House Purchase: ಹೊಸ ಮನೆ ಖರೀದಿಸುವವರು ಗಮನಿಸಲೇಬೇಕಾದ ಅಂಶಗಳಿವು
House Purchase: ಮೊದಲೆಲ್ಲ ಮನೆ ಖರೀದಿ ಮಾಡಬೇಕೆಂದರೆ ತುಂಬಾ ಸುಲಭ ಇತ್ತು. ಆದರೆ ಈಗ ಆಗಿಲ್ಲ, ಸ್ವಲ್ಪ ಯಾಮಾರಿದರೂ ತೊಂದರೆಗೆ ತಗ್ಲಾಕೊಳ್ಳೋದು ಗ್ಯಾರಂಟಿ. ಆದ್ಧರಿಂದ ನೀವು ಯಾವುದಾದರೂ ಸ್ವಂತ ಮನೆಯನ್ನು ಖರೀದಿ ಮಾಡುವಾಗ ಯಾವೆಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸ್ವಂತ ಮನೆ ಖರೀದಿ ಮಾಡಬೇಕೆಂದರೆ ಕೆಲವೊಂದು ಒಪ್ಪಂದಗಳು ಇರುತ್ತವೆ. ಅವುಗಳು ನಿಮಗೆ ಅರ್ಥವಾಗದ ರೀತಿಯಲ್ಲಿದ್ದರೆ, ನೀವು ವಕೀಲರ ಸಹಾಯವನ್ನು ಕೂಡ ತೆಗೆದುಕೊಳ್ಳಬಹುದಾಗಿದೆ. ಹಾಗಾದ್ರೆ ಮನೆ ಖರೀದಿಸುವಾಗ ನೀವು ಯಾವ ದಾಖಲೆಗಳನ್ನು ಗಮನಿಸಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಮಾರಾಟ ಒಪ್ಪಂದ: ಈ ದಾಖಲೆಯು ನಿಯಮಗಳು ಮತ್ತು ಷರತ್ತುಗಳು, ಸ್ವಾಧೀನದ ದಿನಾಂಕ, ಪಾವತಿ ಯೋಜನೆ, ವಿಶೇಷಣಗಳು, ಸಾಮಾನ್ಯ ಪ್ರದೇಶಗಳು ಮತ್ತು ಸೌಲಭ್ಯಗಳ ಬಗ್ಗೆ ವಿವರಗಳು ಸೇರಿದಂತೆ ಇತ್ತಾದಿ ಆಸ್ತಿಯ ಬಗ್ಗೆ ಎಲ್ಲಾ ರೀತಿಯ ಮಾಹಿತಿಯನ್ನು ಒದಗಿಸುತ್ತದೆ. ಒಪ್ಪಂದವು ಡೆವಲಪರ್ ಅನ್ನು ನಿರ್ಮಾಣಕ್ಕೆ ಜವಾಬ್ದಾರರನ್ನಾಗಿ ಮಾಡುತ್ತದೆ. ಆಸ್ತಿ ಖರೀದಿ ಮಾಡಲು ಮತ್ತು ಗೃಹ ಸಾಲ ಪಡೆಯಲು ಈ ದಾಖಲೆಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ.
ರೇರಾ ನೋಂದಣಿ ಪ್ರಮಾಣಪತ್ರ: ರಿಯಲ್ ಎಸ್ಟೇಟ್ ಕಾಯ್ದೆ, 2016 ಜಾರಿಗೆ ಬಂದ ಬಳಿಕ, ನಿರ್ಮಾಣ ಹಂತದಲ್ಲಿರುವ ಪ್ರತಿಯೊಂದು ಯೋಜನೆಯನ್ನು ಆಯಾ ರಾಜ್ಯದ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕಾಗುತ್ತದೆ. ನಿರ್ಮಾಣ ಹಂತದಲ್ಲಿರುವ ಯೋಜನೆಯನ್ನು ನೋಂದಾಯಿಸಿಕೊಳ್ಳುವಾಗ, ನಿರ್ಮಾಣ ಹಂತದಲ್ಲಿರುವ ಯೋಜನೆಗೆ ಸಂಬಂಧಿಸಿದ ದಾಖಲೆಗಳು ಮತ್ತು ವಿವರಗಳನ್ನು ಪ್ರವರ್ತಕರು ಆರ್‌ಇಆರ್‌ಎಗೆ ಸಲ್ಲಿಕೆ ಮಾಡಬೇಕು ಮತ್ತು ಅಪ್ಲೋಡ್ ಮಾಡಬೇಕಾಗುತ್ತದೆ.
ಸ್ವಾಧೀನ ಪ್ರಮಾಣಪತ್ರ: ಸಹಿ ಮಾಡುವ ಮೊದಲು ಸ್ವಾಧೀನ ಪ್ರಮಾಣಪತ್ರವನ್ನು ಪರಿಶೀಲನೆ ಮಾಬೇಕಾಗುತ್ತದೆ. ಇದು ಪ್ರಾಧಿಕಾರವು ನೀಡುವ ಪ್ರಮಾಣ ಪತ್ರವಾಗಿದ್ದು, ಘಟಕವು ಸಂಬಂಧಿತ ಯೋಜನಾ ಪ್ರಾಧಿಕಾರದಿಂದ ಸ್ವಾಧೀನಪಡಿಸಿಕೊಳ್ಳಲು ಕಾನೂನುಬದ್ಧವಾಗಿ ಅನುಮತಿಸಲಾಗಿದೆ ಎಂದು ಹೇಳುತ್ತದೆ. ಯೋಜನೆಯ ಒಂದು ಭಾಗಕ್ಕೆ ಅಂತಹ ಪ್ರಮಾಣಪತ್ರವನ್ನು ನೀಡಬಹುದು. ಆದ್ದರಿಂದ ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾಪಿಸಲಾದ ಫ್ಲ್ಯಾಟ್‌ನಂತಹ ಪ್ರಮಾಣಪತ್ರದ ಅಡಿಯಲ್ಲಿ ಬರುತ್ತದೆ ಎಂದು ಖರೀದಿದಾರರು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಎನ್ಕಂಬರನ್ಸ್ ಪ್ರಮಾಣಪತ್ರ: ಆಸ್ತಿಯು ಅದರ ಶೀರ್ಷಿಕೆಯ ಬಗ್ಗೆ ಯಾವುದೇ ರೀತಿಯ ವಿವಾದದಿಂದ ಮುಕ್ತವಾಗಿದೆ ಮತ್ತು ಖರೀದಿದಾರನು ಖರೀದಿಸಲು ಬಯಸುವ ಯಾವುದೇ ಸಾಲ ಅಥವಾ ಅಡಮಾನವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಎನ್ಕಂಬರನ್ಸ್ ಪ್ರಮಾಣಪತ್ರವು ಸಹಾಯ ಮಾಡುತ್ತದೆ.
ಮಾಲೀಕತ್ವ ಪ್ರಮಾಣಪತ್ರ: ಸೂಕ್ತ ಅನುಭವ ಹೊಂದಿರುವ ವಕೀಲರ ಮೂಲಕ ಯೋಜನೆಯನ್ನು ನಿರ್ಮಿಸಲು ಉದ್ದೇಶಿಸಿರುವ ಭೂಮಿಯ ಮಾಲೀಕರ ಮಾಲೀಕತ್ವದ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ. ನಂತರ, ಅಂತಹ ಭೂಮಿಯ ಮಾಲೀಕರು ಎಂದು ಹೇಳಿಕೊಂಡು ಯಾವುದೇ ಅಡೆತಡೆಯಿಲ್ಲದೆ ಅಥವಾ ಮಾಲೀಕತ್ವವನ್ನು ಹೊಂದಿದ್ದಾರೆಯಾ ಎಂದು ತಿಳಿದುಕೊಳ್ಳಿ
ಸ್ಥಳೀಯ ಪ್ರಾಧಿಕಾರದಿಂದ ಎನ್‌ಒಸಿ: ಎನ್‌ಒಸಿ ಬಿಲ್ಡರ್ನಿಂದ ಆಸ್ತಿ ಖರೀದಿಸುವ ಮೊದಲು ಪರಿಶೀಲಿಸಬೇಕಾದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಯಾಕೆಂದರೆ ಯೋಜನೆ ಅಥವಾ ಕಟ್ಟಡವು ಅಧಿಕಾರಿಗಳಿಂದ ಅನುಮೋದಿಸಲ್ಪಟ್ಟಿದೆ ಮತ್ತು ಯಾವುದೇ ಆಕ್ಷೇಪಣೆಗಳಿಲ್ಲ ಎಂದು ತೋರಿಸಲು ಇದು ಪುರಾವೆಯಾಗಿ ತುಂಬಾ ಸಹಕಾರಿಯಾಗಲಿದೆ. ಮುಂದೆ ಯಾವುದೇ ತೊಂದರೆಗೆ ಒಳಗಾಗಬಾರದು ಅಂದ್ರೆ ಹೊಸ ಮನೆ ಖರಿದೀಸುವ ಮುನ್ನ ಈ ಎಲ್ಲಾ ಅಂಶಗಳನ್ನು ಗಮನಿಸಲೇಬೇಕಾಗುತ್ತದೆ. ಯಾಕಂದ್ರೆ ಈಗಿನ ಕಾಲದಲ್ಲಿ ಯಾರನ್ನು ನಂಬಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದೇವೆ.












Click it and Unblock the Notifications