SWR: ರದ್ದಾಗಿದ್ದ ರೈಲು ಸಂಚಾರ ಆ.15ರಿಂದ ಪುನರಾರಂಭ, ಮಲೆನಾಡಿನ ರೈಲು ಯೋಜನೆಗಳಿಗೆ ವೇಗ ನೀಡಲು ಒತ್ತಾಯ

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಹುಬ್ಬಳ್ಳಿ ವಿಭಾಗದಲ್ಲಿ ಕಾಮಗಾರಿ ಕಾರಣಗಳಿಂದ ಭಾಗಶಃ ರದ್ದುಗೊಳಿಸಲಾಗಿದ್ದ ರೈಲು ಸೇವೆಯು ಪುನರ್ ಆರಂಭಗೊಂಡಿದೆ. ಹುಬ್ಬಳ್ಳಿಯಿಂದ ಗೋವಾ ಮಾರ್ಗದಲ್ಲಿ ಲೊಂಡ ಮತ್ತು ಕ್ಯಾಸಲ್ ರಾಕ್ ನಡುವಿನ ರೈಲುಗಳ ಸಂಚಾರ ಎಂದಿನಂತೆ ಶುರುವಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ ವಿಭಾಗದ ಕ್ಯಾಸಲ್ ರಾಕ್-ಲೊಂಡ-ಕ್ಯಾಸಲ್ ರಾಕ್ ಭಾಗದಲ್ಲಿ ದ್ವಿಪಥ (ರೈಲು ಮಾರ್ಗ ದ್ವಿಗುಣಗೊಳಿಸುವ) ಕಾಮಗಾರಿ ನಡೆದಿತ್ತು. ಹೀಗಾಗಿ ಮಿರಜ್-ಕ್ಯಾಸಲ್ ರಾಕ್-ಮಿರಜ್ ಎಕ್ಸ್‌ಪ್ರೆಸ್ ರೈಲುಗಳ (17333/17334 ) ಲೊಂಡ ಮತ್ತು ಕ್ಯಾಸಲ್ ರಾಕ್ ನಡುವಿನ ಸಂಚಾರವನ್ನು ಭಾಗಶಃ ರದ್ದುಗೊಳಿಸಿ ಈ ಹಿಂದೆ ಆದೇಶಿಸಲಾಗಿತ್ತು.

Hubballi

ಯಾವ ದಿನಾಂಕದಿಂದ ರೈಲು ಸೇವೆ ಪುನಾರಂಭ

ಲೊಂಡ ಮತ್ತು ಕ್ಯಾಸಲ್ ರಾಕ್ ನಡುವೆ ಭಾಗಶಃ ರದ್ದಾಗಿ, ಲೊಂಡದಲ್ಲೇ ಪ್ರಯಾಣ ಕೊನೆಗೊಳ್ಳುತ್ತಿದ್ದ 'ಮಿರಜ್-ಕ್ಯಾಸಲ್ ರಾಕ್ ಎಕ್ಸ್‌ಪ್ರೆಸ್ ರೈಲು' (17333) ಸೇವೆ ಆಗಸ್ಟ್ 15, 2026 ರಿಂದ ಪ್ರಾರಂಭವಾಗಲಿದೆ. ಈ ರೈಲು ಇನ್ಮುಂದೆ ಲೊಂಡ ಬದಲಿಗೆ ಕ್ಯಾಸಲ್ ರಾಕ್‌ವರೆಗೆ ಸಂಚರಿಸಿ ಅಲ್ಲಿಯೇ ಕೊನೆಗೊಳ್ಳಲಿದೆ.

ಕ್ಯಾಸಲ್ ರಾಕ್ ಮತ್ತು ಲೊಂಡ ನಡುವೆ ಭಾಗಶಃ ರದ್ದಾಗಿ, ಕ್ಯಾಸಲ್ ರಾಕ್ ಬದಲಿಗೆ ಲೊಂಡದಿಂದ ಹೊರಡುತ್ತಿದ್ದ 'ಕ್ಯಾಸಲ್ ರಾಕ್-ಮಿರಜ್ ಎಕ್ಸ್‌ಪ್ರೆಸ್ ರೈಲು' (17334) ಸೇವೆ ಸಹ ಆಗಸ್ಟ್ 15ರಿಂದ ಆರಂಭವಾಗಲಿದೆ. ಈ ರೈಲು ಇನ್ಮುಂದೆ ಲೊಂಡ ಬದಲಿಗೆ ಕ್ಯಾಸಲ್ ರಾಕ್‌ನಿಂದಲೇ ತನ್ನ ಪ್ರಯಾಣ ಆರಂಭಿಸುತ್ತದೆ. ಈ ಮೇಲಿನ ಎರಡು ರೈಲುಗಳನ್ನು 2023ರ ಡಿಸೆಂಬರ್ 12 ರಿಂದ 2026 ಆಗಸ್ಟ್ 31 ರವರೆಗೆ ಜಾರಿಗೆ ಬರುವಂತೆ ಈ ರೈಲು ಕಾರ್ಯಾಚರಣೆ ಮಾಡಲಾಗುತ್ತಿದೆ.

ಶಿವಮೊಗ್ಗ: ಪ್ರಮುಖ ರೈಲ್ವೆ ಯೋಜನೆ ಪೂರ್ಣಕ್ಕೆ BYR ಒತ್ತಾಯ

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ (SDCCI) ಪ್ರಮುಖ ಪದಾಧಿಕಾರಿಗಳ ನಿಯೋಗದೊಂದಿಗೆ ಇಂದು ಬುಧವಾರ ನವದೆಹಲಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರ ಹಾಗೂ ಬೈಂದೂರು ಭಾಗದ ಬಾಕಿ ಉಳಿದಿರುವ ಪ್ರಮುಖ ರೈಲ್ವೆ ಯೋಜನೆಗಳು ಮತ್ತು ಮೂಲಸೌಕರ್ಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅವರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೋಟೆಗಂಗೂರು ಕೋಚಿಂಗ್ ಡಿಪೋ, ಶಿವಮೊಗ್ಗ-ಮೈಸೂರು ರೈಲು ಸಂಪರ್ಕದ ಬಲವರ್ಧನೆ, ಬೈಂದೂರು ಭಾಗದ ರೈಲ್ವೆ ಮೂಲಸೌಕರ್ಯ ಸೇರಿದಂತೆ ಜನತೆ ಮತ್ತು ವ್ಯಾಪಾರ ವಲಯಕ್ಕೆ ಅತ್ಯಂತ ಅಗತ್ಯವಾಗಿರುವ ವಿವಿಧ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಮನವಿ ಮಾಡಿರುವುದಾಗಿ ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಹಾಗೂ ಮಲೆನಾಡಿನ ಸಮಗ್ರ ಅಭಿವೃದ್ಧಿಗೆ ರೈಲ್ವೆ ಮೂಲಸೌಕರ್ಯ ಅತ್ಯಂತ ಪ್ರಮುಖವಾಗಿದೆ. ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಕ್ಷೇತ್ರದ ರೈಲ್ವೆ ಅಭಿವೃದ್ಧಿ ಯೋಜನೆಗಳನ್ನು ಶೀಘ್ರದಲ್ಲೇ ಸಾಕಾರಗೊಳಿಸಬೇಕೆಂದು ಕೋರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+