ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ : ಚರಂಡಿ ಸೇರುತ್ತಿರುವ ಕುಡಿಯುವ ನೀರು!

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮೇ 17 : ಹುಬ್ಬಳ್ಳಿ ನಗರದ ಗೋಕುಲ ರಸ್ತೆಯಲ್ಲಿರುವ ತೋಳನಕೆರೆ ಪಕ್ಕದ ಅಕ್ಷಯ ಕಾಲೋನಿ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದಿದ್ದು, ಅಪಾರ ಪ್ರಮಾಣದ ನೀರು ಚರಂಡಿ ಸೇರುತ್ತಿದೆ. ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ, ಇದರಿಂದ ಜನರು ಅಸಮಾಧಾನಗೊಂಡಿದ್ದಾರೆ.

ಸೋಮವಾ ಸಂಜೆ ಈ ಪ್ರದೇಶದ ಸುತ್ತಮುತ್ತಲೂ ಕುಡಿಯುವ ನೀರನ್ನು ಜಲಮಂಡಳಿ ಒದಗಿಸಿತ್ತು. ಕುಡಿಯುವ ನೀರಿನ ಪೈಪ್ ಲೈನ್ ಇರುವ ಜಾಗದಲ್ಲಿ ವಿದ್ಯುತ್ ಕಂಬ ಹಾಕಲು ಬಂದ ಕಾರ್ಮಿಕರು, ಗುಂಡಿ ತೆಗೆಯುವಾಗಿ ನೀರಿನ ಪೈಪ್ ಒಡೆದಿದೆ. ಆದರೆ, ಈ ಬಗ್ಗೆ ಯಾರಿಗೂ ತಿಳಿಸದೆ ಅವರು ಜಾಗ ಖಾಲಿ ಮಾಡಿದ್ದಾರೆ. [ಕುಡಿಯುವ ನೀರಿನ ನಿರೀಕ್ಷೆಯಲ್ಲಿ ಖಾಲಿ ಬಿಂದಿಗೆ ಸಾಲು]

drinking water

ಮಂಗಳವಾರ ರಾತ್ರಿ ಕುಡಿಯುವ ನೀರು ಬಿಟ್ಟಿದ್ದರಿಂದ, ಒಡೆದ ಪೈಪ್ ಮೂಲಕ ರಾತ್ರಿಯೀಡಿ ಅಪಾರ ಪ್ರಮಾಣದ ನೀರು ಚರಂಡಿಗೆ ಹರಿದಿದೆ. ಈ ಬಗ್ಗೆ ಯಾವ ಅಧಿಕಾರಿಗಳು ಗಮನ ಹರಿಸಿಲ್ಲ. ಜೊತೆಗೆ ಇಲ್ಲಿ ಜನವಸತಿಯೂ ಇಲ್ಲವಾದ್ದರಿಂದ ಸಾರ್ವಜನಿಕರು ಸುಮ್ಮನೇ ಕೆರೆ ನೀರು ಎಂದು ಕೊಂಡಿದ್ದಾರೆ. [ಕುಡಿಯುವ ನೀರಿಗೂ ಸಂಕಷ್ಟ : ಬರಗಾಲಕ್ಕೆ ಕಾರಣ ಯಾರು?]

ಮಂಗಳವಾರ ಬೆಳಗ್ಗೆ ಅಕ್ಷಯ ಕಾಲೋನಿ ಜನರು ನಲ್ಲಿಯಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಬರುತ್ತಿರುವುದನ್ನು ಗಮನಿಸಿ, ಜಲಮಂಡಳಿಯವರಿಗೆ ತಿಳಿಸಿದ್ದಾರೆ. ಆದರೆ ಯಾವ ಅಧಿಕಾರಿಗಳೂ ಇದುವರೆಗೂ ಸ್ಥಳಕ್ಕೆ ಬಂದಿಲ್ಲ. [ಹುಬ್ಬಳ್ಳಿ: ವಾಟರ್ ಸಪ್ಲೈ ಅಲರ್ಟ್ ಬಂದ್, ತಪ್ಪು ಯಾರದ್ದು?]

ನಗರದಲ್ಲಿ ಮೊದಲೇ ಐದಾರು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಈ ಪ್ರಮಾಣದಲ್ಲಿ ನೀರು ಪೋಲಾದರೆ ಯಾರು ಹೊಣೆ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

English summary
A huge volume of precious drinking water was completely wasted due to damaged drinking water pipeline near Akshay colony, Hubballi on May 17th, 2016 morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X