HIV: ಕರ್ನಾಟಕದಲ್ಲಿ ಯುವಕರಲ್ಲಿ ಹೆಚ್ಚಾಯ್ತು ದೈಹಿಕ ಸಂಪರ್ಕ, ಸುರಕ್ಷತೆ ಇಲ್ಲದ ಸಲಿಂಗಕಾಮದಿಂದ ಏಡ್ಸ್‌!

ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಪುರುಷರಿಂದ ಪುರುಷರ ನಡುವೆ ಲೈಂಗಿಕ ಸಂಪರ್ಕ ಅಥವಾ ಸಲಿಂಗ ಸಂಬಂಧಗಳಿಂದ ಎಚ್‌ಐವಿ/ಏಡ್ಸ್ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಹೆಚ್ಚಳವಾಗುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ಪುರುಷರ ನಡುವಿನ ಲೈಂಗಿಕ ಸಂಪರ್ಕದ ಪರಿಣಾಮವಾಗಿ ಎಚ್‌ಐವಿ/ಏಡ್ಸ್ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಕರ್ನಾಟಕ ರಾಜ್ಯ ಏಡ್ಸ್ ಪ್ರತಿಬಂಧಕ ಸೊಸೈಟಿ (KSAPS) ಇತ್ತೀಚಿನ ಅಂಕಿ-ಅಂಶಗಳಲ್ಲಿ ಉಲ್ಲೇಖಿಸಿದೆ.

ಕರ್ನಾಟಕ ರಾಜ್ಯ ಏಡ್ಸ್ ಪ್ರತಿಬಂಧಕ ಸೊಸೈಟಿಯ ವರದಿ ಪ್ರಕಾರ, ರಾಜ್ಯದಲ್ಲಿ ಸಕ್ರಿಯ ಎಚ್‌ಐವಿ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಮುಖ್ಯವಾಗಿ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಇರುವುದು ಸೋಂಕು ಹೆಚ್ಚಳಕ್ಕೆ ಪ್ರಮುಖ ಕಾರಣವೆಂದು ಹೇಳಲಾಗಿದೆ. ಈ ಕುರಿತು ಡೆಕ್ಕನ್ ಹೆರಾಲ್ಡ್ ವರದಿ ಪ್ರಕಟಿಸಿದೆ.

HIV

ಮೂರು ವರ್ಷಗಳಲ್ಲಿ ಭಾರೀ ಏರಿಕೆ

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಕ್ರಿಯ ಎಚ್‌ಐವಿ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ವರದಿಯ ಪ್ರಕಾರ, 18 ರಿಂದ 25 ಹಾಗೂ 26 ರಿಂದ 35 ವರ್ಷದೊಳಗಿನ ಯುವಕರಲ್ಲೇ ಸೋಂಕಿನ ಪ್ರಮಾಣ ಹೆಚ್ಚಾಗಿ ದಾಖಲಾಗುತ್ತಿದೆ. 18 ರಿಂದ 25 ವರ್ಷದ ವಯೋಮಾನದವರಲ್ಲಿ 2023-24ರಲ್ಲಿ 3,732 ಪ್ರಕರಣಗಳು ದಾಖಲಾಗಿದ್ದರೆ, 2024-25ರಲ್ಲಿ ಈ ಸಂಖ್ಯೆ 6,962ಕ್ಕೆ ಏರಿಕೆಯಾಗಿದೆ. ಪ್ರಸ್ತುತ ವರ್ಷದಲ್ಲಿ ಇದು 6,283ಕ್ಕೆ ತಲುಪಿದೆ. ಇನ್ನೂ 26 ರಿಂದ 35 ವರ್ಷದ ವಯೋಮಾನದವರಲ್ಲಿ ಪ್ರಕರಣಗಳ ಸಂಖ್ಯೆ 9,351ರಿಂದ 14,555ಕ್ಕೆ ಏರಿಕೆಯಾಗಿದೆ. ಲೈಂಗಿಕ ಸಂಪರ್ಕದಿಂದ ಹರಡುವ ಸೋಂಕುಗಳಲ್ಲಿ ಎಚ್‌ಐವಿ ಪ್ರಮುಖವಾಗಿದ್ದು, ಇದೇ ವರ್ಷ 417 ಹೊಸ ಅಥವಾ ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.

ಸದಾ ತಣ್ಣಗಿರುವ ಕೈ, ಪಾದಗಳು ಆರೋಗ್ಯದ ಬಗ್ಗೆ ದೊಡ್ಡ ಸತ್ಯವನ್ನು ಹೊರ ಹಾಕುತ್ತವೆ!ನಿಮಗೂ ತಿಳಿದಿರಲಿ
ಸದಾ ತಣ್ಣಗಿರುವ ಕೈ, ಪಾದಗಳು ಆರೋಗ್ಯದ ಬಗ್ಗೆ ದೊಡ್ಡ ಸತ್ಯವನ್ನು ಹೊರ ಹಾಕುತ್ತವೆ!ನಿಮಗೂ ತಿಳಿದಿರಲಿ

ಯುವಕರಲ್ಲೇ ಹೆಚ್ಚಳ

ಇನ್ನು ಯುವಕರಲ್ಲಿಯೇ ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಎಚ್‌ಐವಿ ಪ್ರಕರಣಗಳು ಹೆಚ್ಚಾಗುತ್ತಿವೆ. ಮುಖ್ಯವಾಗಿ 18 ರಿಂದ 25 ಮತ್ತು 26 ರಿಂದ 35 ವರ್ಷದ ಒಳಗಿನ ಯುವಕರಲ್ಲಿ ಈ ಸೋಂಕು ಹೆಚ್ಚು ಕಾಣಿಸುತ್ತಿದೆ ಎಂದು ಹೇಳಲಾಗಿದೆ. ಯುವಕರು ಸಲಿಂಗ ಕಾಮದ ಕಡೆ ಹೆಚ್ಚು ಆಕರ್ಷಿತರಾಗುತ್ತಿರುವುದು ಹಾಗೂ ಸುರಕ್ಷಿತಾವಿಧಾನ ಅನುಸರಿಸದೆ ಇರುವುದು ಸಹ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

15-49 ವರ್ಷ ವಯಸ್ಸಿನ ಭಾರತೀಯರಲ್ಲಿ ವೇಗವಾಗಿ ಹೆಚ್ಚುತ್ತಿದೆ ಬೊಜ್ಜು, ಮಧುಮೇಹದ ಅಪಾಯ: ಸಮೀಕ್ಷೆಯಲ್ಲಿ ಬಹಿರಂಗ
15-49 ವರ್ಷ ವಯಸ್ಸಿನ ಭಾರತೀಯರಲ್ಲಿ ವೇಗವಾಗಿ ಹೆಚ್ಚುತ್ತಿದೆ ಬೊಜ್ಜು, ಮಧುಮೇಹದ ಅಪಾಯ: ಸಮೀಕ್ಷೆಯಲ್ಲಿ ಬಹಿರಂಗ

ಹಾಸ್ಟೆಲ್ - ಪಿಜಿಗಳಲ್ಲಿ ಹೆಚ್ಚಳ

ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಕೆಲವೊಂದು ಕಾಲೇಜು ಹಾಸ್ಟೆಲ್ - ಪಿಜಿಗಳಲ್ಲಿರುವ ಯುವಕರಲ್ಲಿ ಎಚ್‌ಐವಿ ಹಾಗೂ ಏಡ್ಸ್‌ ಸಂಬಂಧಿತ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಹೇಳಲಾಗಿದೆ. ಇಲ್ಲಿ ನೆಲೆಸುವ ಕೆಲವು ಯುವಕರು ಸಲಿಂಗಕಾಮದಲ್ಲಿ ಆಸಕ್ತಿ ಬೆಳಸಿಕೊಳ್ಳುತ್ತಿದ್ದಾರೆ ಹಾಗೂ ಸುರಕ್ಷತಾ ವಿಧಾನಗಳನ್ನು ಅನುಸರಿಸುತ್ತಿಲ್ಲ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಗೇ ಹಾಗೂ ಡೇಟಿಂಗ್‌ ಆ್ಯಪ್ ಗಳ ಸಂಖ್ಯೆ ಹೆಚ್ಚಳವಾಗಿದ್ದು, ಇದರಿಂದ ಸುಲಭವಾಗಿ ಭೇಟಿ ಮಾಡುವುದು ಸಾಧ್ಯವಾಗುತ್ತಿದೆ. ಈ ಕಾರಣಕ್ಕೂ ಸೋಂಕು ಹೆಚ್ಚಳವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಾಲೇಜು ಹಾಸ್ಟೆಲ್‌ಗಳಲ್ಲಿ ಉಂಟಾಗಿರುವ ಸೋಂಕಿನ ಹರಡುವ ಪ್ರಮಾಣ ಹೆಚ್ಚಳವಾಗಿದೆ. ಕೆಲವು ಪುರುಷರು ಮಹಿಳಾ ಲೈಂಗಿಕ ಕಾರ್ಯಕರ್ತೆಯರೊಂದಿಗೆ ಆ ಮೇಲೆ ತಮ್ಮದೇ ಗುಂಪಿನ ಇತರ ಪುರುಷರೊಂದಿಗೆ ಸಹ ದೈಹಿಕ ಸಂಪರ್ಕ ಬೆಳೆಸುತ್ತಿರುವುದು ಇದಕ್ಕೆ ಕಾರಣ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+