Government Job: ಅನುಕಂಪದ ಆಧಾರದ ಮೇಲೆ ಸರ್ಕಾರಿ ಹುದ್ದೆ ಕುರಿತು ಹೈಕೊರ್ಟ್ ಮಹತ್ವದ ಆದೇಶ
Government Job: ಸರ್ಕಾರಿ ಉದ್ಯೋಗ ಪಡೆಯಬೇಕೆಂಬುದು ಬಹುತೇಕರ ಕನಸಾಗಿರುತ್ತದೆ. ಇದೀಗ ಭಾರೀ ಸ್ಪರ್ಧೆ ಏರ್ಪಟ್ಟಿದ್ದು, ಇದನ್ನು ಗಿಟ್ಟಿಸಿಕೊಳ್ಳುವುದೇ ದೊಡ್ಡ ಸವಾಲಗಿಬಿಟ್ಟಿದೆ. ಮೊದಲೆಲ್ಲ ಸರ್ಕಾರಿ ನೌಕರ ಮೃತಪಟ್ಟರೆ, ಪತ್ನಿ ಅಥವಾ ಮಕ್ಕಳಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲಾಗುತ್ತಿತ್ತು. ಆದರೆ, ಪತ್ನಿಯೂ ಮೃತಪಟ್ಟು, ಮಕ್ಕಳಿಲ್ಲದಿದ್ದರೆ ಹುದ್ದೆಯನ್ನು ಯಾರಿಗೆ ನೀಡಲಾಗುತ್ತದೆ ಎಂಬ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಮೊದಲೆಲ್ಲ ಪತಿ ಸರ್ಕಾರಿ ಹುದ್ದೆಯಲ್ಲಿ ಇರುವಾಗಲೇ ಮೃತಪಟ್ಟರೆ, ಆತನ ಪತ್ನಿ ಅಥವಾ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗವನ್ನು ನೀಡಲಾಗುತ್ತದೆ ಎನ್ನವ ನಿಯಮವಿತ್ತು. ಒಂದು ವೇಳೆ ಮಕ್ಕಳು ಇಲ್ಲದಿದ್ದರೆ, ಆ ಹುದ್ದೆಯನ್ನು ಯಾರಿಗೆ ನೀಡಲಾಗುತ್ತದೆ ಎಂಬ ಮಹತ್ವದ ಆದೇಶವನ್ನು ಹೈಕೋರ್ಡ್ ಹೊರಡಿಸಿದೆ.

ಸರ್ಕಾರಿ ನೌಕರ ಮರಣ ಹೊಂದುವ ಮುಂಚೆಯೇ ಆತನ ಪತ್ನಿ ಮೃತಪಟ್ಟಿದ್ದರೆ, ಆಕೆಗೆ ಮಕ್ಕಳಿಲ್ಲದಿದ್ದರೆ ನೌಕರನ ಸಹೋದರರು ಅನುಕಂಪದ ಆಧಾರದ ಉದ್ಯೋಗ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಹಾಗಾದ್ರೆ ಹೈಕೋರ್ಟ್ ಈ ಮಹತ್ವದ ಆದೇಶವನ್ನು ಹೊರಡಿಸಲು ಕಾರಣ ಏನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಸಾರಿಗೆ ವಿಭಾಗಗ ಕೆಕೆಆರ್‌ಟಿಸಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೀರೇಶ್ ಮಂಟಪ್ಪ ಲೋಳಸರ ತಾಯಿ ಮಂಟವ್ವ ಹಾಗೂ ಸಹೋದರ ಸಂಗಣ್ಣ ಸಲ್ಲಿಸಿದ್ದ ಅರ್ಜಿಯನ್ನ ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಮೃತ ಉದ್ಯೋಗಿಯ ಕುಟುಂಬವನ್ನು ನೋಡಿಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳುವುದು ಹಾಗೂ ಆತನ ಸಾವಿನಿಂದ ಉಂಟಾಗುವ ತುರ್ತು ಪರಿಸ್ಥಿತಿಗಳು ಕುಟುಂಬಕ್ಕೆ ಆರ್ಥಿಕ ಹೊರೆ ಆಗಬಾರದು ಎನ್ನುವುದೇ ಅನುಕಂಪದ ಆಧಾರದ ನೇಮಕಾತಿಯ ಉದ್ದೇಶವಾಗಿದೆ. ಈ ಪ್ರಕರಣದಲ್ಲಿ ವೀರೇಶ್ ಅವರ ಸಂಗಾತಿಯಾದ ಸುನಂದಾ ಅವರು 2022ರ ಏಪ್ರಿಲ್ 9ರಂದು ಪತಿಗೂ ಮೊದಲೇ ನಿಧನರಾಗಿದ್ದರು.
ಜೊತೆಗೆ ಅನುಕಂಪದ ನೇಮಕಾತಿಯ ಹಕ್ಕು ಮಂಡಿಸಲು ಅವರಿಗೆ ಯಾರೂ ಮಕ್ಕಳಿಲ್ಲ. ಸಂಗಾತಿ ಮರಣದ ನಂತರ, ತಾಯಿ ಮಂಟವ್ವ ಹಾಗೂ ಸಹೋದರ ಸಂಗಣ್ಣನ ಜೊತೆ ವಾಸಿಸುತ್ತಿದ್ದ ವೀರೇಶ್, ಅವರಿಬ್ಬರನ್ನೂ ನೋಡಿಕೊಳ್ಳುತ್ತಿದ್ದರು. ಇದೀಗ, ವೀರೇಶ್ ಮರಣದ ನಂತರ ತಾಯಿಯನ್ನು ನೋಡಿಕೊಳ್ಳುತ್ತಿರುವ ಸಂಗಣ್ಣನಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ಒದಗಿಸುವುದು ಸೂಕ್ತ ಆಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಮೃತ ವೀರೇಶ್ ಸಹೋದರನಾದ ಸಂಗಣ್ಣ ಅವರ ಮನವಿ ಪರಿಗಣಿಸಿ, 12 ವಾರಗಳ ಒಳಗೆ ಅವರ ಅರ್ಹತೆಗೆ ಅನುಗುಣವಾಗಿ ಸೂಕ್ತ ಹುದ್ದೆಗೆ ಅನುಕಂಪದ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕೆಂದು ಎಂದು ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗದ ವಿಭಾಗೀಯ ಅಧೀಕಾರಿಗಳಿಗೆ ನಿರ್ದೇಶಿಸಿದೆ. ಒಂದು ವೇಳೆ ಸಂಗಣ್ಣ ಅವರು ತಾಯಿಯನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ಈ ಆದೇಶ ರದ್ದು ಕೋರಿ ಅರ್ಜಿ ಸಲ್ಲಿಕೆ ಮಾಡಲು ಆಕೆಗೆ ಅಧಿಕಾರ ಇರುತ್ತದ ಎಂದು ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೀರೇಶ್ 2023ರ ಸೆಪ್ಟೆಂಬರ್ 21ರಂದು ಮೃತಪಟ್ಟಿದ್ದರು. ಅವರ ಸಾವಿಗೂ ಮುನ್ನ ಪತ್ನಿ ಸುನಂದಾ 2022ರ ಏಪ್ರಿಲ್ 9ರಂದು ಮೃತಪಟ್ಟಿದ್ದರು. ಆದರೆ, ಈ ದಂಪತಿಗೆ ಯಾರೂ ಮಕ್ಕಳು ಇರಲಿಲ್ಲ. ವೀರೇಶ್ ಮರಣದ ಬಳಿಕ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ತಾಯಿ ಹಾಗೂ ಸಹೋದರ ಸಲ್ಲಿಸಿದ್ದ ಅರ್ಜಿಯನ್ನು ನಿಗಮ 2024ರ ನವೆಂಬರ್ 24ರಂದು ತಿರಸ್ಕರಿಸಿ, ಹಿಂಬರಹ ನೀಡಿತ್ತು. ಇದನ್ನು ಪ್ರಶ್ನಿಸಿ ಮಂಟವ್ವ ಹಾಗೂ ಸಂಗಣ್ಣ ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಗೆ ಆಕ್ಷೇಪಿಸಿದ್ದ ಕೆಕೆಆರ್‌ಟಿಸಿ ಪರ ವಕೀಲರು, ರಸ್ತೆ ಸಾರಿಗೆ ಸಂಸ್ಥೆಯ ನೀತಿಯ ಪ್ರಕಾರ, ಮೃತರು ವಿವಾಹಿತರಾಗಿದ್ದರೆ, ಅವರ ಪತ್ನಿ ಮತ್ತು ಮಕ್ಕಳನ್ನು ಹೊರತುಪಡಿಸಿ ಬೇರೆ ಯಾರಿಗೂ ಅನುಕಂಪದ ಹುದ್ದೆ ನೀಡಲಾಗದು ಎಂದು ವಾದ ಮಂಡನೆ ಮಡಿದ್ದರು. ಈ ವಾದವನ್ನು ಇದೀಗ ಹೈಕೋರ್ಟ್ ತಳ್ಳಿಹಾಕಿದ್ದು, ಮೃತ ಸರ್ಕಾರಿ ನೌಕರನಿಗೆ ಪತ್ನಿ, ಮಕ್ಕಳು ಇಲ್ಲದಿದ್ದರೆ ಹುದ್ದೆಯನ್ನು ಅನುಕಂಪದ ಆಧಾರದ ಮೇಲೆ ಸಹೋದರನಿಗೂ ನೀಡಲಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಅದು ಹುದ್ದೆ ಗಿಟ್ಟಿಸಿಕೊಂಡವ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಂಡರೆ ಮಾತ್ರ ಅಂತಲೂ ಉಲ್ಲೇಖ ಮಾಡಿದೆ.












Click it and Unblock the Notifications