Bengaluru-Mysuru Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ದಂಡದಿಂದ ಪಾರಾಗಲು ಹೀಗೆ ಮಾಡಿ

ಸುಗಮ ಹಾಗೂ ಆರಾಮದಾಯಕ ಪ್ರಯಾಣಕ್ಕಾಗಿ ಬೆಂಗಳೂರು-ಮೈಸೂರು ನಡುವೆ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿವೆ. ಈ ಹೈವೇಲಿ ಅತಿವೇಗ ಚಾಲನೆ ಜೊತೆಗೆ ಅಪಘಾತಗಳು ಕೂಡ ಹೆಚ್ಚಾಗಿ ಸಂಭವಿಸಿತ್ತು. ಈ ಹಿನ್ನೆಲೆ ಪ್ರಯಾಣಿಕರ ಹಿತಕ್ಕಾಗಿ ಇಲ್ಲಿ ಹಲವು ಟಫ್‌ ರೂಲ್ಸ್‌ ಜಾರಿ ಮಾಡಲಾಗಿದೆ. ಅತಿ ವೇಗದ ವಾಹನಗಳ ಮಾಲೀಕರಿಗೆ ಕ್ಷಣಮಾತ್ರದಲ್ಲೇ ದಂಡದ ಮೆಸೇಜ್‌ ಹೋಗುವ ವ್ಯವಸ್ಥೆ ಕೂಡ ಮಾಡಲಾಗಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಆಧುನಿಕ ತಂತ್ರಜ್ಞಾನ ಒಳಗೊಂಡ ಕ್ಯಾಮರಾಗಳನ್ನು ಈಗಾಗಲೇ ಅಳವಡಿಸಲಾಗಿದೆ. ಈ ರಸ್ತೆಗಿಳಿಯುವ ಪ್ರತಿ ವಾಹನದ ಮೇಲೂ ನಿಗಾ ಇಡಲಾಗಿದೆ. ಅಲ್ಲದೆ ರಸ್ತೆ ಫ್ರೀಯಾಗಿದೆ ಎಂದು ಜೋಶ್‌ನಲ್ಲಿ ಸ್ವೀಡ್‌ ಚಾಲನೆ ಮಾಡಿದವ್ರಿಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ದಂಡ ಕೂಡ ವಿಧಿಸಲಾಗುತ್ತಿದೆ.

How To Avoid Fines On Bengaluru-Mysuru Expressway Understanding Toll Cameras

ಈ ರಸ್ತೆಯ ವೇಗಮಿತಿ ಗಂಟೆಗೆ 100 ಕಿ.ಮೀ ಎಂದು ನಿಗದಿಪಡಿಸಲಾಗಿದೆ. ಇನ್ನು ಈ ರಸ್ತೆಯಲ್ಲಿ ಓಡಾಡುವವರಿಗೆ ತಮ್ಮ ಅತಿ ವೇಗ ಚಾಲನೆಗೆ ದಂಡ ಯಾವ ರೀತಿ ಬೀಳುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲ. ಮೇಲ್ನೋಟಕ್ಕೆ ಅಲ್ಲಿರುವ ಯಾವುದೋ ಒಂದು ಕ್ಯಾಮೆರಾದಲ್ಲಿ ನಾವು ಅತಿ ವೇಗವಾಗಿ ಚಾಲನೆ ಮಾಡುವುದು ಸೆರೆಯಾಗಿ ದಂಡ ಬೀಳುತ್ತದೆ ಎಂದು ಭಾವಿಸಿದ್ದಾರೆ. ಆದರೆ ಅಸಲಿ ವಿಚಾರ ಬೇರೆಯೇ ಇದೆ ಎಂಬುದು ಗೊತ್ತಿಲ್ಲ.

ಈ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸುಮಾರು 20 ಕಿ.ಮೀ ಅಂತರದ ನಡುವೆ ಎರಡು ಕ್ಯಾಮೆರಾಗಳನ್ನು ಅಳವಡಿಸಿದ್ದು, ಅವು ಕೇವಲ ನೀವು ಆ ಕ್ಯಾಮರಾ ಸಮೀಪಕ್ಕೆ ಬಂದಾಗ ಇರುವ ಸ್ಪೀಡ್‌ ಲಿಮಿಟ್‌ ಅನ್ನು ಮಾತ್ರವೇ ಪರಿಗಣಿಸುವುದಿಲ್ಲ. ಮೊದಲ ಕ್ಯಾಮೆರಾ ಹಾಗೂ ಎರಡನೇ ಕ್ಯಾಮೆರಾ ನಡುವೆ ಎಷ್ಟು ಅಂತರವಿದೆ, ನೀವು ಗಂಟೆಗೆ 100 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸಿದರೆ ಆ 20 ಕಿ.ಮೀ ಕ್ರಮಿಸಲು ಎಷ್ಟು ಸಮಯ ಬೇಕಾಗಬಹುದು ಎಂಬುದು ಸಹ ಈ ಕ್ಯಾಮರಾಗಳು ಗಮನಿಸುತ್ತವೆ.

How To Avoid Fines On Bengaluru-Mysuru Expressway Understanding Toll Cameras

ಒಂದು ವೇಳೆ ನೀವು ಕ್ಯಾಮೆರಾ ಇದ್ದ ಕಡೆ ನಿಧಾನವಾಗಿ ಚಲಿಸಿ, ಮುಂದೆ ಅತಿ ವೇಗವಾಗಿ ವಾಹನ ಚಲಾಯಿಸಿದರೂ ನಿಮ್ಮ ವಾಹನದ ಮೇಲೆ ದಂಡ ಬೀಳುವುದು ಗ್ಯಾರಂಟಿ. ಉದಾಹರಣೆಗೆ ನೀವು ಗಂಟೆಗೆ 100 ಕಿ.ಮೀ ವೇಗದಲ್ಲಿ 20 ಕಿ.ಮೀ ಅಂತರದ ಕ್ರಮಿಸಲು 12 ನಿಮಿಷಗಳು ಬೇಕಾಗುತ್ತದೆ. ಮೊದಲ ಕ್ಯಾಮರಾ ಹಾಗೂ ಎರಡನೇ ಕ್ಯಾಮರಾ ನಡುವೆ ಇಷ್ಟೇ ಸಮಯದಲ್ಲಿ ನೀವು ಪಾಸ್‌ ಆದರೆ ನೀವು ಬಚಾವ್‌ ಆದಂತೆ. ಅಲ್ಲದೆ, ಈ ಸಮಯಕ್ಕಿಂತ ಒಂದೆರಡು ನಿಮಿಷ ಕಡಿಮೆಯಾದರೂ ನಿಮಗೆ ದಂಡ ಬೀಳುತ್ತದೆ. ಈ ವಿಧಾನದಲ್ಲಿಯೂ ಇಲ್ಲಿ ದಂಡ ವಿಧಿಸುವ ವ್ಯವಸ್ಥೆಯಿದೆ.

ವಸೂಲಾದ ದಂಡ ಎಷ್ಟು?: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಆರಂಭವಾದ ದಿನದಿಂದ ಇಲ್ಲಿವರೆಗೂ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಗೆ ಐಟಿಎಂಎಸ್ ಮೂಲಕ 85,80,67,000 ರೂಪಾಯಿ ದಂಡ ವಿಧಿಸಲಾಗಿದ್ದು, ಅದರಲ್ಲಿ ಸಂಗ್ರಹವಾದ ಮೊತ್ತ ಕೇವಲ 4,90,78,500 ರೂಪಾಯಿ ಎಂದು ವರದಿಯಾಗಿದೆ. ಇನ್ನು 2023-24ರ ಈ ಸಾಲಿನಲ್ಲೇ ಸಂಚಾರ ನಿಯಮ ಉಲ್ಲಂಘಿಸಿದ 4,55,458 ಕೇಸ್‌ಗಳು ಇಲ್ಲಿ ದಾಖಲಾಗಿವೆ. ಸೀಟ್‌ಬೆಲ್ಟ್ ಧರಿಸದ 2,12,461, ಓವರ್ ಸ್ಪೀಡ್‌ಗೆ 1,96,237, ಲೈನ್ ಶಿಸ್ತು ಉಲ್ಲಂಘನೆಗೆ 36,016 ಹಾಗೂ ಮೊಬೈಲ್ ಹಿಡಿದು ಚಾಲನೆ ಮಾಡಿದ್ದಕ್ಕೆ 8,777 ಕೇಸ್‌ಗಳು ದಾಖಲಾಗಿವೆ. ಈ ನಿಯಮ ಉಲ್ಲಂಘನೆಗೆ ಬರೋಬ್ಬರಿ 34,28,65,000 ದಂಡ ವಿಧಿಸಿದ್ದು, 1,98,36,500 ರೂಪಾಯಿ ಮಾತ್ರ ಪೊಲೀಸರು ಸಂಗ್ರಹಿಸಿದ್ದಾರೆ. ಇನ್ನೂ 32, 31,28,500 ರೂಪಾಯಿ ದಂಡ ಬಾಕಿ ವಸೂಲಿ ಆಗಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+