Get Updates
Get notified of breaking news, exclusive insights, and must-see stories!

Lok Sabha Election: ಇಂಡಿಯಾ ಮೈತ್ರಿ-ದಲಿತ ಪ್ರಧಾನಿ ಅಭ್ಯರ್ಥಿಯ ಭವಿಷ್ಯ ನುಡಿದ ಕಾರಜೋಳ

ಹುಬ್ಬಳ್ಳಿ, ಡಿಸೆಂಬರ್ 29: ಲೋಕಸಭಾ ಚುನಾವಣೆಗೆ ಎಲ್ಲ ಪಕ್ಷಗಳು ತಯಾರಿ ನಡೆಸುತ್ತಿವೆ. ಇತ್ತ ಇಂಡಿಯಾ ಮೈತ್ರಿ ಕೂಟದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿಯನ್ನಾಗಿ ಬೇಕು ಅಂತಲೇ ಪ್ರಸ್ತಾಪಿಸಲಾಗುತ್ತಿದೆ. ಪ್ರಧಾನಿ ಮೋದಿಯವರು ಇರುವವರೆಗೂ ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬರಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಆಗಲ್ಲ ಎಂದು ಬಿಜೆಪಿ ನಾಯಕ ಮಾಜಿ ಸಚಿವ ಗೋವಿಂದ ಕಾರಜೋಳ ಭವಿಷ್ಯ ನುಡಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಯತ್ನ ನಡೆಸಲಾಗುತಿದೆ. ಇದೊಂದು ಮೋಸದಾಟ ಅಷ್ಟೇ ಎಂದು ಅವರು ಗಂಭೀರ ಆರೋಪ ಮಾಡಿದರು.

Hubballi: Govind Karjol Said Future of INDIA Alliance-Congress PM Candidate Mallikarjun Kharge

ಮಲ್ಲಿಕಾರ್ಜುನ ಖರ್ಗೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ನಲ್ಲಿ ಪ್ರಧಾನಿ ಆಗಲ್ಲ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಇರುವವರೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಉದ್ದೇಶ ಪೂರ್ವಕವಾಗಿಯೇ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುನ್ನಲೇ ತರಲಾಗುತ್ತದೆ.

2013 ರಲ್ಲಿಯೇ ದಲಿತರಿಗೆ ಸ್ಥಾನ ನೀಡಬೇಕಿತ್ತು?

ದಲಿತರನ್ನ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡಿದರೂ ಸಹಿತ ನಾವು ಅಧಿಕಾರಕ್ಕೆ ಬರಲಿಲ್ಲ ಎಂದು ಕಾಂಗ್ರೆಸ್ ನವರು ಗೊಬೆ ಕುರಿಸುವ ಹುನ್ನಾರ ಮಾಡಿಕೊಂಡಿದೆ. ದಲಿತರ ಮೇಲೆ ಕಾಂಗ್ರೆಸ್ ಗೆ ಪ್ರೀತಿ ಇದ್ದರೆ 2013 ರಲ್ಲಿಯೇ ಮಾಡಬೇಕಿತ್ತು. ಕಾಂಗ್ರೆಸ್ ಸ್ಪಷ್ಟವಾದ ಬಹುಮತ ಬಂದಿತ್ತು. ಕೆಪಿಸಿಸಿ ಅಧ್ಯಕ್ಷರಾಗಿ ಜಿ ಪರಮೇಶ್ವರ ರಾಜ್ಯ ಸುತ್ತಾಡಿ ಪಕ್ಷವನ್ನ ಅಧಿಕಾರಕ್ಕೆ ತಂದರು.

ಆದರೆ ಜಿ ಪರಮೇಶ್ವರಗೂ ಏನು ಮಾಡಲಿಲ್ಲ. ಅಂದು ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ಅಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಆಂತರಿಕ ಚುನಾವಣೆ ನಡೆಸಿದರು. ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಗೆ ಶಾಸಕರು ಮತ ಚಲಾವಣೆ ಮಾಡಿದರು. ಮಲ್ಲಿಕಾರ್ಜುನ ಖರ್ಗೆಗೆ ಕೇವಲ 16-17 ಮತ ಬಂದವು ಆದರೆ ಸಿದ್ದರಾಮಯ್ಯಾಗೆ ಅಧಿಕ ಮತ ಬಂದವು.

Hubballi: Govind Karjol Said Future of INDIA Alliance-Congress PM Candidate Mallikarjun Kharge

ದಲಿತರ ಮೇಲಿನದ್ದು ಡಾಂಭಿಕ ಪ್ರತಿ

ಕಾಂಗ್ರೆಸ್‌ನಿಂದ ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಅವರ ಹೆಸರು ಘೋಷಣೆ ಮಾಡಲಾಯಿತು. ನಾವು ಕಾಂಗ್ರೆಸ್ ಆಡಳಿತವನ್ನ ಬಹಳ ದಿನಗಳಿಂದ ನೋಡಿದ್ದೇವೆ. 60 ವರ್ಷಗಳ ಆಡಳಿತ, ಜೊತೆಗೆ ಜವಾಹರಲಾಲ್ ನೆಹರು ಮನೆತನದ 36 ವರ್ಷ ಆಡಳಿತ ಗೊತ್ತು. ಈಗ ಕಾಂಗ್ರೆಸ್ ನವರಿಗೆ ದಲಿತರ ಮೇಲೆ ಪ್ರೀತಿ ಉಕ್ಕಿ ಬಂದಿದೆ ಬರಿ ದಲಿತರ ಮೇಲಿನ‌ ಡಾಂಭಿಕ ಪ್ರೀತಿ ಇದೆ ಎಂದು ಅವರು ಲೇವಡಿ ಮಾಡಿದರು.

ಬಿಜೆಪಿ-ಜೆಡಿಎಸ್ ಬಗ್ಗೆ ಕಾರಜೋಳ ಪ್ರತಿಕ್ರಿಯೆ

ಇನ್ನು ಬಿಜೆಪಿ-ಜೆಡಿಎಸ್ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಹಾಗೂ ಕ್ಷೇತ್ರ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು ವಿಧಾನ ಪರಿಷತ್ ಚುನಾವಣಾ ಎದುರುಸುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್, ಸ್ಥಾನ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಸಹಜಇದನ್ನು ನಮ್ಮ ಪಕ್ಷದ ಹಿರಿಯ ನಾಯಕರು ನೋಡಿಕೊಳ್ಳುತ್ತಾರೆ. ಇದೊಂದು ರಾಷ್ಟ್ರೀಯ ಮಟ್ಟದಲ್ಲಿ ನಡೆದ ಹೊಂದಾಣಿಕೆ ಎಂದು ತಿಳಿಸಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪಕ್ಷದ ಆಂತರಿಕ ವಿಚಾರ ಬಹಿರಂಗ ಪ್ರಸ್ತಾಪ ವಿಚಾರವಾಗಿ, ನಾನು ಏನು ಕಾಮೆಂಟ್ ಮಾಡುವುದಿಲ್ಲ. ಅವರ ಹೇಳಿಕೆ ಕುರಿತು ನಾನು ಪ್ರಕ್ರಿಯಿಸುವುದಿಲ್ಲ ಎಂದು ನಿರಾಕರಿಸಿದರು.

ಮೀಸಲಾತಿ ವಿಚಾರದಲ್ಲಿ ರಾಜಕೀಯ ಸಲ್ಲದು

ಹಿಂದುಳಿದ ವರ್ಗದವರಿಗೆ ಮೀಸಲಾತಿ ವಿಚಾರ ಕುರಿತು ಸರ್ಕಾರದ ನಡೆ ವಿಚಾರ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಮೀಸಲಾತಿ ಎಂದರೆ ಅದೊಂದು ಹಿಂದುಳಿದ ವರ್ಗಗಳ ಶ್ರೇಯಸ್ಸಿಗಾಗಿ ಇರಬೇಕು. ಸಾಮಾಜಿಕ ಆರ್ಥಿಕ, ರಾಜಕೀಯವಾಗಿ ತುಳಿತಕ್ಕೆ ಒಳಗಾದವರ ಏಳಿಗೆಗೆ ಇರಬೇಕು. ಆದರೆ ಅದು ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತ ಬಂಧನ ವಿಚಾರವಾಗಿ ಕಿಡಿ ಕಾರಿದ ಅವರು ಕೊಡಲೇ ಕರವೇ ಕಾರ್ಯಕರ್ತರ ಬಿಡುಗಡೆ ಮಾಡಲಿ ಸರಕಾರ ಕನ್ನಡ ಪರ ಹೋರಾಟಗಾರ ಹತ್ತಿಕ್ಕುವ ಕೆಲಸ ಮಾಡಬಾರದು. ಸ್ವಾತಂತ್ರ್ಯ ಬಂದು ಇಷ್ಟು ದಿನಗಳು ಆದವು ಇನ್ನು ಕನ್ನಡ ನೆಲದಲ್ಲಿ ಕನ್ನಡಕ್ಕಾಗಿ ಹೋರಾಟ ಮಾಡಬೇಕಾಗಿದೆ ಎಂದು ಅವರು ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದರು..

ಕನ್ನಡ ಪರ ಹೋರಾಟಗಾರರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಮಾಜಿ ಸಿದ್ದರಾಮಯ್ಯನವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವರು. ಆದರೆ ಈ ರೀತಿಯಾಗಿ ಕನ್ನಡ ಪರ ಹೋರಾಟಗಾರರ ಮೇಲೆ ದೌರ್ಜನ್ಯ ಸರಿಯಲ್ಲ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+