'ಕರ್ನಾಟಕ ಮೊಬೈಲ್ ಒನ್' ಸೇವೆ ಪಡೆಯುವುದು ಹೇಗೆ?

ಬೆಂಗಳೂರು, ಡಿ. 8 : ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು 4 ಸಾವಿರ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಪಡೆಯಬಹುದಾದ 'ಮೊಬೈಲ್‌ ಒನ್‌' ಸೇವೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಈ ಸೇವೆಯನ್ನು ರಾಜ್ಯಕ್ಕೆ ಸಮರ್ಪಿಲಿದ್ದಾರೆ.

ಕರ್ನಾಟಕ ಸರ್ಕಾರ ಆರಂಭಿಸುತ್ತಿರುವ ಸೇವೆ ಇದಾಗಿದ್ದು, ಮೊಬೈಲ್‌ ಇ-ಆಡಳಿತದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ದೊರೆಯಲಿದೆ.

Mobile One

ಪೊಲೀಸ್‌, ಸಾರಿಗೆ, ಗ್ರಾಮೀಣಾಭಿವೃದ್ಧಿ, ಕೆಎಸ್‌ಆರ್‌ಟಿಸಿ ಸೇರಿದಂತೆ ವಿವಿಧ ಇಲಾಖೆಗಳ 632 ಸೇವೆಗಳು ಹಾಗೂ ಸುಮಾರು 3,500 ಗ್ರಾಹಕರ ವ್ಯಾಪಾರ-ವಹಿವಾಟಿಗೆ ಸಂಬಂಧಿಸಿದ ಖಾಸಗಿ ಸೇವೆಗಳು ಈ ಅಪ್ಲಿಕೇಷನ್‌ನಲ್ಲಿ ದೊರೆಯಲಿವೆ. [ಮೊಬೈಲ್ ಆಡಳಿತಕ್ಕೆ ಕಾಲಿಡಲಿರುವ ಸಿದ್ದರಾಮಯ್ಯ ಸರ್ಕಾರ]

ಡೌಲ್‌ಲೋಡ್ ಮಾಡುವುದು ಹೇಗೆ : ಮೊಬೈಲ್‌ ಒನ್‌ ಸೇವೆಯನ್ನು ಪಡೆಯಲು ಸಾಮಾನ್ಯ ಮೊಬೈಲ್‌ ಆಗಿದ್ದರೆ 161 ಸಂಖ್ಯೆಗೆ ಕರೆ ಮಾಡಿದರೆ ಮಾಹಿತಿ ಲಭ್ಯವಾಗುತ್ತದೆ. ನೀವು ಸ್ಮಾರ್ಟ್‌ಫೋನ್‌ ಹೊಂದಿದ್ದರೆ 1800425425425 ಸಂಖ್ಯೆಗೆ ಮಿಸ್ ಕಾಲ್ ಕೊಡಿ, ನಿಗಗೆ ಸಂದೇಶ ರೂಪದಲ್ಲಿ ಲಿಂಕ್ ಬರುತ್ತದೆ ಅದ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

Siddaramaiah

ಗೂಗಲ್‌ ಪ್ಲೇಸ್ಟೋರ್‌ಗೆ ಹೋಗಿ ಕರ್ನಾಟಕ ಮೊಬೈಲ್‌ ಒನ್‌ ಎಂಬ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಐಫೋನ್‌ ಹೊಂದಿದ್ದವರು 'ಐಒಎಸ್‌' ಮೂಲಕ ಈ ಸೇವೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. [ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+