Cabinet Reshuffle: ಸಂಪುಟ ಪುನಾರಚನೆಗೆ ರಾಹುಲ್ ಗ್ರೀನ್ ಸಿಗ್ನಲ್: ಯಾರು ಔಟ್? ಯಾರು ಇನ್? ಇಲ್ಲಿದೆ ಸಂಭಾವ್ಯ ಪಟ್ಟಿ
ಬೆಂಗಳೂರು, ನವೆಂಬರ್ 16: ರಾಜ್ಯ ಕಾಂಗ್ರೆಸ್ ಪಾಳೆಯಲ್ಲಿ ಭಾರೀ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ. ಬಿಹಾರ ಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಹಲವು ಬದಲಾವಣೆಗಳು ಆಗುತ್ತೆ ಎಂದೆಲ್ಲ ಹೇಳಲಾಗುತ್ತಿತ್ತು, ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆದಿದ್ದು, ಇದೀಗ ಬಿಹಾರ ಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಹಾರಿದ್ದು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಾಲ ಪೂರೈಸಿದ್ದು, ಬಹು ದಿನಗಳಿಂದ ಕೈ ಪಾಳಯದಲ್ಲಿ ರಾಜ್ಯ ಸಚಿವ ಸಂಪುಟ ಪುನಾರಚನೆ ಊಹಾಪೋಹಗಳು ಕೇಳಿ ಬರುತ್ತಿದ್ದು, ಕೈ ಪಾಳಯದಲ್ಲಿನ ಭಿನ್ನಾಭಿಪ್ರಾಯ ಹಾಗೂ ಅಸಮಾಧಾನಿತ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಕೊನೆಗೂ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಪದೇ ಪದೇ ಸಚಿವ ಸಂಪುಟ ಪುನಾರಚನೆ ಕುರಿತು ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರನ್ನ ಭೇಟಿ ಮಾಡುತ್ತಿದ್ದರು. ಆದರೆ, ಈ ಬಾರೀ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೆಹಲಿ ಭೇಟಿ ಸಂಪೂರ್ಣ ಯಶಸ್ವಿಯಾಗಿದ್ದು, ಸಂಪುಟ ಸರ್ಜರಿಗೆ ಕಾಂಗ್ರೆಸ್ ವರಿಷ್ಠರು ಅಸ್ತು ಎಂದಿದ್ದಾರೆ. ಒಂದು ಕಡೇ ಸಚಿವ ಸಂಪುಟ ಪುನಾರಚನೆ ವಿಚಾರ ಕೆಲ ಶಾಸಕರಿಗೆ ಸಂತಸವನ್ನ ತಂದಿದ್ದರೇ ಇನ್ನೂ ಇದು ಹಾಲಿ ಸಚಿವರಿಗೆ ನಡುಕ ಹುಟ್ಟಿಸಿದೆ.
ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಚುರುಕು ಮುಟ್ಟಿಸಲು, ಕೆಲ ಸಚಿವರ ಕಾರ್ಯವೈಖರಿಯ ಬಗ್ಗೆ ಇದ್ದ ಅಸಮಾಧಾನವನ್ನು ಹೋಗಲಾಡಿಸಲು ಸಂಪುಟ ಪುನಾರಚನೆ ಅನಿವಾರ್ಯ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಾದಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಸಮ್ಮತಿ ಸೂಚಿಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ಸಿಕ್ಕ ಬೆನಲ್ಲೇ ಈಗ ಸಚಿವ ಆಕಾಂಕ್ಷಿಗಳ ಲಾಬಿ ಗರಿಗೆದರಿದೆ.
ಇನ್ನೂ ಎರಡೂವರೆ ವರ್ಷದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಸಚಿವ ಸಂಪುಟ ಸರ್ಜರಿಗೆ ಕೈ ಹಾಕಿದ್ದು, ಸಚಿವ ಸಂಪುಟ ಸಣ್ಣಪುಟ್ಟ ಬದಲಾವಣೆಯಲ್ಲ, ಇದೊಂದು ಮೇಜರ್ ಸರ್ಜರಿಯಾಗಿದೆ. ಕಳಪೆ ಕಾರ್ಯಕ್ಷಮತೆ, ವಿವಾದಗಳಲ್ಲಿ ಸಿಲುಕಿದವರು ಹಾಗೂ ಹಿರಿಯ ಸಚಿವರನ್ನು ಪಟ್ಟಿಯಿಂದ ತೆಗೆದು, ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಮಾಸ್ಟರ್ ಪ್ಲಾನ್ ಕೂಡ ಹೈಕಮಾಂಡ್ ಮುಂದಿದೆ. ಹೀಗಾಗಿ ಕನಿಷ್ಠ 10 ರಿಂದ ಗರಿಷ್ಠ 15 ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೇ ಹೊಸ ಮುಖಗಳಿಗೆ, ಯುವಕರಿಗೆ ಅವಕಾಶ ಕಲ್ಪಿಸುವುದು ಹೈಕಮಾಂಡ್‌ನ ಆಶಯವಾಗಿದೆ.
ಸಂಪುಟದಿಂದ ಯಾರೆಲ್ಲ ಔಟ್?
ದಿನೇಶ್ ಗುಂಡೂರಾವ್- ಆರೋಗ್ಯ ಸಚಿವ
ಎನ್.ಎಸ್.ಬೋಸರಾಜು- ಸಣ್ಣ ನೀರಾವರಿ ವಿಜ್ಞಾನ ತಂತ್ರಜ್ಞಾನ
ಡಿ.ಸುಧಾಕರ್- ಯೋಜನೆ ಮತ್ತು ಸಾಂಖ್ಯಿಕ
ರಹೀಂಖಾನ್- ಪೌರಾಡಳಿತ
ಶಿವಾನಂದ ಪಾಟೀಲ್- ಸಕ್ಕರೆ ಮತ್ತು ಜವಳಿ
ಕೆ.ಹೆಚ್.ಮುನಿಯಪ್ಪ- ಆಹಾರ ಮತ್ತು ನಾಗರೀಕ ಸರಬರಾಜು
ಹೆಚ್.ಸಿ.ಮಹದೇವಪ್ಪ- ಸಮಾಜ ಕಲ್ಯಾಣ
ಶರಣಬಸ್ಪ ದರ್ಶನಾಪುರ್- ಸಣ್ಣ ಕೈಗಾರಿಕೆ
ಡಾ.ಎಂ.ಸಿ.ಸುಧಾಕರ- ಉನ್ನತ ಶಿಕ್ಷಣ ಸಚಿವ
ಎಸ್.ಎಸ್.ಮಲ್ಲಿಕಾರ್ಜುನ- ತೋಟಗಾರಿಕೆ ಮತ್ತ ಗಣಿ
ಆರ್.ಬಿ.ತಿಮ್ಮಾಪುರ್- ಅಬಕಾರಿ
ಕೆ.ವೆಂಕಟೇಶ್- ಪಶು ಸಂಗೋಪನೆ
ಡಿ.ಸುಧಾಕರ್- ಯೋಜನೆ ಮತ್ತು ಸಾಂಖ್ಯಿಕ
ಸಿದ್ಧರಾಮಯ್ಯ ಸಂಪುಟಕ್ಕೆ ಯಾರೆಲ್ಲ ಇನ್?
ಬಿ.ಕೆ.ಹರಿಪ್ರಸಾದ್
ಯು.ಟಿ.ಖಾದರ್
ಕೆ.ಎನ್.ರಾಜಣ್ಣ
ಆರ್.ವಿ.ದೇಶಪಾಂಡೆ
ಎಂ.ಕೃಷ್ಣಪ್ಪ
ತನ್ವೀರ್‌ಸೇಠ್
ಸಲೀಂ ಅಹಮದ್
ರಿಜ್ವಾನ್ ಅರ್ಷದ್
ಮಾಗಡಿ ಬಾಲಕೃಷ್ಣ
ರೂಪಕಲಾ ಶಶಿಧರ್
ಗೋಪಾಲಕೃಷ್ಣ ಬೇಳೂರು












Click it and Unblock the Notifications