ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲಿಂಡರ್ ಸಬ್ಸಿಡಿ ತಿರಸ್ಕರಿಸಲು ಏನು ಮಾಡಬೇಕು?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏ.4 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಉನ್ನತ ಅಧಿಕಾರಿಗಳು ಮತ್ತು ಶ್ರೀಮಂತ ವರ್ಗದವರು ಅಡುಗೆ ಅನಿಲದ ಸಬ್ಸಿಡಿಯನ್ನು ತಿರಸ್ಕರಿಸುವಂತೆ ಮನವಿ ಮಾಡಿದ್ದಾರೆ.

ಸಂಸದರು, ಐಎಎಸ್‌, ಐಪಿಎಸ್‌, ಐಎಫ್ಎಸ್‌ನಂತಹ ಉನ್ನತ ದರ್ಜೆಯ ಅಧಿಕಾರಿಗಳು, ಶ್ರೀಮಂತ ವರ್ಗದ ಜನರು ಸಿಲಿಂಡರ್‌ ಸಬ್ಸಿಡಿ ಹಿಂತಿರುಗಿಸಿ, ದೇಶ ಕಟ್ಟುವ ಕಾರ್ಯಕ್ಕೆ ಕೈಜೋಡಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. [ಮೋದಿ ಸಮಾವೇಶದಲ್ಲಿ ಹೇಳಿದ್ದೇನು?]

ಅಡುಗೆ ಅನಿಲ ಸಬ್ಸಿಡಿ ನಿರಾಕರಿಸುವ ಜನರಿಂದ ಸಂಗ್ರಹವಾಗುವ ಹಣದಿಂದ ನೂರಾರು ಹಳ್ಳಿಗಳಲ್ಲಿರುವ ಹೊಗೆ ಸಹಿತ ಅಡುಗೆ ಮನೆಯನ್ನು ಹೊಗೆ ರಹಿತವಾಗಿ ಮಾಡುತ್ತೇನೆ ಎಂದು ಮೋದಿ ಭರವಸೆ ನೀಡಿದ್ದಾರೆ. ಸಬ್ಸಿಡಿ ತಿರಸ್ಕಾರ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ. [ಹೊಸ ಗ್ಯಾಸ್ ಸಂಪರ್ಕ ಪಡೆಯುವುದು ಹೇಗೆ?]

LPG

ಆನ್‌ಲೈನ್, ಎಸ್‌ಎಂಎಸ್ ಮತ್ತು ಗ್ಯಾಸ್ ವಿತರಣಾ ಏಜೆನ್ಸಿಗೆ ಭೇಟಿ ಅರ್ಜಿಯನ್ನು ನೀಡುವ ಮೂಲಕ ಜನರು ಸಬ್ಸಿಡಿ ಬೇಡ ಎಂದು ತಮ್ಮ ಹೆಸರು ನೋಂದಾಯಿಸಬಹುದು. [ಸಿಲಿಂಡರ್ ಜೊತೆ ಆಧಾರ್ ನಂಬರ್ ಸೇರಿಸುವುದು ಹೇಗೆ?]

ಸಬ್ಸಿಡಿ ಬೇಡವೆಂದು ಹೇಳುವ ಗ್ರಾಹಕರು ಮೊದಲು http://www.givitup.in/ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಲ್ಲಿ ಭಾರತ್ ಗ್ಯಾಸ್, ಎಚ್‌ಪಿ, ಇಂಡಿಯನ್ ಗ್ಯಾಸ್ ಕಂಪನಿಗಳ ಮಾಹಿತಿ ನೀಡಲಾಗಿದೆ. ವೆಬ್‌ಸೈಟ್‌ಗೆ ಭೇಟಿ ನೀಡಿದ ಗ್ರಾಹಕರು ತಮ್ಮ ಕಂಪನಿಯನ್ನು ಆಯ್ಕೆ ಮಾಡಿಕೊಂಡು ಗ್ಯಾಸ್ ನಂಬರ್‌ ಅನ್ನು ದಾಖಲು ಮಾಡಬೇಕು.

ಎಸ್‌ಎಂಎಸ್ ಮೂಲಕ : ಎಸ್‌ಎಂಎಸ್ ಮಾಡುವ ಮೂಲಕವೂ ಜನರು ಸಬ್ಸಿಡಿಯನ್ನು ತಿರಸ್ಕಾರ ಮಾಡಬಹುದು. ಭಾರತ್ ಗ್ಯಾಸ್ ಸಂಪರ್ಕ ಹೊಂದಿರುವವರು GIVEITUP ಎಂದು 7738299899. ಎಚ್‌ಪಿ ಗ್ಯಾಸ್‌ನವರು GIVEITUP ಎಂದು 9766899899. ಇಂಡಿಯನ್ ಗ್ಯಾಸ್‌ನವರು GIVEITUP ಎಂದು 8130792899 ನಂಬರ್‌ಗೆ ನಿಮ್ಮ ನೋಂದಾಯಿತ ಸಂಖ್ಯೆಯಿಂದ ಎಸ್‌ಎಂಎಸ್ ಕಳಿಸಬಹುದು.

ಎಸ್‌ಎಂಎಸ್ ಆನ್‌ಲೈನ್ ಸೇವೆ ಬೇಡ ಎನ್ನುವುದಾದರೆ ನಿಮ್ಮ ಸಿಲಿಂಡರ್ ವಿತರಕರನ್ನು ಭೇಟಿ ಮಾಡಿ ಅರ್ಜಿ ಪಡೆದು ಭರ್ತಿ ಮಾಡಿ ನೀಡಬಹುದು. ಅರ್ಜಿಯಲ್ಲಿ 17 ಸಂಖ್ಯೆಗಳ ನಿಮ್ಮ ಸಿಲಿಂಡರ್ ನಂಬರ್ ಮತ್ತು ಒಂದು ಸಹಿ ಹಾಕಿದರೆ ಸಾಕಾಗುತ್ತದೆ. ಸಬ್ಸಿಡಿ ತಿರಸ್ಕರಿಸುವ ಬಗ್ಗೆ ಗೊಂದಲಗಳಿದ್ದರೆ 18002333555 ದೂರವಾಣಿ ಸಂಖ್ಯೆಗೆ ಉಚಿತವಾಗಿ ಕರೆ ಮಾಡಬಹುದಾಗಿದೆ.

English summary
Prime Minister Narendra Modi urged the rich to give up LPG subsidy. Giving up an LPG subsidy is extremely easy here is steps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X