ಇದು 40% ಸರ್ಕಾರ ಎಂಬುದಕ್ಕೆ ಇನ್ನೆಷ್ಟು ದಾಖಲೆ ಬೇಕು?: ಪ್ರಿಯಾಂಕ್ ಖರ್ಗೆ

ಸಂಸದ ಪ್ರತಾಪ್ ಸಿಂಹ ಅವರು ಉನ್ನತ ಶಿಕ್ಷಣ ಸಚಿವರ ಸಮ್ಮುಖದಲ್ಲಿ ಉಪಕುಲಪತಿಗಳ ನೇಮಕಕ್ಕೆ 5 ಕೋಟಿ ನೀಡಬೇಕು ಎಂದು ಹೇಳುತ್ತಾರೆ. ಇನ್ನು ಡೀಲ್ ಅವರಿಗೆ ಎಷ್ಟು ಕೊಡಬೇಕು? ಎಂದು ಪ್ರಿಯಾಂಖ್ ಖರ್ಗೆ ಪ್ರಶ್ನಿಸಿದ್ದಾರೆ.

ಬೆಂಗಳೂರು,ಫೆಬ್ರವರಿ21: ಇದು 40% ಸರ್ಕಾರ ಎಂಬುದಕ್ಕೆ ಇನ್ನೆಷ್ಟು ದಾಖಲೆ ಬೇಕು? ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಸವರಾಜ ಬೊಮ್ಮಾಯಿ ಅವರನ್ನ ಪ್ರಶ್ನಿಸಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಯಾದಗಿರಿ ಸೆಡಿಕಲ್ ಕಾಲೇಜು ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಈ ಕಾಲೇಜಿಗೆ ಜಮೀನು ಮಂಜೂರು ಮಾಡಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡಿಸಿದ್ದು ನಾನು ಜಿಲ್ಲಾ ಮಂತ್ರಿಯಾಗಿದ್ದಾಗ. ಈ ಸರ್ಕಾರದ ಯೋಗ್ಯತೆಗೆ ನಾವು ಕೊಟ್ಟ ಕಾಲೇಜಿಗೆ ಸರಿಯಾಗಿ ಸಿಬ್ಬಂದಿ ನೇಮಕ ಮಾಡಲು ಆಗುತ್ತಿಲ್ಲ. ಇವರಿಗೆ ಭ್ರಷ್ಟಾಚಾರದ ಕ್ಯಾನ್ಸರ್ ತಟ್ಟಿದೆ. ರಕ್ತಬೀಜಾಸುರರಂತೆ ಭ್ರಷ್ಟಾಚಾರ ಹೆಚ್ಚುತ್ತಿದೆ ಎಂದು ವಾಗ್ದಾಳಿ ನಡೆಸಿದರು.

How Much More Documentation Is Needed That It Is 40 Government? Priyank Kharge Asked

ಅರ್ಹತೆಯಿಂದ ಆಯ್ಕೆಯಾಗಿರುವವರಿಗೆ ಒಂದೇ ಬಾರಿಗೆ ಆದೇಶ ನೀಡಬೇಕು. ಪರ್ಯಾಯವಾಗಿ ನೇಮಕವಾಗಿ 50 ಕೋಟಿಯಷ್ಟು ಅಕ್ರಮ ನಡೆದಿದ್ದು, ಈ ಬಗ್ಗೆ ತನಿಖೆ ಆಗಬೇಕು. ನಿನ್ನೆ ಈ ಸರ್ಕಾರದವರು ಲೋಕಾಯುಕ್ತ, ಎಸಿಬಿ ಬಗ್ಗೆ ಚರ್ಚೆ ಮಾಡುತ್ತಿದ್ದರು. ಈ ಸರ್ಕಾರ ಜೆಇಇ, ಪಿಎಸ್ಐ, ಕೆಪಿಟಿಸಿಎಲ್ ಸೇರಿದಂತೆ ಯಾವುದಾದರೂ ಒಂದು ಇಲಾಖೆಯ ನೇಮಕಾತಿಯನ್ನು ನ್ಯಾಯಯುತವಾಗಿ ಮಾಡಿದ್ದಾರಾ? ಅವರು ಈ ಪ್ರಕರಣಗಳಲ್ಲಿ ಸರಿಯಾದ ತನಿಖೆ ಮಾಡಿಸಿ ತಮ್ಮ ಪ್ರಾಮಾಣಿಕತೆಯನ್ನು ಸಾಬೀತುಮಾಡಲಿ.

ಈ ಸರ್ಕಾರ ಒಂದು ಕ್ಯೂಆರ್ ಕೋಡ್, ಕಿವಿ ಮೇಲೆ ಹೂ ಇಟ್ಟುಕೊಂಡಿದ್ದಕ್ಕೆ ಇವರು ಕಂಡಾಮಂಡಲವಾಗಿದ್ದಾರೆ. ನಿಮಗೆ ಗೆಲ್ಲುವ ಸಾಮರ್ಥ್ಯವಿಲ್ಲ ಎಂದು ಪ್ರಧಾನಿ ಮೋದಿ, ಅಣಿತ್ ಶಾ, ನಡ್ಡಾ ಅವರನ್ನು ಕರೆಸುತ್ತಿದ್ದೀರ. ನಿಮ್ಮ ಹಿಂದೆ ಮೋದಿ ಇದ್ದರೂ ಯಾಕೆ ಹೆದರುತ್ತಿದ್ದೀರಿ? ನೀವು ಈ ಅಖ್ರಮದ ಮೂಲಕ ವಿದ್ಯಾರ್ಥಿಗಳ ಕಿವಿ ಮೇಲೆ ಹೂವ ಇಡುತ್ತಿಲ್ಲವೇ? ಕಿವಿ ಮೇಲೆ ಹೂವ ಇಡುವುದನ್ನು ನಿಲ್ಲಿಸಿ ಅರ್ಹರಿಗೆ ನೇಮಕಾತಿ ಆದೇಶ ಪತ್ರ ನೀಡಿ. ಒಂದು ವಾರದಲ್ಲಿ ನೀಡುತ್ತೇವೆ ಎಂದು ಹೇಳಿ 3 ದಿನವಾಗಿದೆ. ಒಂದು ವರ್ಷದಲ್ಲಿ ಮಾಡದವರು 1 ವಾರದಲ್ಲಿ ಏನು ಮಾಡುತ್ತಾರೋ ಗೊತ್ತಿಲ್ಲ.

How Much More Documentation Is Needed That It Is 40 Government? Priyank Kharge Asked

ಮಾಧ್ಯಮಗಳಲ್ಲಿ ಪ್ರತಿ ಹುದ್ದೆಗೆ ರೇಟ್ ಕಾರ್ಡ್ ಪ್ರಕಟವಾಗಿದೆ. ಸಹಾಯಕ ಪ್ರಾಧ್ಯಪಕ ಹುದ್ದೆಗೆ 15-20 ಲಕ್ಷ, ಸಹ ಪ್ರಾಧ್ಯಾಪಕರಿಗೆ 25-30 ಲಕ್ಷ, ಪ್ರಾಧ್ಯಾಪಕರಿಗೆ 35-40 ಲಕ್ಷ. ಇಷ್ಟು ಹಣ ಎಲ್ಲಿಂದ ತರುತ್ತಾರೆ? ಈ ರೀತಿ ಹಣ ಕೊಟ್ಟವರು ಏನು ಪಾಠ ಮಾಡುತ್ತಾರೆ. ಇದರಿಂದಲೇ ಅವರು ಮೆಡಿಕಲ್ ಉಪಕರಣ ಖರೀದಿಯಲ್ಲಿ ಹಗರಣಗಳು ನಡೆಯುತ್ತವೆ. ಅವರು ಹಾಕಿರುವ ಬಂಡವಾಳ ತೆಗೆಯಬೇಕಲ್ಲ. ಸಂಸದ ಪ್ರತಾಪ್ ಸಿಂಹ ಅವರು ಉನ್ನತ ಶಿಕ್ಷಣ ಸಚಿವರ ಸಮ್ಮುಖದಲ್ಲಿ ಉಪಕುಲಪತಿಗಳ ನೇಮಕಕ್ಕೆ 5 ಕೋಟಿ ನೀಡಬೇಕು ಎಂದು ಹೇಳುತ್ತಾರೆ. ಇನ್ನು ಡೀಲ್ ಅವರಿಗೆ ಎಷ್ಟು ಕೊಡಬೇಕು? ಎಂದು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+