಳು, ಕಾಡುಗಳು, ಸೇತುವೆಗಳು ಮತ್ತು ಹಳ್ಳಿಗಳ ಮೂಲಕ ಹಾದುಹೋಗುತ್ತದೆ. ಇದು ಪ್ರಕೃತಿಯನ್ನು ಸವಿಯಲು ಅದ್ಬುತ ಸಮಯವನ್ನು ಒದಗಿಸುತ್ತದೆ. ಪ್ರಯಾಣಿಕರು ರೈಲಿನಲ್ಲಿ ರೆಸ್ಟೋರೆಂಟ್ ಶೈಲಿಯ ಬಿಸಿ ಮತ್ತು ಆರೋಗ್ಯಕರ ಆಹಾರವನ್ನು ಸವಿಯಬಹುದು.
ಈ ರೈಲು ಶನಿವಾರದಂದು ಬೆಳಿಗ್ಗೆ 6.30 ಕ್ಕೆ ಹುಬ್ಬಳ್ಳಿಯಿಂದ ಹೊರಟು ಭಾನುವಾರದಂದು ಬೆಳಿಗ್ಗೆ 6.15 ಕ್ಕೆ ರಾಮೇಶ್ವರಂ ತಲುಪಲಿದೆ ಎಂದು ರೈಲ್ವೆ ವಿಭಾಗದ ಪ್ರಕಟಣೆ ತಿಳಿಸಿದೆ. ಅಂತೆಯೇ, ರೈಲು ಸಂಖ್ಯೆ 07356 ರಾಮೇಶ್ವರಂ-ಹುಬ್ಬಳ್ಳಿ ವಿಶೇಷ ರೈಲು ರಾಮೇಶ್ವರಂನಿಂದ ರಾತ್ರಿ 9 ಗಂಟೆಗೆ ಹೊರಡಲಿದೆ.
ಈ ರೈಲಿನಲ್ಲಿ ಎಸಿ 2-ಟೈರ್ - 1, ಎಸಿ 3-ಟೈರ್ - 3, ಸ್ಲೀಪರ್ ಕ್ಲಾಸ್ - 9, ಜನರಲ್ ಸೆಕೆಂಡ್ ಕ್ಲಾಸ್ - 5 ಮತ್ತು ಲಗೇಜ್-ಕಮ್-ಬ್ರೇಕ್ ವ್ಯಾನ್ - 2 ಕೋಚ್‌ಗಳಿವೆ. ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ ಬಾಣಸವಾಡಿ, ಹೊಸೂರು, ಧರ್ಮಪುರಿ, ಸೇಲಂ, ನಾಮಕ್ಕಲ್, ಕರೂರ್, ತಿರುಚಿರಾಪಳ್ಳಿ, ಪುದುಕೊಟ್ಟೈ, ಕಾರೈಕುಡಿ, ಮಾನಮದುರೈ ಮತ್ತು ರಾಮನಾಥಪುರದಲ್ಲಿ ರೈಲು ನಿಲುಗಡೆಯಾಗಲಿದೆ.
ತಮಿಳುನಾಡಿನಲ್ಲಿ ರೈಲು ನಿಲುಡೆಯ ಸಮಯಗಳು: ರೈಲು ನಂ.07355 (ಶನಿವಾರ) - ಸೇಲಂ - 7.50 p.m., ನಾಮಕ್ಕಲ್ - 8.44 p.m. ಮತ್ತು ಕರೂರ್ - 9.58 p.m. ರೈಲು ಸಂಖ್ಯೆ.07356 (ಸೋಮವಾರ) - ಕರೂರ್ - ಬೆಳಗ್ಗೆ 3.48, ನಾಮಕ್ಕಲ್ - ಬೆಳಗ್ಗೆ 4.19 ಮತ್ತು ಸೇಲಂ - ಬೆಳಗ್ಗೆ 5.45 ಆಗಿರುತ್ತದೆ.












Click it and Unblock the Notifications