ನಂಬರ್ ಪ್ಲೇಟ್ ಬದಲಾಯಿಸಲು ಇನ್ನೂ 3 ತಿಂಗಳು ಬಾಕಿ: ಈ ತಪ್ಪನ್ನು ನೀವು ಮಾಡಬೇಡಿ!
ವಾಹನ ಮಾಲೀಕರಿಗೆ ತಲೆಬಿಸಿ ಜೋರಾಗಿದೆ, ಯಾಕಂದ್ರೆ ಇನ್ನು ಕೆಲವೇ ದಿನದಲ್ಲಿ ಅವರ ಗಾಡಿ ನಂಬರ್ ಪ್ಲೇಟ್ ಬದಲಾವಣೆ ಮಾಡಬೇಕು. ಇಲ್ಲ ಅಂದ್ರೆ ಅವರಿಗೆ ಸಮಸ್ಯೆ ಪಕ್ಕಾ. ಆದರೆ ಇದೇ ಸಮಯದಲ್ಲಿ ವಾಹನಗಳ ನಂಬರ್ ಪ್ಲೇಟ್ ವಿಚಾರದಲ್ಲಿ ವಂಚಕರು ಕೂಡ ಅಲರ್ಟ್ ಆಗಿದ್ದಾರೆ. ಮುಗ್ಧರನ್ನೇ ಅವರು ಟಾರ್ಗಟ್ ಕೂಡ ಮಾಡುತ್ತಿದ್ದಾರಂತೆ!
ವಾಹನ ಸವಾರರಿಗೆ ಒಂದಲ್ಲ ಒಂದು ಟೆನ್ಷನ್ ಎದುರಾಗುತ್ತಿದ್ದು, ಮೊದಲಿಗೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ ಫೆಬ್ರವರಿ 17 ರ ಡೆಡ್‌ಲೈನ್ ನೀಡಿದ್ದು ಭಾರಿ ಗೊಂದಲ ಸೃಷ್ಟಿ ಮಾಡಿತ್ತು. ಇದೀಗ ಮತ್ತೆ 3 ತಿಂಗಳು ಕಾಲ ಮುಂದಕ್ಕೆ ಹೋಗಿದೆ ಡೆಡ್‌ಲೈನ್ ಇಷ್ಟೆಲ್ಲದರ ನಡುವೆ HSRP ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ ಮೇ 31 ಗಡುವು ನೀಡಿದೆ, ರಾಜ್ಯ ಸರ್ಕಾರ. ಈ ಮೂಲಕ 2024ರ ಒಳಗಾಗಿ ಬಾಕಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಂದರೆ ಅತಿ ಸುರಕ್ಷಿತ ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕಿದೆ. ಇದೇ ಸಮಯದಲ್ಲಿ ವಂಚಕರಿಂದ ಮೋಸ ಕೂಡ ಆರಂಭವಾಗಿದೆಯಂತೆ!

3 ತಿಂಗಳು ಮಾತ್ರ ಟೈಂ!
ವಾಹನ ಮಾಲೀಕರಿಗೆ ಟೆನ್ಷನ್, ಯಾಕಂದ್ರೆ ಇನ್ನು 3 ತಿಂಗಳ ಒಳಗೆ ತಮ್ಮ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕು. ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಕೆ ಮಾಡಿಕೊಳ್ಳದೆ ಇದ್ದರೆ ಸಮಸ್ಯೆ ಗ್ಯಾರಂಟಿ. ಹೀಗಾಗಿ ಹೊಸ ಸಮಸ್ಯೆ ಈಗ ಶುರುವಾಗಿದೆ. ಅದರಲ್ಲೂ ವಾಹನ ಮಾಲೀಕರ ಈ ಸಮಯ ಬಳಸಿಕೊಂಡು ವಂಚಕರು ಹೊಸ ಆಟ ಶುರು ಮಾಡಿದ್ದಾರೆ. ಯಾಮಾರಿದರೆ ವಾಹನಗಳ ಮಾಲೀಕರಿಂದ ಲಕ್ಷ, ಲಕ್ಷ ಹಣ ಗುಳುಂ ಮಾಡ್ತಿದ್ದಾರೆ. ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.
ನಂಬರ್ ಪ್ಲೇಟ್ ಹೆಸರಲ್ಲಿ ವಂಚನೆ?
ಈಗ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ವಿಚಾರವನ್ನೇ, ತಮ್ಮ ಬಂಡವಾಳ ಮಾಡಿಕೊಳ್ತಿರುವ ವಂಚಕರು. ಹಿರಿಯ ನಾಗಕರನ್ನೇ, ಆನ್‌ಲೈನ್‌ನಲ್ಲಿ ವಂಚಿಸುತ್ತಿರುವ ಕೇಸ್ ಹೆಚ್ಚಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅವಳಡಿಕೆ ವಿಚಾರಕ್ಕೆ ಇಂತಹ ವಂಚನೆ ಘಟನೆಗಳು ನಡೆಯುತ್ತಿರುವ ಆರೋಪವಿದೆ. ಹಿರಿಯ ನಾಗರಿಕರಿಗೆ ಮಾತ್ರ ಅಲ್ಲ, ಯುವಕರಿಗೂ ಅನುಭವ ಆಗಿದೆ. ಹೀಗಾಗಿ ಟೆನ್ಷನ್ ಕೂಡ ಹೆಚ್ಚಾಗಿದೆ. ಹಾಗಾದ್ರೆ ವಂಚಕರು ನಿಮ್ಮನ್ನು ಮೋಸ ಮಾಡದೆ ಇರಲು, ನೀವು ಏನು ಮಾಡಬೇಕು ಗೊತ್ತೆ?

ಓಟಿಪಿ ಯಾರಿಗೂ ಕೊಡಲು ಹೋಗಬೇಡಿ!
ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ವಿಚಾರಕ್ಕೆ ಯಾರಾದರೂ ನಿಮಗೆ ಮೊಬೈಲ್ ಕಾಲ್ ಮಾಡಿ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಕೇಳುವುದಾಗಲಿ. ಅಥವಾ ನಿಮ್ಮ ಕ್ರೆಡಿಟ್ ಕಾರ್ಡ್ ಬಗ್ಗೆ ಇಲ್ಲವೇ ಎಟಿಎಂ ಕಾರ್ಡ್ ಬಗ್ಗೆ ಮಾಹಿತಿ ಕೇಳಿದರೆ ಕೊಡಬೇಡಿ. ಹಾಗೇ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಅಂದ್ರೆ ಒನ್ ಟೈಂ ಪಾಸ್‌ವರ್ಡ್ ಕೊಡಲು ಹೋಗಲೇಬೇಡಿ. ಹೀಗೆಲ್ಲಾ ನೀವು ಓಟಿಪಿ ಕೊಟ್ಟರೆ ಕೆಲವೇ ಕ್ಷಣದಲ್ಲಿ ನಿಮ್ಮ ಅಕೌಂಟ್‌ನಿಂದ ದುಡ್ಡು ಖಾಲಿ ಆಗುತ್ತೆ.
ಈ ನಿಯಮ ಪಾಲಿಸಿದ್ರೆ ನಿಮಗೆ ಸಮಸ್ಯೆ ಆಗುವುದಿಲ್ಲ. ಇಲ್ಲವಾದರೆ ನಿಮ್ಮ ಬ್ಯಾಂಕ್ ಅಕೌಂಟ್ ಮೂಲಕ ವಂಚಕರು ಹಣ ಎಗರಿಸೋದು ಪಕ್ಕಾ. ಹೀಗಾಗಿ ಫುಲ್ ಅಲರ್ಟ್ ಆಗಿರಿ, ಇಲ್ಲ ಅಂದ್ರೆ ನಿಮಗೆ ಮೋಸ ಮಾಡ್ತಾರೆ ವಂಚಕರು. ನಿಮಗೆ ಇದರ ಅನುಭವ ಇದ್ದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ. ಪೊಲೀಸರು ಇಂತಹ ವಂಚಕರಿಗೆ ಸರಿಯಾಗಿ ಬುದ್ಧಿ ಕಲಿಸುತ್ತಾರೆ. ಸರ್ಕಾರವೂ ಕೂಡ ಇಂತಹ ವಂಚಕರಿಗೆ ಬುದ್ಧಿ ಕಲಿಸಲು ಮುಂದಾಗಿದೆ, ಹಾಗೇ ವಂಚಕರನ್ನ ಹುಡುಕಿ ಪಾಠ ಕಲಿಸಲು ವ್ಯವಸ್ಥೆ ಮಾಡಿಕೊಂಡಿದೆ.
ನಂಬರ್ ಪ್ಲೇಟ್ ವೆಬ್‌ಸೈಟ್ ಇಲ್ಲಿದೆ
ಸರ್ಕಾರದ ಅಧಿಸೂಚನೆ ಪ್ರಕಾರ ಎಲ್ಲಾ ವಾಹನ ಸವಾರರು, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯಲು ಸಾರಿಗೆ ಇಲಾಖೆ ಅಧಿಕೃತ ವೆಬ್ಸೈಟ್ https://transport.karnataka.gov.in ಅಥವಾ www.siam.in ಮೂಲಕ ಮಾತ್ರ ನೋಂದಣಿಯ ಮಾಡಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.












Click it and Unblock the Notifications