ತುಮಕೂರು ತಲೆಗಳಿಗೆ ಇವತ್ತಿನಿಂದ ಶಿರಸ್ತ್ರಾಣ ಕಡ್ಡಾಯ

ತುಮಕೂರು, ಜೂ.15: ಸಿಟಿ ಮುನ್ಸಿಪಾಲಿಟಿಯಿಂದ ಕಾರ್ಪೊರೇಷನ್ ದರ್ಜೆಗೇರಿದ ತುಮಕೂರಿನಲ್ಲಿ ಇನ್ಮುಂದೆ ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಲಿದೆ. ಜೂ.15 ರಿಂದ ಈ ನಿಯಮ ಜಾರಿಗೊಳಿಸಲಾಗಿದೆ.

ಕಾರ್ಪೋರೇಷನ್ ದರ್ಜೆ ನಗರಗಳಲ್ಲಿನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ 2005ರಿಂದಲೇ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಬೆಳಗಾವಿ, ಶಿವಮೊಗ್ಗ ಹಾಗೂ ವಿಜಯಪುರ ನಗರಗಳಲ್ಲಿ ಈ ನಿಯಮ ಜಾರಿಯಲ್ಲಿದೆ. [ತುಮಕೂರು : ಸೀಟ್‌ಬೆಲ್ಟ್ ಹಾಕಿಕೊಳ್ಳಿ, ಇಲ್ಲ ದಂಡ ಕಟ್ಟಿ ]

ತುಮಕೂರಿನಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವಂತಿಲ್ಲ. ಒಂದು ವೇಳೆ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸಿದರೆ 100 ರೂ. ದಂಡ ಕಟ್ಟಬೇಕಾಗುತ್ತದೆ. ತುಮಕೂರು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿರುವ ಸಂದರ್ಭದಲ್ಲಿ ವಾಹನ ದಟ್ಟಣೆ ಅಧಿಕವಾಗಿರುವುದು ಮತ್ತು ಬೈಕ್ ಅಪಘಾತದಲ್ಲಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ ನಗರದಲ್ಲಿ ಪೊಲೀಸ್ ಇಲಾಖೆ ಸಂಚಾರ ವಿಭಾಗ ಹೆಲ್ಮೆಟ್ ಕಡ್ಡಾಯ ಗೊಳಿಸಿದೆ.

Helmets to be mandatory for two-wheeler in Tumakuru

ತುಮಕೂರು ನಗರದಲ್ಲಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರದಿಂದಲೇ ಹೆಲ್ಮೆಟ್ ಮಾರಾಟ ಜೋರಾಗಿ ನಡೆದಿದೆ. ಐಎಸ್ ಐ ಮಾರ್ಕ್ ಹುಡುಕುವವರು, ಕಡಿಮೆ ಬೆಲೆಗೆ ಸಿಕ್ಕರೆ ಸಾಕು ಎನ್ನುವವರು ಕಂಡು ಬಂದಿದ್ದಾರೆ. [ತುಮಕೂರು : ಬ್ಯಾಂಕ್‌ನಲ್ಲಿ ಕೆಲಸ ಖಾಲಿ ಇದೆ]

ಬೈಕ್‌ಗಳ ಸಂಖ್ಯೆ ಹೆಚ್ಚಳ: ನಗರದಲ್ಲಿ ಬೈಕ್‌ಹೊಂದಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇತ್ತೀಚಿನ ಮಾಹಿತಿ ಪ್ರಕಾರ 50ರಿಂದ 60 ಸಾವಿರಕ್ಕೂ ಹೆಚ್ಚು ಬೈಕ್‌ಗಳು ನಗರದಲ್ಲಿವೆ. ತುಮಕೂರು ಶೈಕ್ಷಣಿಕವಾಗಿ ಪ್ರಗತಿಯಾಗುತ್ತಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ಭಾಗಗಳಿಂದ ಶಿಕ್ಷಣ ಪಡೆಯಲು ತುಮಕೂರಿಗೆ ಆಗಮಿಸುವವರ ಸಂಖ್ಯೆಯೂ ಹೆಚ್ಚಾಗಿದ್ದು, ಇದರಿಂದ ಬೈಕ್ ಸವಾರರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗತೊಡಗಿದೆ.

ತುಮಕೂರು ಪ್ರಾದೇಶಿಕ ಸಾರಿಗೆ ವಿಭಾಗ ಅಸ್ತಿತ್ವಕ್ಕೆ ಬಂದಾಗಿನಿಂದ ಈವರೆಗೆ ಮೊಪೆಡ್ಸ್ ಸ್ಕೂಟರ್ಸ್‌, ಮೋಟಾರ್ ಸೈಕಲ್ ಸೇರಿ 3,04,424 ವಾಹನಗಳು ನೋಂದಣಿಯಾಗಿದೆ. ಇದರಲ್ಲಿ ಶೇ.25ಕ್ಕೂಅಧಿಕ ವಾಹನಗಳು ತುಮಕೂರು ನಗರ ವಾಸಿಗಳಿಗೆ ಸೇರಿದೆಯೆಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರು ಮೃತಪಟ್ಟರೆ ಅದು ತಲೆಗೆ ಬೀಳುವ ಬಲವಾದ ಹೊಡೆತದಿಂದಲೇ ಎಂಬುದು ವೈದ್ಯಕೀಯ ವಾಗಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ತಲೆಗೆ ಬೀಳುವ ಬಲವಾದ ಪೆಟ್ಟಿನಿಂದ ರಕ್ಷಣೆ ಪಡೆದು ಪ್ರಾಣ ಉಳಿಸಿಕೊಳ್ಳಲು ಐಎಸ್‌ಐ ದೃಢೀಕೃತ ಹೆಲ್ಮೆಟ್ ಧರಿಸುವುದು ಅನಿವಾರ್ಯ ಎಂದು ಪೊಲೀಸ್ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+