HMPV ಸೋಂಕನ್ನು ತಡೆಯಲು ಪಾಲಿಸಬೇಕಾದ ಕ್ರಮಗಳು

HMPV Virus: ಚೀನಾದಲ್ಲಿ ಭೀತಿ ಹುಟ್ಟಿಸಿದ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಇದೀಗ ಕರ್ನಾಟಕಕ್ಕೂ ಲಗ್ಗೆ ಇಟ್ಟಿದೆ. ಈ ಮೂಲಕ ಇಲ್ಲಿನ ಜನರಿಗೆ ಸೃಷ್ಟಿಸಿದೆ. ಮತ್ತೊಂದೆಡೆ ಇದಕ್ಕೆ ಇನ್ನೂ ಯಾವುದೇ ಲಸಿಕೆ ಕಂಡುಹಿಡಿದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗಾದರೆ ಇದನ್ನು ಹತ್ತಿರಕ್ಕೆ ಸುಳಿಯಂದತೆ ತಡೆಗಟ್ಟುವ ಕ್ರಮಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

ಕೆಲವರು ಹೇ.. ಇದು ಏನು ವೈರಸ್‌ ಎಂದು ಅಸಡ್ಡೆ ತೋರುತ್ತಾರೆ. ಆದರೆ, ಇಂತಹ ಸಣ್ಣ ನಿರ್ಲಕ್ಷವೇ ದೊಡ್ಡ ಸಮಸ್ಯೆಗೆ ಹೆಡೆಮಾಡಿಕೊಡುವ ಸಾಧ್ಯೆಗಳಿರುತ್ತವೆ. ಇಂತಹ ಘಟನೆಗಳು ಈಗಾಗಲೇ ಕೊರೊನಾ ಸಮಯದಲ್ಲಿ ನಡೆದಿವೆ. ಇನ್ನು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ತಜ್ಞರ ಪ್ರಕಾರ ಇಲ್ಲಿ ನೀಡಿರುವ ಕ್ರಮಗಳನ್ನು ಪಾಲಿಸುವುದು ಉತ್ತಮ. ಯಾಕೆಂದರೆ ಆರೋಗ್ಯ ಭಾಗ್ಯ ಎನ್ನುವ ಮಾತೇ ಇದೆ. ಇದು ಚೆನ್ನಾಗಿದ್ದಾರೆ ಏನು ಬೇಕಾದರೂ ಸಾಧಿಸಬಹದು.

How can HMPV infection be prevented Know details

ವೈರಸ್‌ ತಡೆಗಟ್ಟುವ ಕ್ರಮಗಳಿವು

* ಗುಣಮಟ್ಟದ ಮಾಸ್ಟ್‌ಗಳನ್ನು ಧರಿಸಿ
* ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಕೈಗಳನ್ನು ತೊಳೆಯುವು
* ಅನಾರೋಗ್ಯದ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ.
* ಆಗಾಗ್ಗೆ ಕೈಯಿಂದ ಸ್ಪರ್ಶಿಸಿದ ದೇಹದ ಭಾಗಗಳನ್ನು ಸ್ವಚ್ಚಗೊಳಿಸುವುದು.
* ಅನಾರೋಗ್ಯಕ್ಕೆ ತುತ್ತಾದವರ ಮನೆಗೆ ಪದೇ ಪದೇ ಹೋಗದೇ ನಿಮ್ಮ ಮನೆಯಲ್ಲೇ ಇರಿ.
* ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಟಿಶ್ಯೂ ಅಥವಾ ಕೈಯಿಂದ ಮುಚ್ಚಿಕೊಳ್ಳಿ.

ರಾಜ್ಯದಲ್ಲಿ ಎರಡು ಎಚ್‌ಎಂಪಿವಿ ವೈರಸ್ ಪ್ರಕರಣ ಪತ್ತೆ ಹಿನ್ನೆಲೆ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ಎಚ್‌ಎಂಪಿವಿ ಪ್ರಕರಣ ಪತ್ತೆಯಾಗಿದೆ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಆರೋಗ್ಯ ಸಚಿವರಿಗೆ ಸೂಚಿಸಿಸಿದ್ದೇನೆ. ಈಗಾಗಲೇ ಸಚಿವರು ಸಭೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ಇನ್ನು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ಮಾಡುವ ವಿಚಾರ ಆರೋಗ್ಯ ಇಲಾಖೆ ನಿರ್ಧಾರ ಮಾಡುತ್ತದೆ. ಆರೋಗ್ಯ ಇಲಾಖೆ ಯಾವೆಲ್ಲಾ ಕ್ರಮ ಬೇಕೋ ಅ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಅಲ್ಲದೆ, ಈ ವೈರಸ್‌ ಅಪಾಯಕಾರಿಯಲ್ಲ. ಅದರೂ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+