ಯಾರಾದ್ರೂ ರಾಮ ಮಂದಿರ ಕೆಡವಿ ಮಸೀದಿ ಕಟ್ಟಿದರೆ, ಅವರಪ್ಪನಿಗೆ ಹುಟ್ಟಿದೋನು ಅಂತೀನಿ: ಮಾಜಿ ಡಿಸಿಎಂ ಕಿಡಿ

ಬೆಳಗಾವಿ, ಜನವರಿ 08: ದೇಶದಲ್ಲಿ 500 ವರ್ಷದ ಕೆಳೆಗೆ ರಾಮ ಹುಟ್ಟಿದ ಜಾಗದಲ್ಲಿ ದೇವಸ್ಥಾನ ಕಿತ್ತು ಹಾಕಿದ್ದರು. ಬಾಬರ್ ನಂತವನು ಬಂದು ಬಾಬ್ರಿ ಮಸೀದಿ ಕಟ್ಟಿದ್ದರಿಂದ ರಾಮನ ದೇವಸ್ಥಾನವನ್ನೇ ಬಾಬ್ರಿ ಮಸೀದಿ ಅಂತ ಕರೆದರೆ ಹೇಗೆ? ಈಗ ಯಾರಾದ್ರೂ ಮಂದಿರ ಕೆಡವಿ ಮಸೀದಿ ಕಟ್ಟಿದರೆ ಅವರಪ್ಪನಿಗೆ ಹುಟ್ಟಿದೋನು ಅಂತ ಕರೀತಿನಿ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹೌದು, ಈ ಕುರಿತು ಮಾತನಾಡಿದ ಅವರು, ವಿಶ್ವನಾಥ ದೇವಸ್ಥಾನದಲ್ಲಿ ಅರ್ಧ ಮಸೀದಿ ಹೇಗೆ ಬಂತು, ಮಥುರಾದಲ್ಲಿ ಅರ್ಧ ಮಸೀದಿ ಹೇಗೆ ಬಂತು. ಲಾಠಿ ಗೋಲಿ ಖಾಯೆಂಗೆ ಮಂದೀರ ವಹಿ ಬನ್ ಗಯಾ ಎಂದು ಕೂಗ್ತಿದ್ವಿ ಇನ್ನೆರಡು ದೇವಸ್ಥಾನಗಳಿಗೆ ಕೋರ್ಟ್ ಆದೇಶ ನೀಡಿದೆ. ಅಲ್ಲಿರುವ ಮಸೀದಿಗಳು ದ್ವಂಸ ಆಗುತ್ತೆ ದೇವಸ್ಥಾನ ತಲೆ ಎತ್ತುತ್ತೆ, ದೇವಸ್ಥಾನ ಒಡೆದು ಮಸೀದಿ ಕಟ್ಟಿದ ಮುಸ್ಲಿಂಮರು ನೀವಾಗಿ ನೀವೆ ಕಿತ್ತು ಹಾಕಿ. ಇಲ್ಲವಾದ್ರೆ ರಾಮನ ಭಕ್ತರು ನಾವು ಮಸೀದಿ ಕಿತ್ತು ಹಾಕುತ್ತೇವೆ ಎಂದು ಹೇಳಿದರು.

Hindu Activists Convention On KS Eshwarappa Says Controversy statement from ram mandir

ಸಿದ್ದರಾಮಯ್ಯ ನಾವು ಜಾತ್ಯಾತೀತವಾದಿಗಳು ಅಂತಾರೆ. ನಾವು ನಿಮಗಿಂತ ಜಾತ್ಯಾತೀತವಾದಿಗಳು, ಹಿಂದೂ ಮುಸ್ಲಿಂ ಅನ್ಯೋನ್ಯಾಗಿರಬೇಕು ಎನ್ನುವವರು ನಾವು. ನೀವು ನಮಾಜ್ ಮಾಡ್ಕೊಳ್ಳಿ ನಾವು ಅದರ ಗೊಡವೆಗೆ ಬರಲ್ಲ. ಬಾಬರ್ ಕಟ್ಟಡ ಈ ದೇಶದ ಜನರಿಗೆ ನೀವು ಗುಲಾಮರಾಗಿದ್ದಿರಿ ಎಂದು ಹೇಳ್ತಿತ್ತು. ನೀವಾಗಿ ನೀವೆ ಮಥುರಾ ಹಾಗೂ ಕೃಷ್ಣಾದ ಮಸೀದಿ ತಗೆಯಿರಿ. ತೆಗೆಯದಿದ್ದರೆ ಕೊಲೆಗಳಾಗುತ್ತೊ ಇನ್ನೇನಾಗುತ್ತೊ ಗೊತ್ತಿಲ್ಲ. ಅಧಿಕಾರದಾಸೆಗೆ ನೆಹರು ಪಾಕ್ತಿಸ್ಥಾನವನ್ನು ಮಾಡಿದರು. ಈ ದೇಶದಲ್ಲಿ ಈಗಾಗಲೇ ತ್ರಿಬಲ್ ತಲಾಕ್ ರದ್ದಾಗಿದೆ. ಒಂದು ಗಂಡಿಗೆ ಒಂದು ಹೆಣ್ಣು ಎಂಬ ಸಂದೇಶ ಸಾರಲಾಗಿದೆ.

ನಮಗೆ ಒಂದು ಹೆಣ್ಣು ಒಂದು ಗಂಡು ಇತ್ತು ಆದರೆ ಮುಸ್ಲಿಂಮರಿಗೆ ಹಮ್ ಪಾಂಚ್, ಹಮ್ಕೊ ಪಚ್ಚಿಸ್ (ನಾವು ಐದು-ನಮಗೆ ಐವತ್ತು) ಎಂಬಂತಾಗಿತ್ತು. ಗೋವು ನಮ್ಮ ತಾಯಿ ಗೋಹತ್ಯೆ ನಿಷೇಧ ಮಾಡಿದ್ದಿವಿ. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ತಾಕತ್ತಿದ್ದರೆ ಹಿಂಪಡೆಯಿರಿ. ಅದನ್ನ ನಾವು ಹಿಂದೆ ತೆಗೆದುಕೊಳ್ಳಲು ಯಾವುದೇ ಕಾರಣಕ್ಕೂ ಬಿಡಲ್ಲ. ಅಲ್ಲಾ ಕಾಲ್ ಕೊಡ್ತಾನೆ ಅಂತ ಮತಾಂತರ ಮಾಡ್ತಾರೆ, ಅಲ್ಲಾ ಕಾಲ್ ಕೊಡಲ್ಲ ಕೈ ಕೊಡ್ತಾನೆ ಎಂದ ಈಶ್ವರಪ್ಪ ಕಿಡಿಕಾರಿದರು.

ಚುನಾವಣೆ ಬಂದ್ರೆ ರಾಮಮಂದಿರ ಬಿಜೆಪಿಯವರಿಗೆ ನೆನಪಾಗುತ್ತೆ ಎನ್ನುವ ಕಾಂಗ್ರೆಸ್ ವಾದದ ಕುರಿತು ಮಾತನಾಡಿ, ನಾವು ಈಗ ರಾಮಮಂದಿರ ಕಟ್ಟಿದ್ದೇವೆ. ಈಗ ರಾಮಮಂದಿರ ಕಟ್ಟಿದ್ದೇವೆ ಅಂತ ರಾಮರಾಜ್ಯ ಯಾವಾಗ ಆಗುತ್ತೆ ಅಂತ ಪ್ರಶ್ನೆ ಕೇಳ್ತಾರೆ. ದೇಶವನ್ನು ಒಡೆದು ಚಿತ್ರಮಾಡಿದರು ಹಿಂದೂಸ್ಥಾನ ಪಾಕಿಸ್ತಾನ ಅಂತ ಮಾಡಿದ್ರು, ನರೇಂದ್ರ ಮೋದಿಯವರು ನಮಗೆ ಪ್ರಧಾನಿ ಬೇಕು ಅಂತ ಹೇಳ್ತಾರೆ, ಇಲ್ಲಿಯ ಮುಸ್ಲಿಂಮರು ದನ ತಿಂದಹಾಗೆ ತಿಂದು ಪಾಕಿಸ್ತಾನಕ್ಕೆ ಜೈ ಅಂತಾರೆ. ಜೈ ಅನ್ನೋದಾದ್ರೆ ಹೊರಗೆ ಬಂದು ಜೈ ಅನ್ನಿ ನಿಮ್ಮನ್ನ ನಮ್ಮ ಕಾರ್ಯಕರ್ತರು ಬಿಡಲ್ಲ ಎಂದು ಕೆಎಸ್ ಈಶ್ವರಪ್ಪ ಹೇಳಿದರು.

Hindu Activists Convention On KS Eshwarappa Says Controversy statement from ram mandir

ದೆಹಲಿಗೆ ಹೋಗಿ ಗಾಂಧಿ ಸಮಾಧಿ ನೋಡಿ. ಅಲ್ಲಿ ಹೇ ಏಸು, ಹೇ ಅಲ್ಲಾ ಅಂತ ಬರೆದಿಲ್ಲ ಅಲ್ಲಿ ಹೇ ರಾಮ್ ಅಂತ ಬರೆದಿದೆ, ವರ್ಷಕ್ಕೊಂದು ಬಾರಿ ಶಾಸಕರನ್ನು ಟೂರ್ ಕಳಿಸ್ತಾರೆ. ಅಯೋದ್ಯೆಗೆ ಹೋದ್ವಿ ಕಾಶಿ ವಿಶ್ವನಾಥನಿಗೆ ಹೋದೆ. ಅರ್ಧ ಮಸೀದಿ ಇದೆ ವಿಶ್ವನಾಥನ ಮಂದಿರ ಒಡೆದು ಮಸೀದಿ ಇದೆ ಎಂದು ಕೈ ಎಂ ಎಲ್ ಎ ಹೇಳಿದ್ರು. ಹೊಸ ಗೋಡೆ ಇದೆ ಅದನ್ನ ನೀವು ಫೋಟೊ ಹೊಡೆದು ಅಸೆಂಬ್ಲಿಯಲ್ಲಿ ಮಾತಾಡಿ ಎಂದಿದ್ದರು. ನಾನ್ಯಾಕೆ ನೀವೇ ಮಾತಾಡಿ ಎಂದಿದ್ದಕ್ಕೆ ನನ್ನ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಇವೆ. ಅದಕ್ಕಾಗಿ ನಾನು ಮಾತಾಡಲ್ಲ ಎಂದಿದ್ದರು ಎಂದು ಹೇಳಿದರು.

ಸಮಾಜವಾದಿ ಎನ್ನುವ ಸಿದ್ದರಾಮಯ್ಯಗೆ ಅವರ ಥರದ ಮಗನೇ ಹುಟ್ಟಿದ್ದಾನೆ. ಹಿಂದೂರಾಷ್ಟ್ರ ಮಾಡುವ ಜನಗಳು ಎಂ ಎಲ್ ಎ ಆಗಬೇಕು, ಸ್ವಾಮೀ ವಿವೇಕಾನಂದರು ಹೊರ ದೇಶಕ್ಕೆ ಹೋದಾಗ ಅವರನ್ನ ಮೂಸಿ ನೋಡಿರಲಿಲ್ಲ. ನಂತರ ಅವರ ಮಾತಿನಿಂದ ಎಲ್ಲರೂ ಅವರನ್ನು ಗೌರವದಿಂದ ಕಾಣಲು ಶುರುಮಾಡಿದರು, ಅಂತಹ ಧರ್ಮ ಅಂತಹ ಸಂಸ್ಕೃತಿ ನಮ್ಮದು ಎಂದು ಕೆ ಎಸ್ ಈಶ್ವರಪ್ಪ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+