ಹಿಜಾಬ್ ವಿವಾದ: ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದು ಹೀಗೆ
ಬೆಂಗಳೂರು, ಫೆಬ್ರವರಿ 08: ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್ ಹಾಗೂ ಕೇಸರಿ ಶಲ್ಯ ವಿವಾದವು ಹಿಂಸಾಚಾರಕ್ಕೆ ತಿರುಗಿದೆ. ಈ ನಡುವೆ ಸರ್ಕಾರ ರಾಜ್ಯದ ಎಲ್ಲ ಪದವಿ ಕಾಲೇಜುಗಳಿಗೆ ಮೂರು ದಿನಗಳ ಕಾಲ ರಜೆಯನ್ನು ಘೋಷಣೆ ಮಾಡಿದೆ. ಒಂದೆಡೆ ಹೈಕೋರ್ಟ್‌ನಲ್ಲಿ ಈ ಹಿಜಾಬ್ ಬಗ್ಗೆ ವಿಚಾರಣೆ ನಾಳೆಗೆ ಮುಂದೂಡಲಾಗಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹಿಜಾಬ್ ಪರ, ವಿರೋಧ ಚರ್ಚೆ ನಡೆಯುತ್ತಿದೆ.
ಕೂನಲ್ಲಿ #ಹಿಜಾಬ್_ವಿವಾದ ಟ್ರೆಂಡ್‌ನಲ್ಲಿ ಇದ್ದರೆ, ಟ್ವಿಟ್ಟರ್‌ನಲ್ಲಿ #saffronshawls, #Hijab, #HijabRow, #JaiShriRam, #HijabIsFundamentalRight, Burqa ಮೊದಲಾದ ಟ್ಯಾಗ್‌ಗಳು ಟ್ರೆಂಡಿಗ್‌ನಲ್ಲಿ ಇದೆ. ಕೆಲವು ನೆಟ್ಟಿಗರು ಹಿಜಾಬ್ ಪರವಾಗಿ ಟ್ವೀಟ್, ಕೂ ಮಾಡಿದರೆ, ಕೆಲವರು ಹಿಜಾಬ್ ವಿರುದ್ಧವಾಗಿ ಕೇಸರಿ ಶಲ್ಯ ಪರವಾಗಿ ಟ್ವೀಟ್, ಕೂ ಮಾಡಿದ್ದಾರೆ. ಇನ್ನೊಂದೆಡೆ ದೇಶದಲ್ಲಿ ಈ ವಿಚಾರ ಚರ್ಚೆಗೆ ಬರಬಾರದಿತ್ತು. ನಮ್ಮ ದೇಶ ಸೌಹಾರ್ಧ ದೇಶ ಎಂದು ಕೆಲವರು ಹೇಳುತ್ತಿದ್ದಾರೆ.
ಹಿಜಾಬ್ ವಿವಾದ ಸದ್ಯ ನ್ಯಾಯಾಲಯದ ಮೆಟ್ಟಿಲೇರಿದ್ದು, ಕೋರ್ಟು ತೀರ್ಪು ಏನೇ ಬಂದರು ಅದನ್ನು ಸ್ವಾಗತಿಸಬೇಕು ಎನ್ನುವ ಆಶಯ ಅನೇಕರಿಂದ ವ್ಯಕ್ತವಾಗಿದೆ. ಹಾಗಾದರೆ ಸಾಮಾಜಿಕ ಜಾಲತಾಣದಲ್ಲಿ ಏನೆಲ್ಲಾ ಚರ್ಚೆ ನಡೆಯುತ್ತಿದೆ ಎಂದು ತಿಳಿಯೋಣ ಮುಂದೆ ಓದಿ...

ಹಿಜಾಬ್ ವಿವಾದ ಕೂನಲ್ಲಿ ಹೇಗಿದೆ ಚರ್ಚೆ?
"ಹಿಜಾಬ್ ಧರಿಸುವುದರ ಬಗ್ಗೆ ತಕರಾರು ಮಾಡುತ್ತಿರುವುದು ಸರಿಯಲ್ಲ. ಏಕೆಂದರೆ ಸಾಂಪ್ರದಾಯಕವಾಗಿ ಮುಸ್ಲಿಂ ಸಮುದಾಯದವರು ಹೆಣ್ಣುಮಕ್ಕಳನ್ನು ಬುರ್ಖಾ ಧರಿಸದೆ ಹೊರಗೆ ಹೋಗಲು ಬಿಡುವುದಿಲ್ಲ. ಕೆಲವರ್ಷಗಳಿಂದ ಮುಸ್ಲಿಂ ಹೆಣ್ಣುಮಕ್ಕಳಿಗೆ ಅವರ ಮನೆಯಲ್ಲಿ ಸ್ವಲ್ಪ ಸ್ವಾತಂತ್ರ ಕೊಡುತ್ತಿದ್ದಾರೆ. ಆದರೆ ಅನೇಕರು ಇನ್ನೂ ಸಾಂಪ್ರದಾಯಕವಾಗಿ ಉಳಿದಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವುದೇ ಮುಖ್ಯ ಉದ್ದೇಶ ಆಗಿರುವಾಗ ಈ ರೀತಿ ತಕರಾರುಗಳು ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ," ಎಂದು ಚಂದನ ಗೌಡ ಎನ್ನುವರು ಕೂ ಮಾಡಿದ್ದಾರೆ.
"ನಮ್ಮ ಭಾರತ ಪ್ರಜಾ ಪ್ರಭುತ್ವ ರಾಷ್ಟ್ರ . ಪ್ರಜೆಗಳ ನಿರ್ಣಯವೇ ಅಂತಿಮ. ನನ್ನ ಪ್ರಕಾರ ಮುಸ್ಲಿಮರು ಇಜಾಬ್ ದರಿಸಲಿ, ಆದರೆ ಅವರವರ ಸಂಪ್ರದಾಯ ಅವರವರ ಚೌಕ್ಕಟಿನಲ್ಲಿ ಇರಲಿ. ಶಾಲಾ ಕಾಲೇಜು ಇದೆಲ್ಲಾ ವಿದ್ಯಾಭ್ಯಾಸ ಕಲಿಯುವ ಸ್ಥಳ . ಇಲ್ಲಿ ಎಲ್ಲರಿಗೂ ಒಂದೇ ನಿಯಮ ಇರಬೇಕು ಎಂಬುದು ನನ್ನ ಅಭಿಪ್ರಾಯ .ಅವರವರ ಸಂಪ್ರದಾಯ ಅವರವರ ಮನೆಯಲ್ಲಿ ಇರಲಿ ಹೊರ ಸಮಾಜದಲ್ಲಿ ಅಲ್ಲ. ಯಾವ ಸಂಪ್ರದಾಯಕ್ಕೂ ಅಡ್ಡಿ ಬೇಡ , ಅವರು ಬೇರೆಯವರಂತೆ ಎಲ್ಲ ಕ್ಷೇತ್ರದಲ್ಲೂ ಸಮಾನತೆ ಅಷ್ಟೇ ಮುಖ್ಯ," ಎಂದು ಮೇಘನಾ ಎನ್ನುವರು ಹೇಳಿದ್ದಾರೆ.
"ಕೋರ್ಟು ತೀರ್ಪಿಗೆ ಕಾಯುತ್ತಿದ್ದೇನೆ, ನಮ್ಮ ಅಭಿಪ್ರಾಯ ಭಾವನಾತ್ಮಕವಾಗಿರಬಹುದು, ಅದರಲ್ಲಿ ಕಿರುಬೆರಳಿನಷ್ಟು ಸತ್ಯವಿರಬಹುದು ಆದ್ರೆ ಸಂವಿಧಾನದ ಘಮಕ್ಕೆ ಯಾವುದೇ ಗುಡಿಯ ಉದ್ದಿನಕಡ್ಡಿಯ ಅಥವಾ ಮುಸ್ಲಿಂಮನ ಅತ್ತರಿನ ಘಮ ಅಂಟಿರುವಿದಿಲ್ಲ. ನಮ್ಮ ಅಭಿಪ್ರಾಯ ಈ ಕೋರ್ಟ್ ನಿಂದ ಮತ್ತೊಂದು ಕೋರ್ಟಿಗೆ ಹಾರಲಿಕ್ಕೆ ಸಹಾಯವಾಗಬಹುದೇ ಹೊರತು ಅದು ನಿರ್ಣಾಯಕವಂತೂ ಅಲ್ಲ," ಎಂದು ಸುನೀಲ್ ಅಭಿಪ್ರಾಯಪಟ್ಟಿದ್ದಾರೆ.
Koo App#ಹಿಜಾಬ್_ವಿವಾದ ಹಿಜಾಬ್ ಧರಿಸುವುದರ ಬಗ್ಗೆ ತಕರಾರು ಮಾಡುತ್ತಿರುವುದು ಸರಿಯಲ್ಲ. ಏಕೆಂದರೆ ಸಾಂಪ್ರದಾಯಕವಾಗಿ ಮುಸ್ಲಿಂ ಸಮುದಾಯದವರು ಹೆಣ್ಣುಮಕ್ಕಳನ್ನು ಬುರ್ಖಾ ಧರಿಸದೆ ಹೊರಗೆ ಹೋಗಲು ಬಿಡುವುದಿಲ್ಲ. ಕೆಲವರ್ಷಗಳಿಂದ ಮುಸ್ಲಿಂ ಹೆಣ್ಣುಮಕ್ಕಳಿಗೆ ಅವರ ಮನೆಯಲ್ಲಿ ಸ್ವಲ್ಪ ಸ್ವಾತಂತ್ರ ಕೊಡುತ್ತಿದ್ದಾರೆ. ಆದರೆ ಅನೇಕರು ಇನ್ನೂ ಸಾಂಪ್ರದಾಯಕವಾಗಿ ಉಳಿದಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವುದೇ ಮುಖ್ಯ ಉದ್ದೇಶ ಆಗಿರುವಾಗ ಈ ರೀತಿ ತಕರಾರುಗಳು ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ. - Chandana Gowda (@chandana_somashekar) 8 Feb 2022
ಹಿಜಾಬ್ ವಿವಾದ: ಟ್ವಿಟ್ಟರ್‌ನಲ್ಲಿ ಏನೆಲ್ಲಾ ಟ್ರೆಂಡ್ ನಡೆಯುತ್ತಿದೆ?
ಟ್ವಿಟ್ಟರ್‌ನಲ್ಲಿ ಸದ್ಯ #HijabRow ಎಂಬುವುದು ಟಾಪ್ ಟ್ರೆಂಡಿಂಗ್‌ನಲ್ಲಿ ಒದೆ. ಇನ್ನುಳಿದಂತೆ ಜನರು ಹೆಚ್ಚಾಗಿ #saffronshawls, #Hijab, #HijabRow, #JaiShriRam, #HijabIsFundamentalRight, Burqa ಮೊದಲಾದ ಟ್ಯಾಗ್‌ಗಳನ್ನು ಕೂಡಾ ಬಳಸುತ್ತಿದ್ದಾರೆ.
Emotionless, valueless, brainless and cruel.
— Sonal Takkar (@SonalTakkar) February 8, 2022
Is this what lord Rama has taught us?
Shamelessly mocking a girl for her hijab and burkha. This is the new Low. #HijabRow
"ಭಾವನೆಯಿಲ್ಲದ, ಮೌಲ್ಯಹೀನ, ಬುದ್ಧಿಹೀನ ಮತ್ತು ಕ್ರೂರವಾದ ನಡೆಯಿದು. ಶ್ರೀರಾಮನು ನಮಗೆ ಕಲಿಸಿದ್ದು ಇದನ್ನೇ? ನಾಚಿಕೆಯಿಲ್ಲದೆ ಆಕೆಯ ಹಿಜಾಬ್ ಮತ್ತು ಬುರ್ಖಾ ವಿಚಾರದಲ್ಲಿ ಹುಡುಗಿಯನ್ನು ಅಪಹಾಸ್ಯ ಮಾಡುವುದು. ಇದು ಹೊಸ ವಿಚಾರ," ಎಂದು ಸೋನಲ್ ಟಕ್ಕರ್ ಎಂಬವರು ಟ್ವೀಟ್ ಮಾಡಿದ್ದಾರೆ. ಇನ್ನೊಂದೆಡೆ, "ಹಿಜಾಬ್ ಕೂಗು ಜೋರಾದ ಬಳಿಕವೇ ಕೇಸರಿ ಶಾಲುಗಳನ್ನು ಹಾಕಲು ವಿದ್ಯಾರ್ಥಿಗಳು ಆರಂಭ ಮಾಡಿದ್ದಾರೆ. ಶಿಕ್ಷಣ ಸಂಸ್ಥೆಗಳು ಎಲ್ಲರಿಗೂ ಒಂದೇ. ಅವರು ತಮ್ಮ ಮೂಲಭೂತ ಹಕ್ಕುಗಳನ್ನು ಪಾಲಿಸುವುದಾದರೆ ಮದ್ರಾಸಕ್ಕೆ ಹೋಗಬಹುದು," ಎಂದು ಕೆಲವು ಬಲಪಂಥೀಯ ಪರ ಸಂಘಟನೆಗಳ ಟ್ವೀಟ್‌ಗಳು ಹೇಳಿದೆ. (ಒನ್‌ಇಂಡಿಯಾ ಸುದ್ದಿ)
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications