ಸೈಟ್ ಹಂಚಿಕೆಗೆ ಅರ್ಜಿ ಕರೆದ ಗೃಹ ಮಂಡಳಿ, ದರ ವಿವರ
ಬೆಂಗಳೂರು, ನವೆಂಬರ್ 24; ಕರ್ನಾಟಕ ಗೃಹ ಮಂಡಳಿ ವಿವಿಧ ಜಿಲ್ಲೆಗಳ ಬಡಾವಣೆಗಳಲ್ಲಿ ಅಭಿವೃದ್ಧಿಪಡಿಸಿರುವ ನಿವೇಶನಗಳನ್ನು ಹಂಚಿಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು 27/12/2023 ಕೊನೆಯ ದಿನವಾಗಿರುತ್ತದೆ.
ಗೃಹ ಮಂಡಳಿ ಅಭಿವೃದ್ಧಿಪಡಿಸಿರುವ ನಿವೇಶನಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಹಂಚಿಕೆ ನಂತರ ಬಾಕಿ ಉಳಿದಿರುವ ನಿವೇಶನಗಳನ್ನು ಹಂಚಲು ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಆಸಕ್ತರು ಇ-ಪೇಮೆಂಟ್ ಮೂಲಕ ಠೇವಣಿ ಹಣವನ್ನು ಪಾವತಿಸಿ ಅರ್ಜಿ ಸಲ್ಲಿಕೆ ಮಾಡಬಹುದು.

ನಿವೇಶನಗಳಿಗೆ ಪಾವತಿ ಮಾಡಬೇಕಿರುವ ನೋಂದಣಿ ಶುಲ್ಕ ಮತ್ತು ಆರಂಭಿಕ ಠೇವಣಿ ಮೊತ್ತದ ವಿವರ ಹೀಗಿದೆ. EWS-25,300, LIG-50,500, MIG-76,000, HIG-1 & 2 1,01,500 ರೂ.ಗಳು.
ಸೈಟ್ ಲಭ್ಯವಿರುವ ಸ್ಥಳಗಳು; ಬಾಗಲಕೋಟೆ ಜಿಲ್ಲೆ, ಹುನಗುಂದ ತಾಲೂಕು, ಚಿಕ್ಕದಾದಾವಾಡಗಿ. ಮಂಡಳಿಯ ದರ ಪ್ರತಿ ಚದರ ಅಡಿಗೆ ರೂ. 500. ಲಭ್ಯವಿರುವ ಸೈಟ್ LIG 44, MIG 78, HIG-1 19, HIG-2 6.
ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲೂಕು, ಅನಂತನಹಳ್ಳಿ, ಮೆಳ್ಳೆಕಟ್ಟೆ. LIG 12, MIG 7, HIG-1 6, HIG-2 13. ಮಂಡಳಿಯ ದರ ಪ್ರತಿ ಚದರ ಅಡಿಗೆ ರೂ. 650.
ಬಳ್ಳಾರಿ ಜಿಲ್ಲೆ, ಎನ್‌ಜಿಓ (ಮುಂಡ್ರಿಗಿ) & ಹಲಕುಂದಿ. ಲಭ್ಯವಿರುವ ನಿವೇಶನ MIG 149. ಮಂಡಳಿಯ ದರ ಪ್ರತಿ ಚದರ ಅಡಿಗೆ 550 ರೂ.ಗಳು.
ವಿಜಯಪುರ ಜಿಲ್ಲೆ, ಬಬಲೇಶ್ವರ. ಮಂಡಳಿಯ ದರ ಪ್ರತಿ ಚದರ ಅಡಿಗೆ ರೂ. 430. ಲಭ್ಯವಿರುವ ಸೈಟ್ LIG 54, MIG 65, HIG-1 45.
ವಿಜಯಪುರ ಜಿಲ್ಲೆ, ಮುದ್ದೇಬಿಹಾಳ 2ನೇ ಹಂತ. EWS 17. LIG 57, MIG 108, HIG-1 51, HIG 16.
ಷರತ್ತು ಮತ್ತು ಸೂಚನೆಗಳು
ಅರ್ಜಿ ಸಲ್ಲಿಸುವುದಕ್ಕೆ ಮೊದಲು 10 ವರ್ಷಗಳಿಗೆ ಕಡಿಮೆ ಇಲ್ಲದಷ್ಟು ಕಾಲ ಅರ್ಜಿದಾರರು ಕರ್ನಾಟಕ ರಾಜ್ಯದ ಸಾಮಾನ್ಯ ನಿವಾಸಿಯಾಗಿರುವುದಕ್ಕೆ ಹಾಗೂ ಅರ್ಜಿದಾರರ ಪತಿ/ ಪತ್ನಿ ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಕರ್ನಾಟಕ ಗೃಹ ಮಂಡಳಿ ಅಥವಾ ಇನ್ನಿತರೆ ಯಾವುದೇ ಸ್ಥಳೀಯ ಸಂಸ್ಥೆ/ ಪ್ರಾಧಿಕಾರದಿಂದಾಗಲಿ ಫ್ಲಾಟ್/ ಮನೆ ನಿವೇಶನ ಪಡೆದಿರುವುದಿಲ್ಲವೆಂದು ನೋಟರಿ ಮೂಲಕ ಪ್ರಮಾಣಿಕರಿಸಿದ ಪ್ರಮಾಣಪತ್ರ (Affidavit) ಅಪ್‌ಲೋಡ್ ಮಾಡಬೇಕು.
ಆರ್ಥಿಕ ದುರ್ಬಲ ವರ್ಗದ ನಿವೇಶನಗಳಿಗೆ ಮಂಡಳಿಯ ನಿಗದಿತ ದರದಲ್ಲಿ ಶೇಕಡ 50 ರಿಯಾಯಿತಿ ದರದಲ್ಲಿ ಹಂಚಿಕೆ ಮಾಡುವುದರಿಂದ ಇಡಬ್ಲ್ಯು ಎಸ್ ವರ್ಗದ ನಿವೇಶನಗಳಿಗೆ ಅರ್ಜಿ ಸಲ್ಲಿಸುವವರು ತಮ್ಮ ಕುಟುಂಬದ ವಾರ್ಷಿಕ ವರಮಾನ ನಗರ ವ್ಯಾಪ್ತಿಯಲ್ಲಿದ್ದಲ್ಲಿ ರೂ. 2,00,000 ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿದ್ದಲ್ಲಿ ರೂ.1,20,000 ಮೀರದಿರುವ ಬಗ್ಗೆ ಸಂಬಂದಪಟ್ಟ ತಹಶೀಲ್ದಾರ್‌ರವರಿಂದ ಅದಾಯ ಪ್ರಮಾಣ ಪತ್ರವನ್ನು ಪಡೆದು ಅರ್ಜಿಯೊಂದಿಗೆ ಅಪ್‌ಲೋಡ್ ಮಾಡಬೇಕು.
ಬಡಾವಣೆವಾರು ಲಭ್ಯವಿರುವ ನಿವೇಶನಗಳನ್ನು ಇ-ಟರಿ ಮೂಲಕ ಹಂಚಿಕೆ ಮಾಡಲಾಗುತ್ತದೆ. ನಿವೇಶನಗಳನ್ನು ಒಂದೇ ಇಡುಗಂಟಿನ (Outright sale) ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು.
ನಿಗದಿತ ಆರಂಭಿಕ ಠೇವಣಿ ಹಣಕ್ಕಿಂತ ಕಡಿಮೆ ಹಣ ಪಾವತಿಸಿದಲ್ಲಿ ಅಂತಹ ಅರ್ಜಿಗಳನ್ನು ಇ-ಲಾಟರಿಗೆ ಪರಿಗಣಿಸಲಾಗುವುದಿಲ್ಲ. ಹಂಚಿಕೆಯಾಗದ ಅರ್ಜಿದಾರರ ಅರಂಭಿಕ ಠೇವಣಿ ಹಣವನ್ನು ಯಾವುದೇ ಬಡ್ಡಿಯಿಲ್ಲದೆ ಮರುಪಾವತಿ ಮಾಡಲಾಗುವುದು.
ಪ್ರಕಟಣೆಯಲ್ಲಿ ನಮೂದಿಸಿರುವ ನಿವೇಶನಗಳ ಒಟ್ಟು ಸಂಖ್ಯೆಯು ಬದಲಾವಣೆಗೆ ಒಳಪಟ್ಟಿರುತ್ತದೆ.
ನಿವೇಶನಗಳ ಹಂಚಿಕೆಗಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರುಗಳು ಪಾವತಿಸಿರುವ ನೋಂದಣಿ ಶುಲ್ಕವನ್ನು ಮರುಪಾವತಿ ಮಾಡಲಾಗುವುದಿಲ್ಲ.
ಹಂಚಿಕೆ ನಂತರ ಹಂಚಿಕೆದಾರರ ಕೋರಿಕೆ ಅಥವಾ ನಿಗದಿತ ಸಮಯದಲ್ಲಿ ಹಣ ಸಂದಾಯ ಮಾಡದ ಸಂದರ್ಭದಲ್ಲಿ ಹಂಚಿಕೆಯನ್ನು ರದ್ದುಪಡಿಸಿ ಅರಂಭಿಕ ಠೇವಣಿ ಹಣದಲ್ಲಿ ಶೇ. 25 ರಷ್ಟು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಕರ್ನಾಟಕ ಗೃಹ ಮಂಡಳಿಯ ಕಾಯ್ದೆ 1983ರ ಹಂಚಿಕೆ ನಿಯಮಾವಳಿ ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.
ವಿವರಗಳಿಗಾಗಿ, ಅರ್ಜಿ ನೋಂದಣಿ ಮತ್ತು ಆರಂಭಿಕ ಠೇವಣಿ ಹಣವನ್ನು e-payment ಮೂಲಕ ಪಾವತಿಸಲು ಹಾಗೂ ನಿಯಮ ಮತ್ತು ಷರತ್ತುಗಳ ಪೂರ್ಣ ಮಾಹಿತಿಗಾಗಿ ಮಂಡಳಿಯ ವೆಬ್ ಸೈಟ್ https://www.khb.karnataka.gov.in ಭೇಟಿ ನೀಡುವುದು.
-
CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; ಕನ್ನಡಿಗರಿಗೂ ಇದೆ ಮೀಸಲಾತಿ -
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ?












Click it and Unblock the Notifications