ನಮ್ ಪಿಡಬ್ಲ್ಯುಡಿ ರೇವಣ್ಣ ಸಾಹೇಬ್ರನ್ನು ನಿಂಬೆಹಣ್ಣು ಆವರಿಸಿಕೊಂಡಾಗ!
Recommended Video

ಸಾಮಾನ್ಯವಾಗಿ ವರ್ಷದ ಇತರ ದಿನಗಳಲ್ಲಿ ಹತ್ತು ರೂಪಾಯಿಗೆ ನಾಲ್ಕೈದು ಸಿಗುವ ನಿಂಬೆಹಣ್ಣು, ಬೇಸಿಗೆಯಲ್ಲಿ ಮಾತ್ರ ಬಹಳ ದುಬಾರಿ. ಗಂಟಲು ಒಣಗಿದಾಗ, ನಿಂಬೆಹಣ್ಣಿನ ಷರಬತ್ ಕುಡಿದರೆ, ಮಾವಿನಕಾಯಿ ಚಿತ್ರಾನ್ನಕ್ಕೆ ಇದರ ಒಂದಷ್ಟು ರಸ ಬಿದ್ದರೆ ಇದರ ಗಮ್ಮತ್ತೇ ಬೇರೆ. ಜೊತೆಗೆ, ಮನೆಕಾಯಲು, ಮನೆಮುರಿಯಲು ಎರಡಕ್ಕೂ ಬೇಕು 'ನಿಂಬೆಹಣ್ಣು'.
ಅಮವಾಸ್ಯೆ, ಸಂಕ್ರಮಣದ ದಿನ ನಾಲ್ಕು ರಸ್ತೆ ಕೂಡುವ ಜಾಗದಲ್ಲಿ ನಿಂಬೆಹಣ್ಣಿನ ತುಂಡನ್ನು ಕಂಡರೆ, ಯಾರೋ ನನ್ಮಕ್ಳು ವಾಮಾಚಾರ ನಡೆಸಿದ್ದಾರೆ ಎನ್ನುವುದು ಈಗಲೂ ಜನರು ಆಡಿಕೊಳ್ಳುವ ಮಾತು ಮತ್ತದಕ್ಕೆ ಸರಿಯಾಗಿ ಇಂತಹ ದಿನಗಳಲ್ಲಿ ಕುಂಕುಮ, ಅರಸಿನ ಹಚ್ಚಿರುವ ನಿಂಬೆಹಣ್ಣಿನ ತುಂಡುಗಳು ರಸ್ತೆಯಲ್ಲಿ ಕಾಣಸಿಗುವುದೂ ಹೌದು...
ಷರಬತ್ತಿಗೂ ಒಗ್ಗುವ, ಮಾಟಮಂತ್ರಕ್ಕೂ ಬೇಕಾಗುವ ನಿಂಬೆಹಣ್ಣಿನ ವಿಚಾರಕ್ಕೆ ಬಂದಾಗ, ದೇವೇಗೌಡರ ಸುಪುತ್ರ ಎಚ್ ಡಿ ರೇವಣ್ಣನವರಿಗೂ ಲಿಂಬೆಹಣ್ಣಿನ ನಡುವೆ ಅದೇನೋ ಅವಿನಾವ ಸಂಬಂಧ. ಕೈಯಲ್ಲೋ, ಜೇಬಲ್ಲೋ ನಿಂಬೆಹಣ್ಣು ಇಲ್ಲದಿದ್ದರೆ, ನಮ್ ರೇವಣ್ಣ ಮನೆಯ ತುಳಸಿಕಟ್ಟೆಯನ್ನು ದಾಟಿ ಬರುತ್ತಾರೋ, ಇಲ್ಲವೋ?
ಅಪ್ರತಿಮ ದೈವಭಕ್ತ ಮತ್ತು ತುಸು ಹೆಚ್ಚೇ ಎನಿಸುವಂತೆ ಸಮಯ, ಗಳಿಗೆ, ಸಂಖ್ಯಾಶಾಸ್ತ್ರವನ್ನು ನಂಬುವ ರೇವಣ್ಣ, ಪೌರೋಹಿತ್ಯವನ್ನೇ ಕಸುಬು ಮಾಡಿಕೊಂಡವರೂ ನಾಚುವಂತೆ, ಆಮೂಲೆ, ಈಮೂಲೆ, ಈಶಾನ್ಯ ಮೂಲೆ, ದೇವರ ಮೂಲೆ, ಕುಬೇರ ಮೂಲೆ ಎಂದು ಉಪದೇಶಿಸುವುದುಂಟು.

ನಿಂಬೆಹಣ್ಣು ರೇವಣ್ಣ ಎಂದು ಕರೆದರೂ ತಲೆಕೆಡಿಸಿಕೊಳ್ಳುವುದಿಲ್ಲ
ವಿರೋಧಿಗಳು ನಿಂಬೆಹಣ್ಣು ರೇವಣ್ಣ ಎಂದು ಕರೆದರೂ, ಇದ್ಯಾವುದಕ್ಕೂ ತಲೆಕೆಡೆಸಿಕೊಳ್ಳದ ನಮ್ಮ ಪಿಡಬ್ಲ್ಯುಡಿ ಸಾಹೇಬ್ರು, ನಿಮಗೂ ಒಂದೆರಡು ನಿಂಬೆಹಣ್ಣು ಕಳುಹಿಸಿಕೊಡುತ್ತೇನೆ, ಒಮ್ಮೆ ಉಪಯೋಗಿಸಿ ನೋಡಿ ಎಂದು ಬಿಜೆಪಿ, ಕಾಂಗ್ರೆಸ್ಸಿಗರನ್ನೂ ಅಣಕಿಸುತ್ತಾರೆ. ಗಳಿಗೆ ನೋಡಿ ನಮ್ ರೇವಣ್ಣನತ್ರ ಮಾತಾಡ್ರಪ್ಪಾ ಎಂದು ಸ್ಪೀಕರ್ ರಮೇಶ್ ಕುಮಾರ್ ಹಲವಾರು ಬಾರಿ ಚೇಡಿಸಿದ್ದುಂಟು..

ಕೈಯಲ್ಲಿ ಎಷ್ಟು ಹಿಡಿಸುತ್ತೋ ಅಷ್ಟು ನಿಂಬೆಹಣ್ಣು
ಮೊನ್ನೆ ಮೊನ್ನೆ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿನ ಚುನಾವಣಾ ಪ್ರಚಾರ ಸಭೆಯಲ್ಲಿ, ಕೈಯಲ್ಲಿ ಎಷ್ಟು ಹಿಡಿಸುತ್ತೋ ಅಷ್ಟು ನಿಂಬೆಹಣ್ಣನ್ನು ಹಿಡಿದುಕೊಂಡು, ವೇದಿಕೆಯಲ್ಲಿ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಸುತ್ತಾಡುತ್ತಿದ್ದ ರೇವಣ್ಣ, ಕೂತವರೆಲ್ಲರಿಗೂ ಒಂದು ರೌಂಡ್ ನಿಂಬೆಹಣ್ಣನ್ನು ಕೊಟ್ಟಿದ್ದರು. ಯಾಕ್ ಅಣ್ಣಾ ಇದು ಅಂದರೆ, ಸುಮ್ನೆ ಮಡ್ಕೋ ಎಂದು ತನ್ನದೇ ಸ್ಟೈಲಿನಲ್ಲಿ ಗದರಿದ್ದರು.

ಶತ್ರುಗಳಿಗೂ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ
ನಿಂಬೆಹಣ್ಣು ಯಾಕ್ ಯಾವಾಗ್ಲೂ ಇಟ್ಕೊಂಡಿರ್ತೀರಾ ಎಂದು ಮಾಧ್ಯಮವರು ಏನಾದರೂ ಪ್ರಶ್ನಿಸಿದರೆ, ನಿಮಗೆಲ್ಲಾ ಗೊತ್ತಾಗೊಲ್ಲಾ.. ಇದರಿಂದ ಶತ್ರುಗಳಿಗೂ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ಅಷ್ಟು ಪವರ್ ಫುಲ್ ಕಣ್ರೀ ಈ ನಿಂಬೆಹಣ್ಣು.. ನಿಮಗೂ ಒಂದು ಕೊಡ್ಲಾ.. ಎಂದು ರೇವಣ್ಣ ಹೇಳಿದ ಬಹಳಷ್ಟು ಉದಾಹರಣೆಗಳಿವೆ.

ಲೋಕಸಭಾ ಕಣದಲ್ಲಿರುವ ಪ್ರಜ್ವಲ್ ಮತ್ತು ನಿಖಿಲ್ ಕುಮಾರಸ್ವಾಮಿ
ರೇವಣ್ಣ ಅದೆಷ್ಟು ನಿಂಬೆಹಣ್ಣನ್ನು ನೆಚ್ಚಿಕೊಂಡಿದ್ದಾರೆ ಅಂದರೆ, ಲೋಕಸಭಾ ಕಣದಲ್ಲಿರುವ ಪುತ್ರ ಪ್ರಜ್ವಲ್ ಮತ್ತು ಸಹೋದರನ ಮಗ ನಿಖಿಲ್ ಕುಮಾರಸ್ವಾಮಿಗೂ ನಿಂಬೆಹಣ್ಣು ಜೊತೆಯಲ್ಲಿ ಇಟ್ಟುಕೊಂಡೇ ಪ್ರಚಾರ ನಡೆಸುವಂತೆ ಸೂಚಿಸಿದ್ದಾರೆ. ರೇವಣ್ಣಗೆ ನಿಂಬೆಹಣ್ಣಿನ ವ್ಯಾಮೋಹ ನೋಡಿದರೆ, ಹೋದ ಜನ್ಮದಲ್ಲಿ ನಿಂಬೆಹಣ್ಣಿನ ಮಂಡಿ ಇಟ್ಟುಕೊಂಡಿದ್ದರೋ ಏನೋ ಎನ್ನುವಷ್ಟರ ಮಟ್ಟಿಗೆ ಇವರನ್ನು ಆವರಿಸಿಕೊಂಡಿದೆ.

ಹಳ್ಳಿ ಕಡೆಗೆ ಹೋದಾಗ ಜನ ಪ್ರೀತಿಯಿಂದ ನಿಂಬೆಹಣ್ಣು ಕೊಡುತ್ತಾರೆ
ಹಳ್ಳಿ ಕಡೆಗೆ ಹೋದಾಗ ಜನ ಪ್ರೀತಿಯಿಂದ ನಿಂಬೆಹಣ್ಣು ಕೊಡುತ್ತಾರೆ, ಅದನ್ನು ಬಿಸಾಡಲು ಆಗುತ್ತಾ ಎನ್ನುವ ರೇವಣ್ಣ, ಸಹೋದರ ಕಮ್ ಸಿಎಂ ಕುಮಾರಸ್ವಾಮಿಯವರ ಪ್ರಮುಖ ಮೀಟಿಂಗಿಗೆ ದಿನ, ಸಮಯ ನಿಗದಿ ಮಾಡುವವರೂ ಇವರೇ. ಅದೇನು, ನಿಂಬೆಹಣ್ಣನ್ನು ರೇವಣ್ಣ ಇಷ್ಟೊಂದು ಹಚ್ಚಿಕೊಂಡಿದ್ದಾರೆ ಅಂದರೆ, ಅದು ಅವನ ನಂಬಿಕೆ, ನಾನ್ಯಾಕೆ ಅಡ್ಡಪಡಿಸಲಿ ಎಂದು ಎಚ್ಡಿಕೆ ಹೇಳುತ್ತಾರೆ.

ಯಡಿಯೂರಪ್ಪ, ಅಶೋಕ್ ಗೆ ನಿಂಬೆಹಣ್ಣು ಕಳುಹಿಸಿಕೊಡುತ್ತೇನೆ
ಯಡಿಯೂರಪ್ಪ, ಅಶೋಕ್ ಗೆ ನಿಂಬೆಹಣ್ಣು ಕಳುಹಿಸಿಕೊಡುತ್ತೇನೆ, ಚುನಾವಣೆಯ ಸಮಯ, ಅವರಿಗೆ ಯಾವುದೇ ಮಾಟಮಂತ್ರ ನಾಟದಿರಲಿ ಎನ್ನುವ ರೇವಣ್ಣ ಅವರನ್ನು ವಿರೋಧಿಗಳು ಎಷ್ಟೇ ಟೀಕಿಸಿದರೂ, ಅಷ್ಟೇ ಅವರನ್ನು ಪ್ರೀತಿಸುತ್ತಾರೆ. ಅದೇನೇ ಇರಲಿ, ಭದ್ರತಾ ಪಡೆಗಳಿಗಿಂತಲೂ ಹೆಚ್ಚು ನಿಂಬೆಹಣ್ಣನ್ನೇ ನಂಬಿರುವ ರೇವಣ್ಣ, ಆ ಮೂಲಕ ಇದನ್ನು ಬೆಳೆಯುವ ರೈತರಿಗೆ ಬೆಲೆ ಕೊಡುತ್ತಿದ್ದಾರೋ ಅಥವಾ ಇದೊಂದು ಮೂಢನಂಬಿಕೆಯ ಪರಮಾವಧಿಯೋ? ಓವರ್ ಟು ಮಾವಿನಕೆರೆ ರಂಗನಾಥಸ್ವಾಮಿ...
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications