ವಾಹನ ಕಳ್ಳರಿಗೆ ಶಾಕ್: ನಂಬರ್ ಪ್ಲೇಟ್ ಬದಲಾವಣೆಯಿಂದ ಏನು ಪ್ರಯೋಜನ?
ಬೈಕ್, ಕಾರು, ಲಾರಿ ಹೀಗೆ ಎಲ್ಲಾ ವಾಹನಗಳ ಮಾಲೀಕರಿಗೆ ಈಗ ಭರ್ಜರಿ ಟೆನ್ಷನ್ ಶುರು ಆಗಿದೆ. ಯಾಕಂದ್ರೆ ಆದಷ್ಟು ಬೇಗ ತಮ್ಮ ತಮ್ಮ ವಾಹನಗಳಿಗೆ, ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕಿದೆ. 5 ದಿನದ ಒಳಗಾಗಿ, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ಸಮಸ್ಯೆ ಗ್ಯಾರಂಟಿ. ಹೀಗಾಗಿಯೇ ಅಲರ್ಟ್ ಆಗಿ ವಾಹನ ಮಾಲೀಕರೂ, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಪರದಾಡುತ್ತಿದ್ದಾರೆ. ಹಾಗಾದರೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯಿಂದ ಏನು ಪ್ರಯೋಜನ?
ವಾಹನ ಮಾಲೀಕರಿಗೆ ಸರ್ಕಾರ ಹಲವು ನಿಯಮ ಜಾರಿಗೆ ತಂದಿದೆ. ಆದರೆ ಈ ನಿಯಮಗಳನ್ನು ಅನುಸರಿಸಿದರೆ ಸರ್ಕಾರಕ್ಕೆ ಮಾತ್ರವಲ್ಲ, ನಿಮಗೂ ಅನುಕೂಲ ಇದೆ. ಅದರಲ್ಲೂ ಇದೀಗ, ತುಂಬಾ ದೊಡ್ಡ ಸದ್ದು ಮಾಡುತ್ತಿರುವ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಕೂಡ ಅತ್ಯಗತ್ಯ. ಹಾಗಾದರೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿದರೆ, ನಿಮ್ಮ ವಾಹನಕ್ಕೆ ಇದರಿಂದ ಏನೆಲ್ಲಾ ಪ್ರಯೋಜನ ಆಗಲಿದೆ ಗೊತ್ತಾ? ಸಂಪೂರ್ಣ ಮಾಹಿತಿಗಾಗಿ, ಮುಂದೆ ಓದಿ.

ಗಾಡಿ ಕಳ್ಳರು ಮುಟ್ಟಲು ಆಗಲ್ಲ!
ಎಚ್‌ಎಸ್‌ಆರ್‌ಪಿ ಅಂದ್ರೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಈ ಆಧುನಿಕ ಜಗತ್ತಿನಲ್ಲಿ ಹೊಸ ಕ್ರಾಂತಿ ಮಾಡುತ್ತಿದೆ. ಇದು ಅಲ್ಯುಮಿನಿಯಂ ಲೋಹದ ಮೂಲಕ ತಯಾರಿಸಿದ ಪ್ಲೇಟ್ ಆಗಿದೆ. ಹೊಸ ವಾಹನಗಳಲ್ಲಿ ಈ ರಿತಿ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಕೆ ಆಗುತ್ತಾ ಬಂದಿದ್ದು, ಹೊಸ ನಂಬರ್ ಪ್ಲೇಟ್‌ಗಳಲ್ಲಿ ಇಂಗ್ಲಿಷ್ ಅಕ್ಷರ ಹಾಗೂ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತವೆ. ಈ ಪ್ಲೇಟ್ ಅಳವಡಿಸುವಾಗ ಎರಡು ಲಾಕ್ ಪಿನ್ ಹಾಕಿರ್ತಾರೆ. ಪೇಪರ್‌ಗಳ ಸ್ಟೆಪ್ಲರ್ ಪಿನ್ ಮಾಡುವಾಗ ಪಂಚ್ ಮಾಡುವ ರೀತಿಯಲ್ಲಿಯೇ ಹೊಸ ನಂಬರ್ ಪ್ಲೇಟ್ ಅನ್ನ ವಾಹನಕ್ಕೆ ಅಂಟಿಸಿರುತ್ತಾರೆ.
ಹೇಗೆ ತಯಾರಿಸುತ್ತಾರೆ HSRP?
ಅಂದಹಾಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಮೇಲ್ಭಾಗದ, ಎಡಗಡೆ ನೀಲಿ ಬಣ್ಣದ ಅಶೋಕ ಚಕ್ರ ಮುದ್ರೆ ಕಾಣಬಹುದು. 20 ಮಿಲಿ ಮೀಟರ್ ಉದ್ದದ ಈ ಮುದ್ರೆಯನ್ನು, ಕ್ರೋಮಿಯಂನ ಮೆಟಲ್ ಬಳಸಿ ತಯಾರಿಕೆ ಮಾಡಿರುತ್ತಾರೆ. ಈ ಪ್ಲೇಟ್ ನೋಡೋದಕ್ಕೂ, ಆಕರ್ಷಕವಾಗಿಯೇ ಕಾಣುತ್ತದೆ ಹಾಗೂ ಇದರಿಂದ ಸಾಕಷ್ಟು ಪ್ರಯೋಜನ ಕೂಡ ಇದೆ. ಹೀಗಾಗಿಯೇ ಇದೀಗ, ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಅನಿವಾರ್ಯ ಕೂಡ ಆಗುತ್ತಿದೆ. ಅಲ್ಲದೆ ಇದರಿಂದ ನಿಮ್ಮ ವಾಹನಕ್ಕೆ ಭದ್ರತೆಯೂ ಹೆಚ್ಚಾಗಿರುತ್ತದೆ. ಹಾಗಾದರೆ ವಾಹನಕ್ಕೆ ಹೇಗೆಲ್ಲಾ ಭದ್ರತೆ ಸಿಗುತ್ತದೆ? ಮುಂದೆ ಓದಿ.
ವಾಹನದ ಸಂಪೂರ್ಣ ಮಾಹಿತಿ ಇರುತ್ತದೆ
ಮೊದಲೇ ಹೇಳಿದಂತೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅತ್ಯಾಧುನಿಕ ತಂತ್ರಜ್ಞಾನ & ವಸ್ತುಗಳನ್ನ ಬಳಸಿ ಮಾಡಿರುತ್ತಾರೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ನಲ್ಲಿ ನಿಮ್ಮ ಕಾರಿನ ಅಥವಾ ದ್ವಿಚಕ್ರ ವಾಹನದ ಪೂರ್ಣ ಮಾಹಿತಿ ಇರುತ್ತೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ನಲ್ಲಿ ವಾಹನದ ಎಂಜಿನ್ ಸಂಖ್ಯೆ & ಚಾಸ್ಸಿ ಸಂಖ್ಯೆ ಸೇರಿ ಹಲವಾರು ಮಾಹಿತಿಗಳು ಇರುತ್ತೆ. ಈ ಎಲ್ಲಾ ಮಾಹಿತಿ ಕೇಂದ್ರೀಯ ಡೆಟಾ ಬೇಸ್‌ನಲ್ಲಿ ಸಂಗ್ರಹ ಆಗಿರುತ್ತೆ. ಅಕಸ್ಮಾತ್ ನಿಮ್ಮ ವಾಹನ ಅಂದ್ರೆ ಗಾಡಿ ಕಳ್ಳತನ ಆದರೆ ಈ ಮಾಹಿತಿ ತುಂಬಾ ಉಪಯೋಗಕ್ಕೆ ಬರುತ್ತದೆ.

ಬೇಗ ನಿಮ್ಮ ಗಾಡಿ ಹುಡುಕಬಹುದು
ಹೌದು, ನಿಮ್ಮ ವಾಹನ ಮಿಸ್ ಆಗಿದ್ದೇ ತಡ ಈ ಎಲ್ಲಾ ಮಾಹಿತಿ ಬಳಕೆ ಮಾಡಿಕೊಂಡು ಅದನ್ನ ಆದಷ್ಟು ಬೇಗ ಹುಡುಕಬಹುದು. ನಿಮ್ಮ ವಾಹನಕ್ಕೆ ಹಾಕಿದ ನಂಬರ್ ಪ್ಲೇಟ್ ಅನ್ನ ಅನಧಿಕೃತವಾಗಿ ಬದಲಾವಣೆ ಮಾಡೋಕೆ ಸಾಧ್ಯವೇ ಇಲ್ಲ. ಕಳ್ಳರ ಕೈಗೆ ಸಿಕ್ಕರೆ ಆ ನಂಬರ್‌ನ ಪ್ಲೇಟ್ ತಕ್ಷಣಕ್ಕೆ ತೆಗೆಯಲು ಆಗಲ್ಲ. ಪ್ಲೇಟ್‌ನಲ್ಲಿ ಇರುವ ಮಾಹಿತಿ ತಿದ್ದಲು ಕೂಡ ಸಾಧ್ಯವಿಲ್ಲ. ಈ ಎಲ್ಲಾ ಕಾರಣಕ್ಕೆ ಆದಷ್ಟು ಬೇಗ ನಿಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಮಾಡಿ ಎಂಬ ಸಲಹೆ ನೀಡಲಾಗುತ್ತಿದೆ.
ಅಕಸ್ಮಾತ್ ವಾಹನದ ಬದಲು ಕೇವಲ ನಂಬರ್ ಪ್ಲೇಟ್ ಕಳ್ಳತನ ಮಾಡಿದರೆ, ಹಾಗೇ ಅದನ್ನು ಮರುಬಳಕೆ ಮಾಡೋದಕ್ಕೆ ಕೂಡ ಸಾಧ್ಯವಿಲ್ಲ. ಇಷ್ಟೆಲ್ಲಾ ಪ್ರಯೋಜನ ಇದೀಗ ನಿಮಗೆ ಹೊಸ ನಂಬರ್ ಪ್ಲೇಟ್ ಮೂಲಕ ಸಿಗಲಿದೆ. ಹೀಗಾಗಿಯೇ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆಗೆ ಒತ್ತಾಯ ಕೇಳಿಬರುತ್ತಿದೆ. ಫೆಬ್ರವರಿ 17ರ ಒಳಗೆ ಈ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಡೆಡ್‌ಲೈನ್ ನೀಡಲಾಗಿದೆ.












Click it and Unblock the Notifications