ಭಾರತವು ಹಿಂದೂ ರಾಷ್ಟ್ರ ಆಗಬಾರದು; ಮಠಾಧೀಶರ ಭೇಟಿ ಬಳಿಕ ಯತೀಂದ್ರ ಹೇಳಿಕೆಗೆ ಆರ್. ಅಶೋಕ್ ಆಕ್ರೋಶ
ಬೆಂಗಳೂರು: ಭಾರತವು ಹಿಂದೂ ರಾಷ್ಟ್ರವಾಗಬಾರದು ಎಂಬ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಜೆಪಿ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ. ಯತೀಂದ್ರ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ದೇಶ ಹಿಂದೂ ರಾಷ್ಟ್ರವಾದರೆ ಹಿಂದುತ್ವವಾದಿಗಳು ಮನುಸ್ಮೃತವಾದಿಗಳಲ್ಲಿರುವ ಸಾಮಾಜಿಕ ವ್ಯವಸ್ಥೆಯನ್ನು ವಾಪಸ್ ತರುತ್ತಾರೆ. ಈ ದೇಶ ಹಿಂದೂ ರಾಷ್ಟ್ರವಾದರೆ ಜಾತಿ ವ್ಯವಸ್ಥೆ ಮತ್ತೆ ಬರುತ್ತದೆ ಎಂದು ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಅದು ಜನರನ್ನು ಹಿಂದುಳಿದ ವರ್ಗಗಳನ್ನು ಶೋಷಣೆ ಮಾಡುವ ವ್ಯವಸ್ಥೆ, ಆ ರೀತಿ ಶೋಷಣೆಯಾದರೆ ಹಿಂದುಳಿದ, ದಲಿತ ಸಮುದಾಯದವರು ಜಾತಿ ವ್ಯವಸ್ಥೆಯಡಿ ಶೋಷಣೆಗೊಳಗಾಗುತ್ತೇವೆ ಎಂದರು.

ಭಾರತ ಹಿಂದೂ ರಾಷ್ಟ್ರದ ಆದ್ರೆ ಅದಕ್ಕಿಂತ ದೊಡ್ಡ ಅಪಾಯ ಮೊತ್ತೊಂದಿಲ್ಲಾ ಎಂದು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವ್ರೇ ಹೇಳಿದ್ದಾರೆ. ಸಂವಿಧಾನ ಉಳಿದರೆ ನಾವೆಲ್ಲ ಉಳಿಯಲು ಸಾಧ್ಯವಾಗಿದ್ದು, ಜಾತಿ ವ್ಯವಸ್ಥೆ ವಿರುದ್ಧ ಬಸವಣ್ಣ, ದಾಸರು, ಶರಣರು ಹೋರಾಡಿದರೂ ಅದು ಹೋಗುತ್ತಿಲ್ಲ ಇದಕ್ಕೆ ಕಾರಣ ಹಿಂದೂ ಧರ್ಮ, ಜಾತಿ ವ್ಯವಸ್ಥೆಗೆ ಕೊಟ್ಟಿರುವ ಒಪ್ಪಿಗೆಯ ಮುದ್ರೆ ಎಂದು ಹೇಳಿದ್ದಾರೆ.
ಶತಮಾನಗಳಿಂದ ಶೋಷಿತರು ಶೋಷಣೆಗೆ ಒಳಗಾಗುತ್ತಿದ್ದೇವೆ. ಕೆಲವರು ಧರ್ಮದ ಕಟ್ಟುಪಾಡುಗಳನ್ನು ಹೇಳುತ್ತ ನಮ್ಮನ್ನು ಶೋಷಿಸುತ್ತಿದ್ದಾರೆ. ಆ ಶೋಷಣೆಯಿಂದ ನಾವು ಹೊರಬರುವ ಸಮಯ ಬಂದಿದೆ. ಬೀದರ್‌ನ ಈ ನೆಲ ಶೋಷಣೆ ವಿರುದ್ಧ ಹೋರಾಡಿದ ಮಹಾನ್ ವ್ಯಕ್ತಿ ಬಸವಣ್ಣನವರು ನಡೆದಾಡಿದ ನೆಲ. ಬಸವಣ್ಣನವರು ಇದೇ ನೆಲದಿಂದ ಜಗತ್ತಿನಲ್ಲೇ ಅತಿದೊಡ್ಡ ಕ್ರಾಂತಿ ಮಾಡಿದರು. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಮತ್ತೆ ನಮ್ಮನ್ನು ಶೋಷಣೆಗೆ ದೂಡುತ್ತಿದ್ದಾರೆ ಎಂದು ಹೇಳಿದರು.
ಯತೀಂದ್ರ ಹೇಳಿಕೆಗೆ ಅಶೋಕ್ ಆಕ್ರೋಶ
ಸಚಿವ ಯತೀಂದ್ರ ಸಿದ್ದರಾಮಯ್ಯಗೆ ಹಿಂದೂ ಧರ್ಮದ ಹೆಸರು ಕೇಳಿದರೆ ಆಗೋದಿಲ್ಲ. ಬದಲಾಗಿ ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಅವರು ಬೆಂಬಲ ನೀಡುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಏನಿದ್ದರೂ ಪಾಕಿಸ್ತಾನ, ಬಾಂಗ್ಲಾದೇಶದ ಬಗ್ಗೆ ಮಾತನಾಡಲಿ. ಅವರಿಗೆ ಹಿಂದುತ್ವದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮೈಸೂರಿನ ಮೇಲೆ ಹಿಡಿತ ತಪ್ಪುತ್ತದೆ, ತವರು ಜಿಲ್ಲೆಯಲ್ಲಿ ಇನ್ನೊಂದು ಪವರ್ ಸೆಂಟರ್ ಸೃಷ್ಟಿಯಾಗುತ್ತದೆ ಎನ್ನುವ ದುರುದ್ದೇಶದಿಂದ, ಸ್ವಾರ್ಥದಿಂದ, 6 ಬಾರಿ ಆಯ್ಕೆಯಾಗಿರುವ ಹಿರಿಯ ಮುಸ್ಲಿಂ ಶಾಸಕರಾದ ತನ್ವೀರ್ ಅವರಿಗೆ ಸಚಿವ ಸ್ಥಾನ ತಪ್ಪಿಸಿರುವ ತಮ್ಮಂತಹ ಡೋಂಗಿ ಜಾತ್ಯಾತೀತರಿಂದ ಬಿಜೆಪಿ ಮತ್ತು ಆರ್ ಎಸ್ಎಸ್ secularism ಪಾಠ ಕಲಿಯುವ ಅವಶ್ಯಕತೆ ಇಲ್ಲ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರೇ ,
ಹಿಂದೂ ರಾಷ್ಟ್ರ ಎಂದರೆ ಸಮಾಜವಾದದ ಹೆಸರಿನಲ್ಲಿ, ಜ್ಯಾತ್ಯಾತೀತತೆ ಹೆಸರಿನಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡಿ ಇನ್ನೊಬ್ಬರನ್ನು ತುಳಿದು ಅಧಿಕಾರ ಅನುಭವಿಸುವುದಲ್ಲ. ಹಿಂದೂ ರಾಷ್ಟ್ರ ಅಂದರೆ "ಸರ್ವೇ ಜನಾಃ ಸುಖಿನೋ ಭವಂತು" ಎಂದು ಎಲ್ಲರ ಒಳಿತು ಬಯಸುವುದು ಎಂದು ಹೇಳಿದ್ದಾರೆ.
100 ವರ್ಷಗಳ ಹಿಂದೆ ಹಿಂದುತ್ವ ಎಂಬುದೇ ಇರಲಿಲ್ಲ: ಪ್ರಿಯಾಂಕ್ ಖರ್ಗೆ
3000 ವರ್ಷಗಳ ಇತಿಹಾಸ ಇರುವ ಹಿಂದು ಧರ್ಮವನ್ನು 100 ವರ್ಷಗಳ ಹಿಂದೆ ಹುಟ್ಟಿಕೊಂಡ ಸಂಘಟನೆ ತನ್ನ ಬೆಳವಣಿಗೆಗಾಗಿ ಬಳಸಿಕೊಂಡಿದೆ. 100 ವರ್ಷಗಳ ಹಿಂದೆ ಹಿಂದುತ್ವ ಎಂಬುದೇ ಇರಲಿಲ್ಲ. ಅದನ್ನು ಹುಟ್ಟಿ ಹಾಕಿ, ಮುಂದುವರಿಸಲಾಗುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮನುವಾದಿಗಳು ಇರಬಾರದು ಎಂಬ ಮಾತು ಹಿಂದಿನಿಂದಲೂ ಇದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಹಿಂದು ರಾಷ್ಟ್ರ ನಿರ್ಮಾಣ ಅಪಾಯಕಾರಿ ಎಂದಿದ್ದರು. ಅದನ್ನು ಅವರು ತಮ್ಮ ಪುಸ್ತಕಗಳಲ್ಲಿಯೂ ಬರೆದಿದ್ದಾರೆ. ಜಾತಿ ವ್ಯವಸ್ಥೆ ಎಷ್ಟು ಅಪಾಯಕಾರಿ ಎಂಬುದನ್ನು ರಾಷ್ಟ್ರಕ್ಕೆ ಡಾ. ಅಂಬೇಡ್ಕರ್ ಅವರು ತಿಳಿಸಿದ್ದಾರೆ. ಬಿಜೆಪಿ ನಾಯಕರು ಆ ಪುಸ್ತಕಗಳನ್ನು ಓದಲಿ. ಆದರೆ, ಬಿಜೆಪಿ ನಾಯಕರು ಮನುಸ್ಮೃತಿಯನ್ನು ಓದುತ್ತಾರಷ್ಟೇ ಎಂದರು.


Click it and Unblock the Notifications
