Dengue: ಡೆಂಗ್ಯೂ ಹರಡುವ ಸೊಳ್ಳೆಗೆ ಗಪ್ಫಿ ಮೀನು ರಾಮಬಾಣ: ಏನಿದರ ವಿಶೇಷ?
ಮೈಸೂರು, ಜುಲೈ 02: ಈ ಬಾರಿ ಡೆಂಗ್ಯೂ ಜ್ವರ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣಗಳು ಅನೇಕ ಇವೆಯಾದರೂ ಡೆಂಗ್ಯೂ ಹರಡುವಲ್ಲಿ ಸೊಳ್ಳೆಗಳ ಪಾತ್ರ ಹೆಚ್ಚಿರುವುದನ್ನು ತಳ್ಳಿಹಾಕಲಾಗದು. ಮಳೆಗಾಲ ಆರಂಭವಾದಂತೆಲ್ಲ ಸ್ವಚ್ಛತೆಯಿಲ್ಲದ ಪ್ರದೇಶಗಳನ್ನು ತಮ್ಮ ಆವಾಸ ಸ್ಥಾನಗಳನ್ನಾಗಿ ಮಾಡಿಕೊಳ್ಳುವ ಈಡಿಸ್ ಈಜಿಪ್ಟೆ ಸೊಳ್ಳೆಗಳು ಅಲ್ಲಿ ತಮ್ಮ ಸಂತಾನೋತ್ಪತ್ತಿ ಮಾಡುವ ಮೂಲಕ ಕಾಯಿಲೆ ಹರಡಲು ತಯಾರಿ ಮಾಡಿಕೊಳ್ಳುತ್ತವೆ.
ಈ ಸೊಳ್ಳೆಗಳನ್ನು ನಾಶ ಮಾಡದ ಹೊರತು ಡೆಂಗ್ಯೂವನ್ನು ನಿಯಂತ್ರಣಗೊಳಿಸುವುದು ಸಾಧ್ಯವಾಗದ ಮಾತಾಗಿದೆ. ನಾವೆಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡದೆ ಇರುವುದು ಮತ್ತು ಕೊಳಚೆ ನೀರು ಸಾರಾಗವಾಗಿ ಹರಿದು ಹೋಗದಂತೆ ನೋಡಿಕೊಳ್ಳದಿರುವುದು ಸೊಳ್ಳೆಗಳ ಉತ್ಪಾದನೆಗೆ ಅವಕಾಶ ಮಾಡಿಕೊಡುತ್ತಿದ್ದು, ಇಲ್ಲಿ ಸೃಷ್ಟಿಯಾಗುವ ಈಡಿಸ್ ಈಜಿಪ್ಟೆ ಸೊಳ್ಳೆಗಳು ರೋಗ ಹರಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ.

ಕೊರೋನಾ ನಂತರ ಜ್ವರ ಬಂದರೆ ಜನ ಹೆದರುವಂತಾಗಿದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಡೆಂಗ್ಯೂ ಹೆಚ್ಚಾಗಿ ಕಾಡಲಾರಂಭಿಸಿದೆ. ಅದರಲ್ಲೂ ಈ ಬಾರಿ ಅದರ ಉಪಟಳ ತುಸು ಹೆಚ್ಚೆಂದರೂ ತಪ್ಪಾಗಲಾರದು. ಮಳೆಗಾಲದಲ್ಲಿ ಜ್ವರ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಹಿಂದಿನ ಕಾಲದಿಂದಲೂ ಜ್ವರ ಕಾಣಿಸಿಕೊಳ್ಳುತ್ತಿದೆ. ಮೊದಲೆಲ್ಲ ಜ್ವರ ಬಂದರೆ ಮಾತ್ರೆನೋ, ಕಸಾಯನೋ ಕುಡಿದರೆ ಜ್ವರ ಕಡಿಮೆಯಾಗಿ ಬಿಡುತ್ತಿತ್ತು. ಈಗ ಹಾಗಿಲ್ಲ ಯಾವ ಜ್ವರವನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ.
ಡೆಂಗ್ಯೂ ತಡೆಗೆ ಏನು ಮಾಡಬೇಕು?
ಜ್ವರ ಕಾಣಿಸಿಕೊಂಡರೆ ಮೊದಲಿಗೆ ರಕ್ತದ ಪರೀಕ್ಷೆ ಮಾಡಿಸಿ ಜ್ವರಕ್ಕೆ ಕಾರಣಗಳನ್ನು ಹುಡುಕಿಕೊಂಡು ನಮಗೆ ಬಂದಿರುವುದು ವೈರಲ್ ಜ್ವರನಾ? ಡೆಂಗ್ಯೂ? ಚಿಕೂನ್ ಗುನ್ಯಾನಾ? ಎಂಬುದನ್ನು ಅರಿತುಕೊಂಡು ಅದಕ್ಕೆ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿದೆ. ಬದಲಿಗೆ ಸ್ವಯಂ ಚಿಕಿತ್ಸೆಯಾಗಿ ಮಾತ್ರೆಗಳನ್ನು ಸೇವಿಸುವುದು ಇವತ್ತಿನ ಮಟ್ಟಿಗೆ ಅಪಾಯಕಾರಿಯಾಗಿದೆ.
ಇನ್ನು ಜ್ವರ ಬಂದ ಬಳಿಕ ಪರದಾಡುವುದಕ್ಕಿಂತ ಬಾರದಂತೆ ಮುಂಜಾಗ್ರತೆ ವಹಿಸುವುದು ಒಳ್ಳೆಯದು ಡೆಂಗ್ಯೂ ಮಹಾಮಾರಿ ನಮ್ಮನ್ನು ಬಾಧಿಸುವ ಮುನ್ನ ಅದನ್ನು ನಿಯಂತ್ರಿಸಲು ಶುಚಿತ್ವಕ್ಕೆ ಒತ್ತು ನೀಡುವುದರ ಜತೆಗೆ ಇನ್ನಿತರ ಕೆಲವೊಂದು ಕ್ರಮಗಳನ್ನು ಅಳವಡಿಸಿಕೊಳ್ಳುವುದು ಕೂಡ ಬಹುಮುಖ್ಯವಾಗಿದೆ. ಮನೆಯಲ್ಲಿನ ಫ್ರಿಡ್ಜ್ ನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದರಿಂದ ಆರಂಭವಾಗಿ ಸುತ್ತಮುತ್ತ ಪ್ರದೇಶಗಳಲ್ಲಿ ತ್ಯಾಜ್ಯ, ಕೊಳಚೆ ನೀರು ನಿಲ್ಲದೆ ಸರಾಗವಾಗಿ ಹರಿಯುವಂತೆ ಮಾಡಬೇಕು.

ಎಲ್ಲೆಡೆ ಗಪ್ಪಿ ಮೀನು ಬೆಳೆಸ ಬೇಕಾಗಿದೆ
ಇದರ ಜತೆಗೆ ಮನೆಯಲ್ಲಿನ ತೊಟ್ಟಿಗಳಲ್ಲಿ ಗಪ್ಪಿ ಮೀನು ಸಾಕುವುದರಿಂದಲೂ ಸೊಳ್ಳೆಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಈ ಮೀನುಗಳು ನೀರಿನ ತೊಟ್ಟಿಯಲ್ಲಿ ಉತ್ಪತ್ತಿಯಾಗುವ ಪಾಚಿಯನ್ನೇ ತಿಂದು. 3 ವರ್ಷಗಳ ಕಾಲ ಜೀವಿಸುತ್ತವೆ. ಅಲ್ಲದೆ ಸೊಳ್ಳೆಗಳ ಮೊಟ್ಟೆಯನ್ನು ತಿಂದು ನಾಶಪಡಿಸುತ್ತವೆ. ಇದರಿಂದ ಸೊಳ್ಳೆಗಳ ಸಂತಾನೋತ್ಪತ್ತಿಗೆ ತಡೆಯೊಡ್ಡುತ್ತವೆ. ಹೀಗಾಗಿ ಡೆಂಗ್ಯೂ ಬಾರದಂತೆ ನೋಡಿಕೊಳ್ಳಲು ಎಲ್ಲೆಡೆ ಗಪ್ಪಿ ಮೀನು ಬಿಡುವ ಕಾರ್ಯ ಸಮಾರೋಪಾದಿಯಲ್ಲಿ ನಡೆಯಬೇಕಿದೆ.
ಈ ಗಪ್ಫಿ ಮೀನು ಬಗ್ಗೆ ಹೇಳಬೇಕೆಂದರೆ ಇದು ಸುಮಾರು ಮೂರು ಇಂಚು ಉದ್ದ ಬೆಳೆಯುವ ಸಣ್ಣ ಮೀನು ಇದಾಗಿದೆ. ಇದನ್ನು ಸಾಕಲು ಶ್ರಮಪಡಬೇಕಾಗಿಲ್ಲ. ಹೆಚ್ಚಿನ ಸ್ಥಳ ಅಥವಾ ನಿರ್ವಹಣೆ ಅಗತ್ಯವಿಲ್ಲ ಮತ್ತು ಇತರ ಮೀನುಗಳೊಂದಿಗೆ ಸ್ನೇಹಪರವಾಗಿರುತ್ತದೆ. ಇದರ ಮೂಲ ಹೆಸರು 'ಮಿಲಿಯನ್ ಫಿಶ್', ಆದರೆ ಅಂತಿಮವಾಗಿ, 'ಗಪ್ಫಿ ಎಂಬ ಪದವು ಅದರ ಆಕರ್ಷಕ ಧ್ವನಿಯಿಂದಾಗಿ ಅಂಟಿಕೊಂಡಿತು ಎನ್ನಲಾಗಿದೆ.
ಲಂಡನ್ ನಲ್ಲಿ ವೃದ್ಧಿಯಾದ ಗಪ್ಫಿ ಮೀನು
ಲಂಡನ್ನಲ್ಲಿ 1849 ರ ಸುಮಾರಿಗೆ ಮೊದಲ ಜೋಡಿಯನ್ನು ಬೆಳೆಸಿದ ನಾಥನ್ ಗುಪ್ಪಿ ಎಂಬ ಇಂಗ್ಲಿಷ್ನಿಂದ ಈ ಮೀನು ತನ್ನ ಹೆಸರನ್ನು ಪಡೆದುಕೊಂಡಿತು. ಅವನು ಅವುಗಳನ್ನು ಹವ್ಯಾಸವಾಗಿ ಇಟ್ಟುಕೊಂಡನು ಮತ್ತು ಅವನ ಮರಣದ ನಂತರ, ಇಂಗ್ಲೆಂಡ್ನಾದ್ಯಂತ ಜನರು ಗಪ್ಪಿಗಳನ್ನು ಸಾಕುವುದನ್ನು ಮುಂದುವರೆಸಿದ್ದರು. ಇದೇ ಮೀನು ಇವತ್ತು ಡೆಂಗ್ಯೂ ಹರಡುವ ಈಡಿಸ್ ಈಜಿಪ್ಟೆ ಸೊಳ್ಳೆಗಳಿಗೆ ಸಿಂಹಸ್ವಪ್ನವಾಗಿವೆ. ಈ ಮೀನನ್ನು ಸಾಕುವ ಮೂಲಕ ಡೆಂಗ್ಯೂ ತಡೆಗೆ ಪ್ರಯತ್ನ ಪಡುವುದು ಬಹು ಮುಖ್ಯವಾಗಿದೆ.
-
Summer Heat Alert: ಮಕ್ಕಳ ಆರೋಗ್ಯ ಕಾಪಾಡಲು ಪೋಷಕರಿಗೆ 7 ಮುಖ್ಯ ಸಲಹೆಗಳು -
ಬೇಸಿಗೆಯಲ್ಲಿ ಸೌತೆಕಾಯಿ ತಿನ್ನಲು ಟಾಪ್ 5 ಕಾರಣಗಳು: ಆರೋಗ್ಯಕ್ಕೆ ಅದ್ಭುತ ಲಾಭಗಳು -
ಮೊಡವೆ ಕಲೆಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಸಿಂಪಲ್ ಟ್ರಿಕ್ಸ್ : ಬೇಸಿಗೆಯಲ್ಲಿ ಅನುಸರಿಸಿ ಈ 9 ಟಿಪ್ಸ್ -
ಮನೆ ಕಟ್ಟುವಾಗ ವಾಸ್ತು ಪಾಲಿಸದಿದ್ದರೆ ಏನಾಗುತ್ತದೆ? ಇಲ್ಲಿವೆ 5 ಪ್ರಮುಖ ನಿಯಮಗಳು -
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು












Click it and Unblock the Notifications